
ಅಂದು ವಿಜಯ್ ದೇವರಕೊಂಡ ಮನೆಯ ಟೆರೇಸ್ ಮೇಲೆ ಇದ್ದರು ರಶ್ಮಿಕಾ!
ನಟಿ ರಶ್ಮಿಕಾ ಮಂದಣ್ಣರ (Rashmika Mandanna) ಸಂದರ್ಶನವೊಂದು ಇದೀಗ ವೈರಲ್ ಆಗಿದೆ. ಅದರಲ್ಲಿ 'ನನಗೆ ಅರ್ಜುನ್ ರೆಡ್ಡಿ ಜೊತೆ ಒಂದು ಕನೆಕ್ಷನ್ ಇದೆ. ಹಾಗೇ ಆನಿಮಲ್ ನನ್ನ ಸಿನಿಮಾ. ಆದ್ದರಿಂದ ನನಗೆ ಎರಡೂ ಸಿನಿಮಾಗಳೂ ಇಷ್ಟ.. ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಆಗ ಪಕ್ಕದಲ್ಲೇ ಇದ್ದ ಬಾಲಯ್ಯ ಅವರು 'ಏನು ಕನೆಕ್ಷನ್?' ಎಂದು ಕೇಳಿದ್ದಾರೆ. ಅದನ್ನೇ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ರಿಪೀಟ್ ಮಾಡಿದ್ದಾರೆ. ಆಗ ಅಲ್ಲಿ ನಗು ಉಕ್ಕಿದೆ. 'ಅಂದ್ರೆ, ರಶ್ಮಿಕಾ ಮಂದಣ್ಣ ಅವರು 'ಅರ್ಜುನ್ ರೆಡ್ಡಿ' ಜೊತೆ ಕನೆಕ್ಷನ್ ಇದೆ ಅಂದಿದ್ರಲ್ಲಾ, ಅದಕ್ಕೇ
ಅದಕ್ಕೆ ಉತ್ತರಿಸುತ್ತ ನಟಿ ರಶ್ಮಿಕಾ ಅವರು .. ಆಗ ನಟಿ ರಶ್ಮಿಕಾ ಅವರು ' ಅರ್ಜುನ್ ರೆಡ್ಡಿ ಜೊತೆ ನನಗೆ ಕನೆಕ್ಷನ್ ಏನು ಅಂದ್ರೆ.. ನಾನು ಹೈದ್ರಾಬಾದ್‌ಗೆ ಶಿಫ್ಟ್ ಆದ ಮೊದಲ ದಿನ ನಾನು ಅರ್ಜುನ್ ರೆಡ್ಡಿ ಸಿನಿಮಾ ನೋಡಿದ್ದೇನೆ... ಎಂದಿದ್ದಾರೆ. ಆಗ ಅಲ್ಲೇ ಪಕ್ಕದಲ್ಲಿದ್ದ ರಣಬೀರ್ ಕಪೂರ್ ಅವರು 'ಇಲ್ಲೊಂದು ಕೋ-ಇನ್‌ಸಿಡೆಂಟ್ ಇದೆ, ಅದೇನು ಅಂದ್ರೆ, ಅರ್ಜುನ್ ರೆಡ್ಡಿ ನಿರ್ದೇಶಕರಾದ ಸಂದೀಪ್ ರೆಡ್ಡಿ ವಂಗಾ ಅವರು ಅದೇ ಅರ್ಜುನ್ ರೆಡ್ಡಿ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಅವರನ್ನು ಮೊದಲ ಬಾರಿ ಮೀಟ್ ಆಗಿದ್ದು, ವಿಜಯ್ ದೇವರಕೊಂಡ ಮನೆಯ ಟೆರೇಸ್ ಮೇಲೆ..' ಎಂದಿದ್ದಾರೆ.
