540ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿನ ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ರಾಜಕಾರಣಿ ಯಾರೆಂದು ಗುರುತಿಸಬಲ್ಲಿರಾ?
ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಮೂಲಕ ಹಲ್ಚಲ್ ಸೃಷ್ಟಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್ ಹಲವು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈವರೆಗೂ 540ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿರುವ ನಟ, ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಇದ್ದಾರೆ. ಅನುಪಮ್ ಖೇರ್ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಬೋಳು ತಲೆ. ಅದರಿಂದಲೇ ಒಂದಿಷ್ಟು ಹಾಸ್ಯಮಾಡಿಕೊಳ್ಳುವ ನಟ, ಸೋಷಿಯಲ್ ಮೀಡಿಯಾದಲ್ಲಿಯೂ ಬೋಳು ತಲೆಯ ಮೂಲಕವೇ ಕೆಲವೊಂದು ವಿಡಿಯೋಗಳನ್ನು ಶೇರ್ ಮಾಡುತ್ತಲಿರುತ್ತಾರೆ. ಕೆಲ ದಿನಗಳ ಹಿಂದೆ ತಲೆಯ ಮೇಲೆ ವಿಚಿತ್ರ ವಿನ್ಯಾಸದ ಟ್ಯಾಟೂ ಹಾಕಿಸಿಕೊಂಡು ಬಾಲ್ಡಿಗಳಿಗೆ ಚಾಲೆಂಜ್ ನೀಡಿದ್ದರು.
ಇದೀಗ ಅವರು, ತಮ್ಮ ಬಾಲ್ಯದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಮ್ಮನ ಮಡಿಲಿನಲ್ಲಿ ಇರುವ ಮಗುವಿನ ಚಿತ್ರವನ್ನು ಹಂಚಿಕೊಂಡಿರುವ ಅನುಮಪ್ ಖೇರ್ ಅವರು, ಈಗಿನ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಅನುಪಮ್ ಖೇರ್ ಅವರು ಶಿಮ್ಲಾದ ಕಾಶ್ಮೀರಿ ಪಂಡಿತ್ ಕುಟುಂಬದಲ್ಲಿ 7 ಮಾರ್ಚ್ 1955 ರಂದು ಜನಿಸಿದರು. ಅವರ ತಂದೆ, ಪುಷ್ಕರ್ ನಾಥ್ ಖೇರ್ ಹಿಮಾಚಲ ಪ್ರದೇಶದ ಅರಣ್ಯ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು ಮತ್ತು ಅವರ ತಾಯಿ ದುಲಾರಿ ಖೇರ್ ಗೃಹಿಣಿಯಾಗಿದ್ದರು. ನಟನಿಗೆ ಈಗ 68 ವರ್ಷ ವಯಸ್ಸು. ಕೆಲ ದಿನಗಳ ಹಿಂದೆ ತಾಯಿ ದುಲಾರಿಯವರ ಜೊತೆ ಫೋಟೋ ಶೇರ್ ಮಾಡಿಕೊಂಡು ಇದರ ಜೊತೆಗೆ ಪಾಪು ಆಗಿದ್ದಾನ ಫೋಟೋ ಹಂಚಿಕೊಂಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ರೌಡಿ ಅಂದ್ಕೊಳಿ, ಲವರ್ಬಾಯ್, ಸೈಕೋಪಾಥ್ ಏನೇ ಅಂದ್ಕೊಳಿ... ವಸಿಷ್ಠ ಸಿಂಹ ಸೀಕ್ರೇಟ್ ರಿವೀಲ್
ಈಗ ಅನುಪಮ್ ಖೇರ್ ಅವರು ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದೇ 9ರಂದು ನಡೆದ ಪ್ರಧಾನಿ ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ರಜನಿಕಾಂತ್ ಅವರನ್ನು ನೋಡಿದಾಕ್ಷಣ ಅನುಪಮ್ ಖೇರ್ ಅವರು ಖುಷಿಯಿಂದ ಹಾಡಿ ಹೊಗಳಿದ್ದಾರೆ. ರಜನಿಕಾಂತ್ ಅವರನ್ನು “ಮನುಕುಲಕ್ಕೆ ದೇವರು ನೀಡಿದ ಕೊಡುಗೆ” ಎಂದು ಅನುಪಮ್ ಖೇರ್ ಹೊಗಳಿಕೆಯ ಸುರಿಮಳೆ ಸುರಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚಿಗೆ ಅನುಪಮ್ ಖೇರ್ ನೀಡಿದ ಸಂದರ್ಶನದಲ್ಲಿ, ಡ್ರೀಮ್ ರೋಲ್ ಬಗ್ಗೆ ಕೇಳಲಾಗಿತ್ತು. ಆಗ ಅವರು, ನಾನು ನಿರ್ವಹಿಸಿರುವ ಪ್ರತಿ ಪಾತ್ರವೂ ಡ್ರೀಮ್ ರೋಲ್. ನಿರ್ದೇಶಕರು ನನ್ನನ್ನು ತಲೆಯಲ್ಲಿಟ್ಟುಕೊಂಡು ಬರೆಯುವ ಪ್ರತಿ ಪಾತ್ರವೂ ನನಗೆ ವಿಶೇಷ. ನನ್ನ ತಂದೆ ನನಗೆ ಬಹಳಷ್ಟನ್ನು ಕಲಿಸಿದ್ದಾರೆ. ಸೋಲು ಎಂದಿಗೂ ವೈಯಕ್ತಿಕವಾಗಬಾರದು. ನಾವು ಮಾಡುವ ಕೆಲಸ, ಕಾರ್ಯಕ್ರಮ ಸೋಲಬಹುದು, ನಾವಲ್ಲಎಂಬುದನ್ನು ಅವರು ಹೇಳಿರುವುದರಿಂದ ನನಗೆ ಇಂತಹದ್ದೇ ಪಾತ್ರ ಬೇಕು ಎಂದು ಅನಿಸಿಲ್ಲ. ಜತೆಗೆ ನಾನು ಲೆಜೆಂಡರಿ ನಟನಲ್ಲ, ಬದಲಾಗಿ ಹೊಸ ನಟ. ನನ್ನನ್ನು ಚಿತ್ರರಂಗಕ್ಕೆ ಈಗಷ್ಟೇ ಬಂದ ಹೊಸ ಕಲಾವಿದ ಎಂಬಂತೆ ನೋಡಿ ಎಂದು ನಾನು ಎಲ್ಲರಿಗೂ ಹೇಳುತ್ತೇನೆ ಎಂದಿದ್ದರು.
ಸೌಂದರ್ಯ ಸ್ಪರ್ಧೆ ಕಿರೀಟ ಮಾರಾಟಕ್ಕಿದೆ! ಬ್ಯೂಟಿ ಸ್ಪರ್ಧೆಯ ಶಾಕಿಂಗ್ ವಿಷ್ಯ ರಿವೀಲ್ ಮಾಡಿದ ಮಿಸಸ್ ವರ್ಲ್ಡ್