ಕೇವಲ ಹಣಕ್ಕಾಗಿ ಇಷ್ಟೊಂದು ಕೀಳುಮಟ್ಟಕ್ಕಿಳಿಯಬೇಕೇ? ನಟಿ ಜಾಹ್ನವಿ ಕಪೂರ್ ಸಖತ್ ಗರಂ, ಸಿಕ್ಕಾಪಟ್ಟೆ ಕ್ಲಾಸ್!

Published : Apr 06, 2026, 03:11 PM IST
Janhvi Kapoor

ಸಾರಾಂಶ

ಒಬ್ಬ ನಟಿಯಾಗಿ ಗ್ಲಾಮರ್ ಪ್ರಪಂಚದಲ್ಲಿರುವುದು ಅನಿವಾರ್ಯವಾದರೂ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಜಾಹ್ನವಿ ಸಾರಿದ್ದಾರೆ. ಅವರ ಈ ಖಡಕ್ ನಡೆಯನ್ನು ಕಂಡು ಅಭಿಮಾನಿಗಳು 'ಜಾಹ್ನವಿ ಅವರ ಧೈರ್ಯ ಮೆಚ್ಚಲೇಬೇಕು' ಎಂದು ಕೊಂಡಾಡುತ್ತಿದ್ದಾರೆ.

ಪಾಪರಾಜಿಗಳ ಅತಿರೇಕದ ವರ್ತನೆಗೆ ಗರಂ ಆದ ಜಾಹ್ನವಿ ಕಪೂರ್: "ನಮ್ಮ ಖಾಸಗಿ ಅಂಗಗಳ ಮೇಲೆ 'ಜೂಮ್' ಯಾಕೆ?" ಎಂದು ಖಡಕ್ ಪ್ರಶ್ನೆ!

ಗ್ಲಾಮರ್ ಲೋಕದ ಹೊಳಪಿನ ಹಿಂದೆ ನಟಿಯರು ಎದುರಿಸುವ ಮುಜುಗರದ ಕ್ಷಣಗಳು ಒಂದೆರಡಲ್ಲ. ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯರು ಪಾಪರಾಜಿಗಳ (Paparazzi) ಕ್ಯಾಮೆರಾ ಕಣ್ಣುಗಳ ಅತಿರೇಕದ ಬಗ್ಗೆ ಆಕ್ರೋಶ ಹೊರಹಾಕಿದ್ದು ಸುದ್ದಿಯಾಗಿತ್ತು. ನಟಿಯರು ಸಾರ್ವಜನಿಕವಾಗಿ ಓಡಾಡುವಾಗ ಅವರ ದೇಹದ ಭಾಗಗಳನ್ನು 'ಜೂಮ್' ಮಾಡುವ ವಿಕೃತ ಮನಸ್ಥಿತಿಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆದಿತ್ತು. ಇದೀಗ ಇದೇ ಕಿಚ್ಚು ಬಾಲಿವುಡ್‌ಗೂ ಹಬ್ಬಿದೆ. ಅತಿಲೋಕ ಸುಂದರಿ ಶ್ರೀದೇವಿಯ ಪುತ್ರಿ, ಬಾಲಿವುಡ್ ನಟಿ ಜಾಹ್ನವಿ ಕಪೂರ್ (Janhvi Kapoor) ಈ ವಿಚಾರವಾಗಿ ಮೌನ ಮುರಿದಿದ್ದು, ಪಾಪರಾಜಿಗಳ ಬೆವರಿಳಿಸಿದ್ದಾರೆ.

ಪಾಪರಾಜಿಗಳನ್ನೇ ಖಾಸಗಿಯಾಗಿ ಭೇಟಿ ಮಾಡಿದ ಜಾನ್ವಿ!

ಸಾಮಾನ್ಯವಾಗಿ ನಟಿಯರು ಇಂತಹ ವಿಷಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ. ಆದರೆ ಜಾಹ್ನವಿ ಕಪೂರ್ ಒಂದು ಹೆಜ್ಜೆ ಮುಂದೆ ಹೋಗಿ, ಫೋಟೋಗ್ರಾಫರ್‌ಗಳನ್ನು ಖಾಸಗಿಯಾಗಿ ಭೇಟಿ ಮಾಡಿ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. "ನೀವು ನಮ್ಮ ಫೋಟೋ ತೆಗೆಯುವುದು ನಿಮ್ಮ ವೃತ್ತಿ ಎಂಬುದು ಗೊತ್ತು. ಆದರೆ ಮಹಿಳೆಯರನ್ನು ನೀವು ಚಿತ್ರೀಕರಿಸುವ ವಿಧಾನ ಸರಿಯಿಲ್ಲ. ನಮಗೆ ಇಷ್ಟವಿಲ್ಲದಿದ್ದರೂ, ಅನುಮತಿ ಇಲ್ಲದಿದ್ದರೂ ಬೇರೆ ಬೇರೆ ಕೋನಗಳಿಂದ ಫೋಟೋ ಕ್ಲಿಕ್ಕಿಸುವುದು ನಮ್ಮ ಖಾಸಗಿತನದ ಉಲ್ಲಂಘನೆ" ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.

"ಕೇವಲ ಹಣಕ್ಕಾಗಿ ಇಷ್ಟೊಂದು ಕೀಳುಮಟ್ಟಕ್ಕಿಳಿಯಬೇಕೇ?"

