
ನಟ, ನಿರ್ದೇಶಕ, ನಿರ್ಮಾಪಕ ರಾಜೀವ್ ಕಪೂರ್ (58) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಬಾಲಿವುಡ್ ನಟರಾದ ರಿಷಿ ಕಪೂರ್ ಮತ್ತು ರಣಧೀರ್ ಕಪೂರ್ ಸಹೋದರ.
ಸುದ್ದಿ ತಿಳಿಯುತ್ತಲೇ ನಟಿ ಕರೀನಾ ಕಪೂರ್, ಕರಿಷ್ಮಾ ಕಪೂರ್, ರಣಬೀರ್ ಕಪೂರ್ ಕಪೂರ್ ಫ್ಯಾಮಿಲಿ ಮನೆಗೆ ಭೇಟಿ ಕೊಟ್ಟಿದ್ದಾರೆ. ರಾಜ್ ಕಪೂರ್ ಅವರ ಪುತ್ರ ರಾಜೀಪ್ ಕಪೂರ್ ರಣಬೀರ್ ಮತ್ತು ಕರೀನಾ, ಕರಿಷ್ಮಾರ ಚಿಕ್ಕಪ್ಪನೂ ಹೌದು.
ಭಾರತ ಕಂಡ The Eternal Lover Boy ರಿಷಿ ಕಪೂರ್!
ರಾಜೀವ್ ಅವರ ಅಣ್ಣ, ಕರೀನಾ ಅವರ ತಂದೆ ರಣಧೀರ್ ಕಪೂರ್ ಆಸ್ಪತ್ರೆಯ ಹೊರಗೆ ಕಂಡುಬಂದರು. ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದ ಅವರಿಗೆ ದಾದಿಯರೂ ನೆರವಾಗಿದ್ದರು. ನಟ ರಣಬೀರ್ ಕಪೂರ್ ತಾಯಿ ನೀತು ಅವರೊಂದಿಗೆ ಆಗಮಿಸಿದ್ದರು
ರಾಜೀವ್ 1983 ರಲ್ಲಿ ಏಕ್ ಜಾನ್ ಹೈ ಹಮ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. 1985 ರಲ್ಲಿ ಅವರ ತಂದೆಯ ಕೊನೆಯ ನಿರ್ದೇಶನದ ರಾಮ್ ತೇರಿ ಗಂಗಾ ಮೈಲಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.