ಸೌತ್ ಸಿನಿಮಾ ಸಕ್ಸಸ್ ಬಾಲಿವುಡ್‌ಗೆ ನಡುಕ ಹುಟ್ಟಿಸಿದೆ, ಇದು ದೊಡ್ಡ ಪಾಠ- ಮನೋಜ್ ಬಾಜಪೇಯಿ

By Shruiti G KrishnaFirst Published Apr 28, 2022, 2:59 PM IST
Highlights

ಬಾಲಿವುಡ್ ಸ್ಟಾರ್ ನಟ ಮನೋಜ್ ಬಾಜಪೇಯಿ(Manoj Bajpayee) ದಕ್ಷಿಣದ ಸಿನಿಮಾಗಳಿಂದ ಬಾಲಿವುಡ್‌ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸೌತ್ ಸಿನಿಮಾಗಳ ಸಕ್ಸಸ್ ಬಾಲಿವುಡ್ ಮಂದಿಯಲ್ಲಿ ನಡುಕ ಹುಟ್ಟಿಸಿದೆ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ.

ಬಾಲಿವುಡ್ ನಲ್ಲಿ ಈಗ ಸೌತ್ ಸಿನಿಮಾಗಳದ್ದೆ ಹವಾ. ಬ್ಯಾಕ್ ಟು ಬ್ಯಾಕ್ ಸೌತ್ ಸಿನಿಮಾಗಳು ಬಾಲಿವುಡ್ ನಲ್ಲಿ ಬ್ಲಾಕ್ ಬಾಸ್ಟರ್ ಆಗುತ್ತಿವೆ. ಇದು ಬಾಲಿವುಡ್ ಮಂದಿಗೆ ನಿದ್ದೆಗೆಡಿಸಿವೆ. ಬಾಲಿವುಡ್ ಭದ್ರ ಕೋಟೆಯೊಳಗೆ ನುಗ್ಗಿರುವ ಸೌತ್ ಸಿನಿಮಾಗಳು ಅಬ್ಬರಿಸುತ್ತಿವೆ. ದಕ್ಷಿಣದ ಸಿನಿಮಾ ಆರ್ಭಟಕ್ಕೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ. ಆರ್ ಆರ್ ಆರ್(RRR), ಕೆಜಿಎಫ್-2, (KGF 2), ಪುಷ್ಪ(Pushp) ಸಿನಿಮಾಗಳು ಘಟಾನುಘಟಿ ಸ್ಟಾರ್ ಗಳ ಸಿನಿಮಾ ದಾಖಲೆಗಳನ್ನು ಪುಡಿ ಪುಡಿ ಮಾಡಿರುವ ಮೂಲಕ ಭಯ ಹುಟ್ಟಿಸಿವೆ. ಇದೀಗ ಸೌತ್ ಮತ್ತು ಬಾಲಿವುಡ್ ಸಿನಿಮಾ ಎನ್ನುವ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.

ಈ ನಡುವೆ ಬಾಲಿವುಡ್ ಸ್ಟಾರ್ ನಟ ಮನೋಜ್ ಬಾಜಪೇಯಿ(Manoj Bajpayee) ದಕ್ಷಿಣದ ಸಿನಿಮಾಗಳಿಂದ ಬಾಲಿವುಡ್‌ ಮೇಲೆ ಪರಿಣಾಮ ಬೀರಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಸೌತ್ ಸಿನಿಮಾಗಳ ಸಕ್ಸಸ್ ಬಾಲಿವುಡ್ ಮಂದಿಯಲ್ಲಿ ನಡುಕ ಹುಟ್ಟಿಸಿದೆ ಎಂದು ಮನೋಜ್ ಬಾಜಪೇಯಿ ಹೇಳಿದ್ದಾರೆ. ಕೊರೊನಾ ಬಳಿಕ ನಲುಗಿಹೋಗಿದ್ದ ಚಿತ್ರರಂಗಕ್ಕೆ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಹೊಸ ಭರವಸೆ ನೀಡಿತ್ತು. ದಕ್ಷಿಣದಲ್ಲಿ ಮಾತ್ರವಲ್ಲದೇ ಬಾಲಿವುಡ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು. ಬಳಿಕ ಬಂದ ಆರ್ ಆರ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳು ಬಾಲಿವುಡ್‌ನಲ್ಲಿ ಭರ್ಜರಿ ಕಮಾಯಿ ಮಾಡುವ ದಾಖಲೆ ಬರೆದವು. ಹಿಂದಿಯಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ದಾಖಲೆ ಬರೆದಿವೆ.

