Jailer;ಶಿವಣ್ಣ, ಮೋಹನ್‌ಲಾಲ್ ಬಳಿಕ ರಜನಿಕಾಂತ್ ಸಿನಿಮಾಗೆ ಮತ್ತೋರ್ವ ಖ್ಯಾತ ನಟ ಎಂಟ್ರಿ

By Shruthi Krishna  |  First Published Feb 6, 2023, 3:57 PM IST

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷೆಯ ಜೈಲರ್ ಸಿನಿಮಾಗೆ ಬಾಲಿವುಡ್ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. 


ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಲುಕ್ ರಿವೀಲ್ ಆಗಿದ್ದು ಮಾಸ್ ಗೆಟಪ್‌ನಲ್ಲಿ ತಲೈವಾ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸೂಪರ್ ಸ್ಟಾರ್ ಜೊತೆ ಬೇರೆ ಬೇರೆ ಭಾಷೆಯ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕನ್ನಡ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಇನ್ನೂ ಮಲಯಾಳಂ ಖ್ಯಾತ ನಟ ಮೋಹನ್‌ಲಾಲ್ ಕೂಡ ವಿಶೇಷ ಪಾತ್ರದಲ್ಲಿ ಸೂಪರ್ ಸ್ಟಾರ್ ಜೊತೆ ತೆರೆಹಂಚಿಕೊಂಡಿದ್ದಾರೆ. ಇದೀಗ ಮತ್ತೋರ್ವ ಖ್ಯಾತ ನಟನ ಎಂಟ್ರಿಯಾಗಿದೆ. 

ಈ ಬಗ್ಗೆ ಸಿನಿಮಾತಂಡವೇ ಬಹಿರಂಗ ಪಡಿಸಿದೆ. ಈಗಾಗಲೇ ಶಿವರಾಜ್ ಕುಮಾರ್ ಮತ್ತು ಮೋಹನ್ ಲಾಲ್ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಶಿವರಾಜ್ ಕುಮಾರ್ ಲುಕ್ ಕೂಡ ರಿವೀಲ್ ಮಾಡಲಾಗಿದೆ. ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಅಂದಹಾಗೆ ಸದ್ಯ ಎಂಟ್ರಿ ಕೊಟ್ಟಿರುವ ಮತ್ತೋರ್ ವ ಖ್ಯಾತ ನಟ ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ಜಾಕಿ ಶ್ರಾಫ್. ಹೌದು,  ಬಾಲಿವುಡ್ ಖ್ಯಾತ ನಟ ಜಾಕಿ ಶ್ರಾಫ್ ಜೈಲರ್ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಈಗಾಗಲೇ ಜಾಕಿ ಶ್ರಾಫ್ ಅವರ ಲುಕ್ ರಿವೀಲ್ ಮಾಡಲಾಗಿದೆ. 

Tap to resize

Latest Videos

ಘಟಾನುಘಟಿ ಕಲಾವಿದರು ನಟಿಸುತ್ತಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಜಾಕಿ ಶ್ರಾಫ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ರಿವೀಲ್ ಆಗಿಲ್ಲ. ನೆಲ್ಸನ್ ದಿಲೀಪ್ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.  

Jailer; ಮಾಸ್ ಅಂಡ್ ಕ್ಲಾಸ್ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್; ಫೋಟೋ ವೈರಲ್

ಸೂಪರ್ ಸ್ಟಾರ್ ರಜನಿಕಾಂತ್ ಕೊನೆಯದಾಗಿ ಅಣ್ಣಾತೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಜೈಲರ್ ಆಗಿ ಮತ್ತೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸೂಪರ್ ಸ್ಟಾರ್‌ನನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ. ಅಣ್ಣಾತೆ ನಿರಾಸೆ ಮೂಡಿಸಿದ ಕಾರಣ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ನೀಡುತ್ತಾ ಎಂದು ಕಾದು ನೋಡಬೇಕಿದೆ.  

Rajinikanth: ಧ್ವನಿ, ಭಾವಚಿತ್ರ, ಹೆಸರು ದುರ್ಬಳಕೆ: ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ಸೂಪರ್ ಸ್ಟಾರ್

ನಿರ್ದೇಶಕ ನೆಲ್ಸನ್ ಅವರ ಕೊನೆಯ ಸಿನಿಮಾ ಬೀಸ್ಟ್ ಹೀನಾಯ ಸೋಲು ಕಂಡಿತ್ತು. ದಳಪತಿ ವಿಜಯ್ ನಾಯಕನಾಗಿ ನಟಿಸಿದ್ದ ಬೀಸ್ಟ್ ಬಾಕ್ಸ್ ಆಫೀಸ್‌ನಲ್ಲೂ ಸಕ್ಸಸ್ ಕಂಡಿಲ್ಲ. ಹಾಗಾಗಿ ಈ ಸಿನಿಮಾದ ಗೆಲುವು ನೆಲ್ಸನ್ ಅವರಿಗೆ ತುಂಬಾ ಮುಖ್ಯವಾಗಿದೆ. ಸದ್ಯ ರಜನಿಕಾಂತ್ ಜೊತೆಗೆ ಕನ್ನಡ, ಮಲಯಾಳಂನ ಸ್ಟಾರ್ ನಟನ ಜೊತೆಗೆ ಇದೀಗ ಬಾಲಿವುಡ್ ಖ್ಯಾತ ನಟನನ್ನು ಸೇರಿಸಿಕೊಂಡು ಜೈಲರ್ ಮಾಡುತ್ತಿರುವುದು ದೊಡ್ಡ ಚಾಲೆಂಜ್ ಆಗಿದೆ. ಈ ಸಿನಿಮಾ ಹೇಗೆ ಮೂಡಿ ಬರಲಿದೆ ಎಂದು ನೋಡಲು ತೆರೇಮೇಲೆ ಬರುವವರೆಗೂ ಕಾಯಲೇ ಬೇಕು. 

 

click me!