36 ವರ್ಷದ ಬಳಿಕ ಒಂದಾಗ್ತಿದ್ದಾರೆ ಮಣಿ ರತ್ನಂ-ಕಮಲ್ ಹಾಸನ್: ಕನಸಿನ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಎಂಟ್ರಿ

Published : Apr 29, 2023, 11:08 AM IST
36 ವರ್ಷದ ಬಳಿಕ ಒಂದಾಗ್ತಿದ್ದಾರೆ ಮಣಿ ರತ್ನಂ-ಕಮಲ್ ಹಾಸನ್: ಕನಸಿನ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ಎಂಟ್ರಿ

ಸಾರಾಂಶ

36 ವರ್ಷದ ಬಳಿಕ ಮತ್ತೆ ಒಂದಾಗ್ತಿದ್ದಾರೆ ಖ್ಯಾತ ನಿರ್ದೇಶಕ ಮಣಿ ರತ್ನಂ ಮತ್ತು ಕಮಲ್ ಹಾಸನ್ ಇಬ್ಬರೂ ಒಂದಾಗುತ್ತಿದ್ದಾರೆ. ಕನಸಿನ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  

ಭಾರತೀಯ ಸಿನಿಮಾರಂಗದ ಇಬ್ಬರೂ ಪ್ರಸಿದ್ಧ ಐಕಾನ್‌ಗಳು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ತಮಿಳಿನ ಖ್ಯಾತ ನಟ ಸಕಲಕಲಾವಲ್ಲಭ ಕಮಲ್ ಹಾಸನ್ ಮತ್ತು ಖ್ಯಾತ ನಿರ್ದೇಶಕ ಮಣಿ ರತ್ನಂ ಇಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ, ಅದೂ ಬರೋಬ್ಬರಿ 36 ವರ್ಷಗಳ ಬಳಿಕ ಎನ್ನುವುದೇ ವಿಶೇಷ. ಇಬ್ಬರೂ ಪ್ರಸಿದ್ಧ ವ್ಯಕ್ತಿಗಳು ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವುದು ಕೋಟ್ಯಂತರ ಅಭಿಮಾನಿಗಳ ಕನಸಾಗಿತ್ತು. ಇದೀಗ ಆ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಈ ಜೋಡಿ 1987ರಲ್ಲಿ ಬಂದ ಮಾಸ್ಟರ್‌ಪೀಸ್ 'ನಾಯಕನ್' ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಆ ಸಿನಿಮಾ ಬಳಿಕ ಇಬ್ಬರೂ ಮತ್ತೆ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಇದೀಗ 36 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಯೇ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಅಂದಹಾಗೆ ಮಣಿರತ್ನಂ  ಮತ್ತು ಕಮಲ್ ಹಾಸನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಕಳೆದ ಒಂದು ವರ್ಷದಿಂದ ಕೇಳಿ ಬರುತ್ತಿದೆ. ಆದರೀಗ ಕಾಲ ಕೂಡಿಬಂದಿದೆ.  KH234 ಹೆಸರಿನಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಕಮಲ್ ಮತ್ತು ಮಣಿ ರತ್ನಂ ಸಿನಿಮಾ ಪ್ರಸಿದ್ಧ ಲೈಕಾ ಪ್ರೊಡಕ್ಷನ್‌ನಲ್ಲಿ ಮೂಡಿ ಬರಲಿದೆ. ಅಂದಹಾಗೆ ಈ ಸಿನಿಮಾಗೆ ನಯನತಾರಾ ನಾಯಕಿಯಾಗಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿತ್ತು. ಕಮಲ್ ಹಾಸನ್ ಜೊತೆ ನಯನತಾರಾ ಮಿಂಚಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಬಳಿಕ ನಟಿ ತ್ರಿಷಾ ಹೆಸರು ಕೇಳಿ ಬರುತ್ತಿತ್ತು. ಆದರೆ ಈಗ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಕೇಳಿಬರುತ್ತಿದೆ. 

ಕಮಲ್ ಹಾಸನ್ ಮತ್ತು ಮಣಿ ರತ್ನಂ ಸಿನಿಮಾಗೆ ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ. ಅದು ಮತ್ಯಾರು ಅಲ್ಲ ವಿದ್ಯಾ ಬಾಲನ್. ನಯನತಾರಾ ಮತ್ತು ತ್ರಿಷಾ ಇಬ್ಬರೂ ಕಮಲ್ ಹಾಸನ್ ಜೊತೆ ತುಂಬಾ ಚಿಕ್ಕವರಾಗಿ ಕಾಣಿಸುತ್ತಾರೆ. ಹಾಗಾಗಿ ವಿದ್ಯಾ ಬಾಲನ್ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ವಿದ್ಯಾ ಬಾಲನ್ ಈಗಾಗಲೇ ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೇ ಕಮಲ್ ಹಾಸನ್ ಜೊತೆ  ನಟಿಸುವ ಮೂಲಕ ಸೌತ್ ಸಿನಿಮಾರಂಗದ ಕಡೆ ಮುಖ ಮಾಡಲಾಗಿದ್ದಾರೆ.  

ಕಮಲ್ ಹಾಸನ್ ಅವರ ಆಸ್ತಿ, ಐಷಾರಾಮಿ ಜೀವನಶೈಲಿ ಮತ್ತು ನಿವ್ವಳ ಮೌಲ್ಯ ಎಷ್ಟಿದೆ

ಕಮಲ್ ಹಾಸನ್ ಮತ್ತು ಮಣಿ ರತ್ನಂ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೂ ಯಾರೆಲ್ಲ ಈ ಸಿನಿಮಾದಲ್ಲಿ ಇರಲಿದ್ದಾರೆ, ಏನೆಲ್ಲ ವಿಶೇಷತೆ ಇರಲಿದೆ ಎನ್ನುವುದು ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ. ಹೊಸ ಸಿನಿಮಾದ ಬಗ್ಗೆ ಸದ್ಯದಲ್ಲೇ ಅಧಿಕೃತ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. 

ನಿರ್ದೇಶಕ ರೂಮಿಗೆ ಕರೆದಾಗ ವಿದ್ಯಾ ಬಾಲನ್ ಮಾಡಿದ್ದೇನು? ಸಿನಿರಂಗದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಕಮಲ್ ಹಾಸನ್ ಸದ್ಯ ಇಂಡಿಯನ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಆಗಾಗಲೇ ಮುಕ್ತಾಯವಾಗಿ ರಿಲೀಸ್‌ಗೆ ರೆಡಿಯಾಗಬೇಕಿತ್ತು. ಅರ್ಧಕ್ಕೆ ನಿಂತಿದ್ದ ಈ ಸಿನಿಮಾ ಇದೀಗ ಮತ್ತೆ ಪ್ರಾರಂಭವಾಗಿದ್ದು ಸದ್ಯದಲ್ಲೇ ಮುಗಿಯಲಿದೆ. ಇನ್ನು ನಿರ್ದೇಶಕ ಮಣಿ ರತ್ನಂ ಪೊನ್ನಿಯಿನ್ ಸೆಲ್ವನ್-2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕಮಲ್ ಹಾಸನ್ ಕೂಡ ಇಂಡಿಯನ್-2 ಮುಗಿಸಿ ಮಣಿ ರತ್ನಂ ಜೊತೆ ಹೊಸ ಸಿನಿಮಾ ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?