ಸಿನಿಮಾದಲ್ಲಿ ವಿಲನ್, ನಿಜ ಜೀವನದಲ್ಲಿ ಹೀರೋ/ ಕರ್ನಾಟಕದ ವಲಸಿಗರನ್ನು ತವರಿಗೆ ಕಳಿಸಿದ ಸೋನು ಸೂದ್/ 10 ಬಸ್ ಗಳ ಮೂಲಕ ಕರ್ನಾಟಕಕ್ಕೆ ಕಳುಹಿಸಿಕೊಟ್ಟ ನಿಜ ನಾಯಕ
ಮುಂಬೈ(ಮೇ 11) ಇವರು ಸಿನಿಮಾಗಳಲ್ಲಿ ವಿಲನ್ ಆಗಿರಬಹುದು. ಆದರೆ ನಿಜ ಜೀವನದಲ್ಲಿ ಹೀರೋ.. ಕರ್ನಾಟಕದ ಪಾಲಿಗೆ ದೊಡ್ಡ ನಾಯಕ . ಈಗ ಮಹಾರಾಷ್ಟ್ರದಲ್ಲಿ ಸಿಲುಕಿದ ಕರ್ನಾಟಕದ ಕೂಲಿ ಕಾರ್ಮಿಕರನ್ನು ಮನೆಗೆ ತಲುಪಿಸುವ ಕೆಲಸನ್ನು ಸೋನು ಸೂದ್ ಮಾಡಿದ್ದಾರೆ
ಗುಲ್ಬರ್ಗದಿಂದ ಮಹಾರಾಷ್ಟ್ರದ ಥಾಣೆಗೆ ನೂರಾರು ಕಾರ್ಮಿಕರು ಕೆಲಸಕ್ಕೆ ತೆರಳಿದ್ದರು. ಲಾಕ್ಡೌನ್ನಿಂದಾಗಿ ಅವರು ಅಲ್ಲಿಯೇ ಉಳಿಯಬೇಕಾಗಿ ಬಂದಿತ್ತು. ಕೊರೋನಾ ಹೊಡೆತಕ್ಕೆ ನಲುಗಿರುವ ಮಹಾರಾಷ್ಟ್ರದ ಥಾಣೆಯಲ್ಲಿ ಸಿಲುಕಿದ್ದವನ್ನು ಸೂದ್ ] 10 ಬಸ್ಗಳ ಮೂಲಕ ತವರಿಗೆ ಕಳುಹಿಸುವ ಕೆಲಸ ಮಾಡಿದ್ದಾರೆ.
ಕೊರೋನಾ ಸಂದರ್ಭದಲ್ಲಿಯೂ ದೇವರ ಆರಾಧನೆ ನಿಂತಿಲ್ಲ
ಇತ್ತೀಚೆಗೆ ಪಂಜಾಬ್ನಲ್ಲಿ 1500 ಪಿಪಿಇ ಕಿಟ್ಗಳನ್ನು ನೀಡುವ ಮೂಲಕ ಸೋನು ಸೂದ್ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡಿದ್ದರು. ಸೋನು ಸೂದ್ ಅವರ ಕಾರ್ಯಕ್ಕೆ ಪ್ರಶಂಸೆಗಳು ಹರಿದು ಬಂದಿವೆ.
ಸೋನು ಸೂದ್ ಹಿಂದಿ ಮಾತ್ರವಲ್ಲದೇ ಕನ್ನಡ, ತಮಿಳು, ತೆಲುಗು ಚಿತ್ರಗಳಲ್ಲಿಯೂ ಅಭಿನಿಯಿಸುತ್ತ ಬಂದಿದ್ದಾರೆ. ಅರುಂಧತಿ ಚಿತ್ರದಲ್ಲಿ ಸೋನು ಸೂದ್ ಕಾಣಿಸಿಕೊಂಡ ರೀತಿಯನ್ನು ಸಿನಿ ಪ್ರೇಮಿಗಳು ಮರೆಯಲು ಸಾಧ್ಯವೇ ಇಲ್ಲ.
A post shared by Indian Express Entertainment (@indian_express_entertainment) on May 11, 2020 at 4:35am PDT