ರೇಖಾ ಜೊತೆ 'ನವಾಬ್ ಸುಲ್ತಾನ್' ಮಲಗಿದ್ದ ದೃಶ್ಯ ನೋಡಲು ಇಡೀ ಊರು ಸೇರಿಬಿಟ್ಟಿತ್ತು..! ಫೈನಲಿ ಹಾಗಾಯ್ತು...

Published : Dec 29, 2025, 04:14 PM IST
Farooq Sheikh Rekha

ಸಾರಾಂಶ

ಏನೇ ಪ್ರಯತ್ನಿಸಿದರೂ ಜನಸಂದಣಿ ನಿಯಂತ್ರಣಕ್ಕೆ ಬರದಿದ್ದಾಗ, ಭದ್ರತಾ ದೃಷ್ಟಿಯಿಂದ ಗುಂಡು ಹಾರಿಸಬೇಕಾಯ್ತು. ಕೆಲವು ಜನರು ಬಂದೂಕುಗಳೊಂದಿಗೆ ಕಾಣಿಸಿಕೊಂಡಿದ್ದರಿಂದ, ವಾತಾವರಣ ತಿಳಿಯಾಗುವ ಬದಲು ಇನ್ನಷ್ಟು ಭಯಾನಕವಾಯಿತು. ಜನರು ಭಯಭೀತರಾಗಿ ಹೋಗುವ ಬದಲು ಅಲ್ಲೇ ಕಲ್ಲಿನಂತೆ ನಿಂತೇಬಿಟ್ಟರು. ಮುಂದೇನಾಯ್ತು?

ರೇಖಾ ಪ್ರಣಯದೃಶ್ಯದ ಸ್ಟೋರಿ

ದಿವಂಗತ ನಟ ಫಾರೂಕ್ ಶೇಖ್ (Farooq Sheikh) ತಮ್ಮ ಸಹಜ ಅಭಿನಯದಿಂದ ಭಾರತೀಯ ಸಿನಿರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದವರು. ಉಮ್ರಾವ್ ಜಾನ್, ಗರಂ ಹವಾ, ಚಸ್ಮ ಬದ್ದೂರ್, ಕಿಸಿ ಸೆ ನಾ ಕೆಹ್ನಾ, ಮೊದಲಾದ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಇಂದಿಗೂ ಸಿನಿಪ್ರೇಮಿಗಳ ನೆನಪಿನಲ್ಲಿ ಉಳಿದಿವೆ. 1981ರಲ್ಲಿ ಬಿಡುಗಡೆಯಾದ ನಿರ್ದೇಶಕ ಮುಜಾಫರ್ ಅಲಿ ನಿರ್ದೇಶನದ ಕ್ಲಾಸಿಕ್ ಚಿತ್ರ 'ಉಮ್ರಾವ್ ಜಾನ್' ಫಾರೂಕ್ ಶೇಖ್ ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲು. ಈ ಚಿತ್ರದಲ್ಲಿ ನವಾಬ್ ಸುಲ್ತಾನ್ ಪಾತ್ರದಲ್ಲಿ ಅವರು ನಟಿಸಿದ್ದರು. ಈ ಚಿತ್ರದ ಶೂಟಿಂಗ್ ವೇಳೆ ನಡೆದ ಒಂದು ಘಟನೆ ಬಗ್ಗೆ ಫಾರೂಕ್ ಶೇಖ್ ಸ್ವತಃ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಲಕ್ಕೋ ಸಮೀಪದ ಮಲಿಹಾಬಾದ್‌ನ ಖಾಸಗಿ ಮನೆಯಲ್ಲಿ ಉಮ್ರಾವ್ (ರೇಖಾ) ಮತ್ತು ನವಾಬ್ ಸುಲ್ತಾನ್ ನಡುವಿನ ರೊಮ್ಯಾಂಟಿಕ್ ದೃಶ್ಯವನ್ನು ಚಿತ್ರೀಕರಿಸಲಾಗುತ್ತಿತ್ತು. ಆ ಸಮಯದಲ್ಲಿ ರೇಖಾ (Rekha) ಸೂಪರ್‌ಸ್ಟಾರ್‌ ಆಗಿದ್ದರಿಂದ, ಶೂಟಿಂಗ್ ಸ್ಥಳದ ಸುತ್ತ ಗ್ರಾಮಸ್ಥರ ದೊಡ್ಡ ಗುಂಪು ಸೇರಿಬಿಟ್ಟಿತ್ತು. ಅದು ಹೇಗೋ ಅಂದು ಅಲ್ಲಿ ಪ್ರಣಯ ದೃಶ್ಯ ನಡೆಯುತ್ತಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಜನರ ಕುತೂಹಲ ಮೇರೆಮೀರಿತು.

