ಅಮೀರ್ ಖಾನ್ ಹಿಂದೂ ವಿರೋಧಿ ನಟ ಎಂದ BJP ಸಂಸದ

By Suvarna NewsFirst Published Oct 22, 2021, 3:00 PM IST
Highlights
  • ವಿವಾದಾತ್ಮಕ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ನಟ ಅಮೀರ್ ಖಾನ್ ಮೇಲೆ ವಾಗ್ದಾಳಿ
  • ಜಾಹೀರಾತು ಹಿಂದೂಗಳಲ್ಲಿ ಅಶಾಂತಿ ಸೃಷ್ಟಿಸುತ್ತಿದೆ ಎಂದ ಅನಂತಕುಮಾರ ಹೆಗಡೆ

ಕರ್ನಾಟಕ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ( Anantkumar Hegde) ವಿವಾದಾತ್ಮಕ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ನಟ ಅಮೀರ್ ಖಾನ್(Amir Khan) ಮೇಲೆ ವಾಗ್ದಾಳಿ ನಡೆಸಿದ್ದಾರೆ. ಅವರು ನಟನನ್ನು ಹಿಂದೂ ವಿರೋಧಿ ಎಂದು ಕರೆದಿದ್ದು ಅವರ ಜಾಹೀರಾತು ಹಿಂದೂಗಳಲ್ಲಿ ಅಶಾಂತಿ ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಸೀಟ್ ಲಿಮಿಟೆಡ್ ನ ಟಿವಿ ಜಾಹೀರಾತಿನಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಕಾಣಿಸಿಕೊಂಡಿದ್ದು, ಅವರು ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಜನರಿಗೆ ಸಲಹೆ ನೀಡುತ್ತಾರೆ.

ಸಮಂತಾ-ನಾಗ್ ವಿಚ್ಚೇದನೆ: ಡಿವೋರ್ಸ್ ಎಕ್ಸ್‌ಪರ್ಟ್ ಅಮೀರ್‌ಗೆ ಹಿಗ್ಗಾಮುಗ್ಗ ಬೈದ ಕಂಗನಾ

ಜಾಹೀರಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹೆಗ್ಡೆ, ಕಂಪನಿಯ ಎಂಡಿ ಮತ್ತು ಸಿಇಒ ಅನಂತ್ ವರ್ಧನ್ ಗೋಯೆಂಕಾಗೆ ಹಿಂದುಗಳಲ್ಲಿ ಅಶಾಂತಿ ಸೃಷ್ಟಿಸುವ ಜಾಹೀರಾತನ್ನು ಅರಿತುಕೊಳ್ಳುವಂತೆ ಕೇಳಿಕೊಂಡಿದ್ದಾರೆ.

ಉತ್ತರ ಕನ್ನಡ ಸಂಸದರು ಗೋಯೆಂಕಾಗೆ ಬರೆದ ಪತ್ರದಲ್ಲಿ, ನಿಮ್ಮ ಕಂಪನಿಯ ಇತ್ತೀಚಿನ ಜಾಹೀರಾತಿನಲ್ಲಿ ಅಮೀರ್ ಖಾನ್ ಬೀದಿಗಳಲ್ಲಿ ಪಟಾಕಿ ಸಿಡಿಸಬೇಡಿ ಜನರಿಗೆ ಸಲಹೆ ನೀಡುತ್ತಾರೆ. ಉತ್ತಮ ಸಂದೇಶವನ್ನು ನೀಡುತ್ತಿದ್ದಾರೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಕಾಳಜಿಗೆ ಚಪ್ಪಾಳೆ ಬೇಕು ಎಂದಿದ್ದಾರೆ.

ನಟ ಮತ್ತು ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಈ ನಿಟ್ಟಿನಲ್ಲಿ, ಜನರು ಶುಕ್ರವಾರದಂದು ನಮಾಜ್ ಹೆಸರಿನಲ್ಲಿ ರಸ್ತೆಗಳನ್ನು ಬ್ಲಾಕ್ ಮಾಡುವುದು ಮತ್ತು ಮುಸ್ಲಿಮರಿಂದ ಇತರ ಪ್ರಮುಖ ಹಬ್ಬದ ದಿನಗಳಲ್ಲಿ ಜನರು ರಸ್ತೆಗಳಲ್ಲಿ ಎದುರಿಸುವ ಇನ್ನೊಂದು ಸಮಸ್ಯೆಯನ್ನು ಪರಿಹರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದಿದ್ದಾರೆ.