ವಿಜಯ್ ದೇವರಕೊಂಡ ಹೆಸರು ಹೇಳುತ್ತಿದ್ದಂತೆ ಅಲ್ಲಿ ಎಲ್ಲರೂ ನಕ್ಕಿದ್ದಾರೆ. ಕಾರಣ, ನಟಿ ರಶ್ಮಿಕಾ ಅವರಿಗೆ ಅದಾಗಲೇ ವಿಜಯ್ ದೇವರಕೊಂಡ ಅವರು ಹತ್ತಿರ ಅಗಿದ್ದರು ಎಂಬ ಅರ್ಥದಲ್ಲಿ. ಆದರೆ, ರಿಯಾಲಿಟಿ ಏನು ಎಂಬುದು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರಿಬ್ಬರಿಗೇ ಗೊತ್ತು. ಕಾರಣ, ಸಕ್ಸಸ್ ಪಾರ್ಟಿ ಎಲ್ಲಿ ಆಯೋಜನೆ ಆಗಿರುತ್ತೋ ಅಲ್ಲಿಗೆ ಸಹಜವಾಗಿಯೇ ಯಾರಿಗೆ ಆಮಂತ್ರಣವಿದೆಯೋ ಅವರು ಹೋಗಬೇಕಾಗುತ್ತದೆ. ಆಮೇಲೆ ಅವೆಲ್ಲಾ ಕನೆಕ್ಷನ್ ಮಾಡಲಾಗುತ್ತದೆ ಎಂದೂ ಕೂಡ ಹೇಳಬಹುದು. ಸತ್ಯ ಏನಿದೆಯೋ ಯಾರಿಗೆ ಗೊತ್ತು?
ಒಟ್ಟಿನಲ್ಲಿ, ಅರ್ಜುನ್ ರೆಡ್ಡಿ ಸಕ್ಸಸ್ ಮೀಟ್‌ನಲ್ಲಿ ನಟಿ ರಶ್ಮಿಕಾ ಅವರನ್ನು 'ಅರ್ಜುನ್ ರೆಡ್ಡಿ' ನಿರ್ದೇಶಕರಾದ ಸಂದೀಪ್ ವಂಗಾ ಅವರು ಮೊದಲ ಭಾರಿ ಭೇಟಿಯಾಗಿದ್ದಾರೆ. ಆಮೇಲೆ ರಶ್ಮಿಕಾಗೆ ಆನಿಮಲ್ ಸಿನಿಮಾದ ಆಫರ್ ಸಿಕ್ಕಿದೆ. ಇದು ಮ್ಯಾಟರ್. ಜೊತೆಗೆ, ನಟಿ ರಶ್ಮಿಕಾ ಅವರು ಅಂದು ನಟ ವಿಜಯ್ ದೇವರಕೊಂಡ ಮನೆಯ ಟೆರೇಸ್ ಮೇಲೆ ಅವರೆಲ್ಲರ ಜೊತೆ ಇದ್ದರು. ಈ ಸಿಕ್ರೆಟ್ ಬಹಳ ಕಾಲದ ನಂತರ ರಿವೀಲ್ ಆಗಿದೆ. ಸೋಷಿಯಲ್ ಮೀಡಿಯಾ ಇರೋದೇ ಹೀಗೆ.. ಯಾವತ್ತೋ ಮಾಡಿರೋ ಸಂದರ್ಶನಗಳ ತುಣುಕುಗಳು ಇನ್ಯಾವತ್ತೋ ವೈರಲ್ ಆಗಿ ನೋಡಿದವರಿಗೆ ನಗು ಉಕ್ಕಿಸುತ್ತದೆ.
ಸಿಕ್ಕ ಮಾಹಿತಿ ಪ್ರಕಾರ, ನಟಿ ರಶ್ಮಿಕಾ ಅವರು ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಅವರ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆದರೆ, ನಿಶ್ಚಿತಾರ್ಥದ ವಿಷಯವನ್ನು ರಶ್ಮಿಕಾ ಆಗಲಿ ಅಥವಾ ವಿಜಯ್ ಆಗಲೀ ಒಪ್ಪಿಕೊಂಡಿಲ್ಲ ಅಥವಾ ಅಲ್ಲಗಳೆದಿಲ್ಲ. ಆದರೆ, ಅವರಿಬ್ಬರೂ ಲವರ್ಸ್ ಎಂಬುದು ಸ್ವತಃ ಅವರದೇ ನಡೆ-ನುಡಿಯ ಮೂಲಕ ಜಗತ್ತಿಗೇ ಗೊತ್ತಾಗಿದೆ. ಇದೀಗ ಎಂಗೇಜ್‌ಮೆಂಟ್ ಆಗಿದೆ ಎನ್ನಲಾಗುತ್ತಿದೆ. ಅದೇನೇ ಆಗಿದ್ದರೂ ಭವಿಷ್ಯದಲ್ಲಿ ಹೊರಬರಲೇಬೇಕಲ್ಲ, ಕಾದು ನೋಡಿದರಾಯ್ತು ಬಿಡಿ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.