ಈ ಬಗ್ಗೆ ಆಂಗ್ಲ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮನೋಜ್, ಅನೇಕ ಸೌತ್ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗುತ್ತಿವೆ. ಮನೋಜ್ ಬಾಜಪೇಯಿ ಮತ್ತು ನನ್ನಂತವರನ್ನು ಕೆಲವು ಕ್ಷಣ ಮರೆತುಬಿಡಿ. ಮುಂಬೈನ ಅನೇಕ ಸಿನಿಮಾ ತಯಾರಿಕರಿಗೆ ನಡುಕ ಹುಟ್ಟಿಸಿದೆ. ನಿಜಕ್ಕೂ ಅವರಿಗೆ ಗೊತ್ತಾಗುತ್ತಿಲ್ಲ , ಎಲ್ಲಿ ನೋಡಬೇಕೆಂದು ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಕೆಜಿಎಫ್-2 ಸಕ್ಸಸ್ ಬಗ್ಗೆಯೂ ಮಾತನಾಡಿದ್ದಾರೆ.

ಕೊರೋನಾದಿಂದ ಮನೋರಂಜನಾ ಉದ್ಯಮಕ್ಕೆ ಲಾಭ: ಮನೋಜ್ ಭಾಜಪೈ

ದಕ್ಷಿಣದವರು ಊಹಿಸಿದಂತೆ ಸಿನಿಮಾ ಮಾಡುತ್ತಿದ್ದಾರೆ. ಪ್ರತಿಯೊಂದು ಶಾಟ್ ಗಳನ್ನು ತೆಗೆದುಕೊಳ್ಳುವಾಗನೂ ವಿಶ್ವದ ಅತ್ಯುತ್ತಮವಾದ ಶಾಟ್ ತೆಗೆದುಕೊಳ್ಳುತ್ತಿದ್ದಾರೆ. ಪ್ರೇಕ್ಷಕರಿಗೆ ಬೇಸರ ಆಗುವ ಹಾಗೆ ಮಾಡಲ್ಲ. ಆರ್ ಆರ್ ಆರ್, ಪುಷ್ಪ ಅಥವಾ ಕೆಜಿಎಫ್-2 ಮೇಕಿಂಗ್ ನೋಡಿದ್ರೆ ಗೊತ್ತಾಗುತ್ತದೆ. ಪ್ರತಿಯೊಂದು ಫ್ರೇಮ್ ಕೂಡ ಜೀವಾನ್ಮರಣ ಸನ್ನಿವೇಶದಂತೆ ಚಿತ್ರೀಕರಿಸಲಾಗಿದೆ. ಇದು ನಮ್ಮ ಕೊರತೆ. ನಮ್ಮನ್ನು ನಾವು ಟೀಕಿಸುವ ಹಾಗಿಲ್ಲ ಇದು ವಿಭಿನ್ನ ಎಂದು ನಾನು ಪ್ರತ್ಯೇಕಿಸಬೇಕು ಅಷ್ಟೆ. ಇದು ದೊಡ್ಡ ಪಾಠವಾಗಿದೆ. ಮುಂಬೈ ಮುಖ್ಯವಾಹಿನಿ ನಿರ್ದೇಶಕರಿಗೆ ಹೇಗೆ ಮುಖ್ಯವಾಹಿನಿ ಸಿನಿಮಾ ಮಾಡಬೇಕು ಎನ್ನುವ ಪಾಠವಾಗಿದೆ ಎಂದಿದ್ದಾರೆ.

ಬಾಜಪೇಯಿ, ಧನುಷ್‌ಗೆ ಶ್ರೇಷ್ಠ ನಟ ಪ್ರಶಸ್ತಿ ಪ್ರದಾನ

ಮನೋಜ್ ಬಾಜಪೇಯಿ ಕೊನೆಯದಾಗಿ ಡಯಲ್ 100 ಮೂಲಕ ಅಮೆಜಾನ್ ಪ್ರೈಂ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಮನೋಜ್ ಎರಡು ಸಿನಿಮಾಗಳ ಜೊತೆಗೆ ಸೂಪರ್ ಹಿಟ್ ಫ್ಯಾಮಿಲಿ ಮ್ಯಾನ್ -3 ನಲ್ಲಿ ಬ್ಯುಸಿಯಾಗಿದ್ದಾರೆ.

click me!