'ಶೂಟಿಂಗ್ ಮಾಡಿ, ಶೂಟಿಂಗ್ ಮಾಡಿ..'

ಹಲವರು ಕಿಟಕಿಗಳ ಮೂಲಕ ಒಳಗೆ ಇಣುಕಲು ನೋಡಲು ಪ್ರಯತ್ನಿಸಿದರು, ಇನ್ನೂ ಕೆಲವರು ಬಾಗಿಲಿಗೆ ಅಂಟಿಕೊಂಡು ದೃಶ್ಯ ನೋಡಲು ಪ್ರಯತ್ನಿಸಿದರು. ಪರಿಸ್ಥಿತಿ ಅದೆಷ್ಟು ಉದ್ವಿಗ್ನವಾಗಿತ್ತು ಎಂದರೆ, ಚಿತ್ರತಂಡ ಶೂಟಿಂಗ್ ಮುಂದೂಡಲು ಪ್ರಯತ್ನಿಸಿದರೂ ಜನರು ಹಿಂತಿರುಗಲು ಸಿದ್ಧರಾಗದೇ 'ಶೂಟಿಂಗ್ ಮಾಡಿ, ಶೂಟಿಂಗ್ ಮಾಡಿ..' ಎಂದು ಕೂಗಿ ಚಿತ್ರತಂಡ ಅಲ್ಲಿಂದ ಹೊರಡಲು ಗ್ರಾಮಸ್ಥರು ಬಿಡಲೇ ಇಲ್ಲ. ಫಾರೂಕ್ ಶೇಖ್, ರೇಖಾ ಮತ್ತು ಇಡೀ ಚಿತ್ರತಂಡ ಒತ್ತಡದಲ್ಲೇ ಕೆಲಸ ಮಾಡಬೇಕಾಯಿತು.

ಗುಂಡು ಹಾರಿಸಬೇಕಾಯ್ತು

ಏನೇ ಪ್ರಯತ್ನಿಸಿದರೂ ಜನಸಂದಣಿ ನಿಯಂತ್ರಣಕ್ಕೆ ಬರದಿದ್ದಾಗ, ಭದ್ರತಾ ದೃಷ್ಟಿಯಿಂದ ಗುಂಡು ಹಾರಿಸಬೇಕಾಯ್ತು. ಕೆಲವು ಜನರು ಬಂದೂಕುಗಳೊಂದಿಗೆ ಕಾಣಿಸಿಕೊಂಡಿದ್ದರಿಂದ, ವಾತಾವರಣ ತಿಳಿಯಾಗುವ ಬದಲು ಇನ್ನಷ್ಟು ಭಯಾನಕವಾಯಿತು. ಜನರು ಭಯಭೀತರಾಗಿ ಹೋಗುವ ಬದಲು ಅಲ್ಲೇ ಕಲ್ಲಿನಂತೆ ನಿಂತೇಬಿಟ್ಟರು. ಅಲ್ಲಿ ಆ ಕ್ಷಣಕ್ಕೆ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿ ಚಿತ್ರತಂಡ ಶೂಟಿಂಗ್‌ ಜೊತೆ ಆ ಭಾರೀ ಒತ್ತಡವನ್ನೂ ಮ್ಯಾನೇಜ್ ಮಾಡಬೇಕಾಯ್ತು.

ಅಂದು ಆ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ನಟ ಫಾರೂಕ್ ಶೇಖ್ ಅವರು 28 ಡಿಸೆಂಬರ್ 2013 ರಂದು ಹೃದಯಾಘಾತದಿಂದ ನಿಧನರಾದರು. ಆದರೆ ಅವರನಟನೆಯ ಜೊತೆಗೆ, ಇಂತಹ ಅಪರೂಪದ ಅನುಭವಗಳು ಕೂಡ ಭಾರತೀಯ ಸಿನೆಮಾರಂಗದ ಇತಿಹಾಸದಲ್ಲಿ ಕುತೂಹಲಕರ ಅಧ್ಯಾಯಗಳಾಗಿ ಹಾಗೇ ಉಳಿದಿರತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸ್ಮೃತಿ ಮಂಧನಾ To ತಮನ್ನಾ, 2025ರಲ್ಲಿ ಕೋಲಾಹಲ ಸೃಷ್ಟಿಸಿದ ಟಾಪ್ 5 ಬ್ರೇಕ್ ಅಪ್
ಚಿತ್ರರಂಗಕ್ಕೇ ಗುಡ್​ಬೈ ಹೇಳಿ, ದಾಖಲೆಯನ್ನೂ ಸೃಷ್ಟಿಸಿದ ಬೆನ್ನಲ್ಲೇ ಕುಸಿದು ಬಿದ್ದ Thalapathy Vijay!​ ಏನಿದು ಘಟನೆ