
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಈಗ ತಮ್ಮ ಮುಂಬರುವ ಸಿನಿಮಾ 'ಸಿತಾರೆ ಜಮೀನ್ ಪರ್' ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, 'ಸಿತಾರೆ ಜಮೀನ್ ಪರ್' ಬಿಡುಗಡೆಯ ನಂತರ ಅವರು ಮಹಾಭಾರತ ಚಿತ್ರ ನಿರ್ಮಾಣ ಮಾಡಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದು ಅವರ ವೃತ್ತಿಜೀವನದ ಕೊನೆಯ ಚಿತ್ರವೂ ಆಗಿರಬಹುದು ಎಂದು ಸುಳಿವು ನೀಡಿದ್ದಾರೆ. ಆಮಿರ್ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ.
ಆಮಿರ್ ಖಾನ್ ಹೇಳಿದ್ರು, 'ಇದು ಲೇಯರ್ಡ್, ಇದರಲ್ಲಿ ಭಾವನೆಗಳಿವೆ, ಇದರ ವ್ಯಾಪ್ತಿ ದೊಡ್ಡದು, ಜಗತ್ತಿನಲ್ಲಿ ನೀವು ಕಾಣೋ ಎಲ್ಲವೂ ಮಹಾಭಾರತದಲ್ಲಿ ಸಿಗುತ್ತೆ.' ಆಮಿರ್ ಖಾನ್ 'ಮಹಾಭಾರತ'ವನ್ನು ಯಾವಾಗಲೂ ಜೀವಂತಗೊಳಿಸಲು ಬಯಸಿದ್ದರು ಎಂದೂ ಹೇಳಿದರು.
ಅವರ ಕೊನೆಯ ಚಿತ್ರದ ಬಗ್ಗೆ ಕೇಳಿದಾಗ, 'ಬಹುಶಃ ಇದನ್ನು ಮಾಡಿದ ನಂತರ ನಾನು ಮಾಡಲು ಏನೂ ಉಳಿದಿಲ್ಲ ಅಂತ ಅನಿಸಬಹುದು. ನಾನು ಇದರ ನಂತರ ಏನನ್ನೂ ಮಾಡಲು ಸಾಧ್ಯವಿಲ್ಲ, ಏಕೆಂದರೆ ಈ ಚಿತ್ರದ ವಿಷಯ ಹಾಗೆ ಇರುತ್ತೆ. ನಾನು ಕೆಲಸ ಮಾಡುತ್ತಲೇ ಸಾಯಬೇಕೆಂದು ಬಯಸುತ್ತೇನೆ, ಆದರೆ ನೀವು ಕೇಳುತ್ತಿರುವುದರಿಂದ, ನಾನು ಇದನ್ನೇ ಯೋಚಿಸಬಲ್ಲೆ. ಬಹುಶಃ ಇದರ ನಂತರ ನನಗೆ ಬೇರೆ ಏನನ್ನೂ ಮಾಡಬೇಕಾಗಿಲ್ಲ ಅಂತ ಅನಿಸಬಹುದು' ಎಂದರು.
ಆಮಿರ್ ಖಾನ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸೂಪರ್ ಫ್ಲಾಪ್ ಆಗಿತ್ತು. ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, ಅವರು ಶೀಘ್ರದಲ್ಲೇ 'ಸಿತಾರೆ ಜಮೀನ್ ಪರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜೂನ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆಮಿರ್ ಖಾನ್ ಜೊತೆ ಜೆನೆಲಿಯಾ ಡಿಸೋಜಾ ಕೂಡ ನಟಿಸಿದ್ದಾರೆ. ಇದರ ನಂತರ 'ಹ್ಯಾಪಿ ಪಟೇಲ್', 'ಚಾರ್ ದಿನ್ ಕಿ ಚಾಂದನಿ', 'ಮಹಾಭಾರತ' ಜೊತೆಗೆ ಜೋಯಾ ಅಖ್ತರ್ ಅವರ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ನಾನು ಒಂದು ರೂಪಾಯಿ ದುಡಿಯುತ್ತಿಲ್ಲ!
ಅಂದಹಾಗೆ ಅವರ ಮಗಳು ಇರಾ ಖಾನ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, “ನಾನು 28 ವರ್ಷ ಆದರೂ ಕೂಡ ಏನೂ ದುಡಿಯುತ್ತಿಲ್ಲ. ನನಗೆ ನಿಷ್ಪ್ರಯೋಜಕ ಎಂಬ ಭಾವನೆ ಬರುತ್ತಿದೆ” ಎಂದು ಬೇಸರ ಹೊರಹಾಕಿದ್ದರು. ಆ ವೇಳೆ ಆಮಿರ್ ಖಾನ್ ಅವರು “ನಾನು ನಿನ್ನನ್ನು ನೋಡಿಕೊಳ್ತೀನಿ” ಎಂದು ಹೇಳಿದ್ದಾರೆ. ಆಮಿರ್ ಖಾನ್ ಅವರು ಮೊದಲು ರೀನಾ ದತ್ತ ಅವರನ್ನು ಮದುವೆಯಾಗಿದ್ದರು. ಆಮಿರ್-ರೀನಾ ದತ್ತಗೆ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ಜುನೈದ್ ಖಾನ್ ಕೂಡ ಒಬ್ಬರು, ಈಗಾಗಲೇ ಅವರು ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಬ್ಯುಸಿ ಆದ ಆಮಿರ್ ಮಗ!
ಅಂದಹಾಗೆ ಎರಡನೇ ಬಾರಿಗೆ ಕಿರಣ್ ರಾವ್ ಜೊತೆ ಅವರು ಮದುವೆಯಾಗಿದ್ದರು. ಇವರಿಗೆ ಆಜಾದ್ ಎಂಬ ಮಗನಿದ್ದಾನೆ. ಅಂದಹಾಗೆ ಈಗ ಅವರು ಗೌರಿ ಎನ್ನುವವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ, ಆದರೆ ನಾನು ಗೌರಿಯನ್ನು ಮದುವೆ ಆಗೋದಿಲ್ಲ ಎಂದು ಆಮಿರ್ ಖಾನ್ ಹೇಳಿದ್ದರು. ಆಗಾಗಾ ಅವರು ಗೌರಿ ಜೊತೆ ಹೊರಗಡೆ ಸುತ್ತಾಡುತ್ತಿರುತ್ತಾರೆ, ಅಷ್ಟೇ ಅಲ್ಲದೆ ಮೊದಲ ಪತ್ನಿ ಮನೆಗೆ ಗೌರಿಯನ್ನು ಕರೆದುಕೊಂಡು ಕೂಡ ಹೋಗಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.