ನಮಾಜ್ ಸಮಯದಲ್ಲಿ ಮುಸ್ಲಿಮರು ಬಿಡುವಿಲ್ಲದ ರಸ್ತೆಗಳನ್ನು ತಡೆದು ನಮಾಜ್ ಮಾಡಿದಾಗ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಟ್ರಾಫಿಕ್‌ನಲ್ಲಿ ತೀವ್ರ ಕಷ್ಟವಾಗುತ್ತದೆ ಎಂದು ಹೆಗ್ಡೆ ಗಮನಸೆಳೆದರು.

ಜಾಹೀರಾತಿನಲ್ಲಿ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಕೂಡ ಎತ್ತಿ ತೋರಿಸಬೇಕು ಎಂದು ಅವರು ಹೇಳಿದ್ದಾರೆ. ನಿಮ್ಮ ಜಾಹೀರಾತುಗಳಲ್ಲಿ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಹೈಲೈಟ್ ಮಾಡಬೇಕು ಎಂದು ನಿಮ್ಮನ್ನು ವಿನಂತಿಸುತ್ತೇನೆ. ಪ್ರತಿದಿನ, ನಮ್ಮ ದೇಶದಲ್ಲಿ ಮಸೀದಿಗಳ ಮೇಲ್ಭಾಗದಲ್ಲಿ ಅಜಾನ್ ನೀಡಿದಾಗ ಮೈಕ್‌ಗಳಿಂದ ದೊಡ್ಡ ಶಬ್ದ ಹೊರಹೊಮ್ಮುತ್ತದೆ. ಆ ಶಬ್ದವು ಅನುಮತಿಸುವ ಶಬ್ದ ಮಿತಿಯನ್ನು ಮೀರಿದೆ ಎಂದಿದ್ದಾರೆ.

ನೀವು ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತುಂಬಾ ಉತ್ಸುಕರಾಗಿದ್ದೀರಿ. ನೀವು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದೀರಿ, ಶತಮಾನಗಳಿಂದಲೂ ಹಿಂದೂಗಳಿಗೆ ಮಾಡಿದ ತಾರತಮ್ಯವನ್ನು ನೀವು ಅನುಭವಿಸುತ್ತೀರಿ ಎಂದು ನನಗೆ ಗೊತ್ತಿದೆ. ಹಿಂದೂ ವಿರೋಧಿ ನಟರು ಯಾವಾಗಲೂ ಹಿಂದೂ ಭಾವನೆಗಳನ್ನು ಘಾಸಿಗೊಳಿಸುತ್ತಾರೆ ಆದರೆ ಅವರು ತಮ್ಮ ಸಮುದಾಯದ ತಪ್ಪು ಕೆಲಸಗಳನ್ನು ಬಹಿರಂಗಪಡಿಸಲು ಎಂದಿಗೂ ಪ್ರಯತ್ನಿಸುವುದಿಲ್ಲ ಎಂದಿದ್ದಾರೆ.

ನಿಮ್ಮ ಕಂಪನಿಯ ಜಾಹಿರಾತು ಹಿಂದೂಗಳಲ್ಲಿ ಅಶಾಂತಿಯನ್ನು ಸೃಷ್ಟಿಸಿರುವುದನ್ನು ಅರಿತುಕೊಳ್ಳಲು ನಾನು ವಿನಂತಿಸುತ್ತೇನೆ. ಭವಿಷ್ಯದಲ್ಲಿ ನಿಮ್ಮ ಸಂಸ್ಥೆಯು ಹಿಂದೂ ಭಾವನೆಯನ್ನು ಗೌರವಿಸುತ್ತದೆ. ಯಾವುದೇ ರೀತಿಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಅದನ್ನು ನೋಯಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಬರೆದಿದ್ದಾರೆ.

click me!