
ನಟ ಸೋನು ಸೂದ್‌ಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸದಿರುವುದಕ್ಕೆ ಮಾಜಿ ಬಿಜೆಪಿ ಮುಖಂಡ ಶತ್ರುಗ್ಣ ಸಿನ್ಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಣತಾಜ್ಯೋತ್ಸವ ದಿನ ನಟನಿಗೆ ಪ್ರಶಸ್ತಿ ನೀಡಿ ಗೌರವಿಸದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ನೀವೇ ಹೇಳಿ, ಸೋನುನನ್ನು ಗೌರವಿಸದಿದ್ದರೆ ಅದಕ್ಕಿಂದ ದೊಡ್ಡ ಅಗೌರವ ಬೇರೇನಿದೆ...? ಲಾಕ್‌ಡೌನ್‌ನಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗಿ ಈಗೂ ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದಾರೆ ಎಂದಿದ್ದಾರೆ.
ಸೋನುಗಾಗಿ 2 ಸಾವಿರ ಕಿಮೀ ಸೈಕಲ್ ಯಾನ: ಕಾರಣ ಇಂಟ್ರೆಸ್ಟಿಂಗ್
ಸೋನು ಸೂದ್‌ನ ಕೆಲಸವನ್ನು ಗಮನಿಸಿ ಸರ್ಕಾರ ಗೌರವಿಸದಿದ್ದರೆ ಪ್ರಶಸ್ತಿಗೆ ಅರ್ಥವೇ ಇಲ್ಲ. ಗ್ರೇಟ್ ದಿಲೀಪ್ ಕುಮಾರ್‌ಗೆ ಒಂದೇ ಒಂದು ರಾಷ್ಟ್ರೀಯ ಪ್ರಶಸ್ತಿ ನೀಡದ ಹಾಗೆಯೇ ಆಯ್ತು ಇದು ಎಂದಿದ್ದಾರೆ.
ನಮ್ಮ ಸಿನಿಮಾ ಹಿರೋಗಳು ತೆರೆಯ ಮೇಲಷ್ಟೇ ಹಿರೋಗಳು. ವಾಸ್ತವದಲ್ಲಿ ಸಂತ್ರಸ್ತ ಬ್ಲೀಡಿಂಗ್ ಅಗ್ತಾ ಯಾರಾದ್ರೂ ಬಿದ್ದಿದ್ರೂ ನೋಡ್ತಾ ಇರೋರು, ನಿಂತು ತಮಾಷೆ ನೊಡೋರು. ಸೋನು ಜಸ್ಟ್ ಹೀರೋ ಅಲ್ಲ ಸೂಪರ್ ಹೀರೋ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.