ಸಂದರ್ಶನವೊಂದರಲ್ಲಿ ಈ ಘಟನೆಯನ್ನು ನೆನಪಿಸಿಕೊಂಡ ಜಾಹ್ನವಿ, ಪಾಪರಾಜಿಗಳಿಗೆ ತಾನು ಕೇಳಿದ ಪ್ರಶ್ನೆಯನ್ನು ಹಂಚಿಕೊಂಡಿದ್ದಾರೆ. "ನಾವೇನೋ ಒಂದು ಡ್ರೆಸ್ ಧರಿಸಿ ಹೊರಗೆ ಬರುತ್ತೇವೆ. ಆದರೆ ನೀವು ಒಂದು ನಿರ್ದಿಷ್ಟ ಜಾಗಕ್ಕೆ ಕ್ಯಾಮೆರಾ ಜೂಮ್ ಮಾಡುತ್ತೀರಿ ಎಂದು ನಾವು ನಿರೀಕ್ಷಿಸಿರುವುದಿಲ್ಲ. ಕೇವಲ ಹಣಕ್ಕಾಗಿ ಅಥವಾ ನಿಮ್ಮ ಪೋಸ್ಟ್‌ಗಳಿಗೆ ಬರುವ ವ್ಯೂಸ್‌ಗಳಿಗಾಗಿ ಒಬ್ಬ ಮಹಿಳೆಯ ದೇಹವನ್ನು ವಸ್ತುವಿನಂತೆ ಬಳಸುವುದು ಎಷ್ಟು ಸರಿ? ಹೀಗೆ ಮಾಡುವಾಗ ನಿಮಗೆ ನಿಮ್ಮ ಮೇಲೆ ಗೌರವ ಇರುತ್ತದೆಯೇ?" ಎಂದು ಪ್ರಶ್ನಿಸುವ ಮೂಲಕ ಜಾಹ್ನವಿ ಕ್ಯಾಮೆರಾಮನ್‌ಗಳ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿದ್ದಾರೆ.

ಸಿನಿಮಾದ ಮಾದಕತೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸ!

ಜಾಹ್ನವಿ ಕಪೂರ್ ಇಲ್ಲಿ ಬಹಳ ಮುಖ್ಯವಾದ ವಿಚಾರವೊಂದನ್ನು ಪ್ರಸ್ತಾಪಿಸಿದ್ದಾರೆ, ಅದುವೇ 'ಸಮ್ಮತಿ' (Consent). "ನಾನು ಸಿನಿಮಾದ ಹಾಡೊಂದರಲ್ಲಿ ಮಳೆಯಲ್ಲಿ ನೆನೆಯುತ್ತಾ ಮಾದಕವಾಗಿ ನೃತ್ಯ ಮಾಡಬಹುದು. ಅದು ನನ್ನ ವೃತ್ತಿ ಮತ್ತು ಅಲ್ಲಿ ನನ್ನ ಪೂರ್ಣ ಸಮ್ಮತಿ ಇರುತ್ತದೆ. ಆದರೆ, ನಾನು ಸಾಮಾನ್ಯ ಹುಡುಗಿಯಂತೆ ಹೊರಗೆ ಹೋಗುವಾಗ, ನನ್ನ ಅರಿವಿಲ್ಲದೆ ನನ್ನನ್ನು ಲೈಂಗಿಕವಾಗಿ ಬಿಂಬಿಸುವುದು ಅಥವಾ ಸ್ಲೋ ಮೋಷನ್ ಮ್ಯೂಸಿಕ್ ಹಾಕಿ ವಿಡಿಯೋಗಳನ್ನು ವೈರಲ್ ಮಾಡುವುದು ಖಂಡಿತಾ ಒಪ್ಪುವಂತಹದ್ದಲ್ಲ" ಎಂದು ಗುಡುಗಿದ್ದಾರೆ.

ಒಬ್ಬ ನಟಿಯಾಗಿ ಗ್ಲಾಮರ್ ಪ್ರಪಂಚದಲ್ಲಿರುವುದು ಅನಿವಾರ್ಯವಾದರೂ, ವೈಯಕ್ತಿಕ ಘನತೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಜಾಹ್ನವಿ ಸಾರಿದ್ದಾರೆ. ಅವರ ಈ ಖಡಕ್ ನಡೆಯನ್ನು ಕಂಡು ಅಭಿಮಾನಿಗಳು 'ಜಾಹ್ನವಿ ಅವರ ಧೈರ್ಯ ಮೆಚ್ಚಲೇಬೇಕು' ಎಂದು ಕೊಂಡಾಡುತ್ತಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಅವರ ಈ ಹೇಳಿಕೆಗಳು ಭಾರೀ ವೈರಲ್ ಆಗುತ್ತಿದ್ದು, ಪಾಪರಾಜಿಗಳ ವೃತ್ತಿಪರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣದಿಂದ ಭಾರತೀಯ ಚಿತ್ರರಂಗದಲ್ಲಾಗುತ್ತಾ ದೊಡ್ಡ ದಾಖಲೆ? ಯಶ್ ₹700 ಕೋಟಿ ಆಫರ್ ತಿರಸ್ಕರಿಸಿದ್ದೇಕೆ?
ಮದುವೆ ಬಳಿಕ ಶ್ರೀವಲ್ಲಿಗೆ ಮೊದಲ ಹುಟ್ಟುಹಬ್ಬ ಸಂಭ್ರಮ! ವಿಜಯ್ ಪತ್ನಿ ಜನ್ಮದಿನಕ್ಕೆ ಬಂತು ಸೂಪರ್​ ಸರ್​ಪ್ರೈಸ್!