
ರಾಜಸ್ಥಾನ(ಜ. 11) ಸಲ್ಮಾನ್ ಖಾನ್ (Salman Khan) ಮತ್ತು ಕೃಷ್ನಮೃಗ (Black Bucks) ಬೇಟೆ ಪ್ರಕರಣ ನ್ಯಾಯಾಲಯದಲ್ಲಿ (Court) ವಿಚಾರಣೆಯನ್ನು ಎದುರಿಸಿತ್ತು ಪ್ರಕರಣದಲ್ಲಿ ಸಲ್ಮಾನ್ ಖಾನ್ ಗೆ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿತ್ತು. ಸಲ್ಮಾನ್ ಖಾನ್ ಬೇಟೆಯಾಡಿದ ಕೃಷ್ಣಮೃಗದ ಸ್ಮರಣಾರ್ಥವಾಗಿ ದೊಡ್ಡ ಸ್ಮಾರ ಕ ನಿರ್ಮಾಣ ಮಾಡಲು ಬಿಷ್ಣೋಯಿ (Bishnoi community)ಸಮುದಾಯ ಮುಂದಾಗಿದೆ.
1998 ರಲ್ಲಿ ಹಮ್ ಸಾಥ್ ಸಾಥ್ ಹೇ ಚಿತ್ರದ ಶೂಟಿಂಗ್ ಗೆ ತೆರಳಿದ್ದ ವೇಳೆ ಸಲ್ಮಾನ್ ಖಾನ್ ಸಫಾರಿಗೆ ಹೋಗಿದ್ದರು. ಈ ವೇಳೆ ಕೃಷ್ಣಮೃಗ ಬೇಟೆಯಾಡಿದ್ದರು. ಕೃಷ್ಣಮೃಗದ ಮೃತದೇಹ ಸಿಕ್ಕ ಜಾಗದಲ್ಲಿ ಪಂಚ ಲೋಹ ಬಳಸಿ ಕೃಷ್ಣ ಮೃಗ ಪ್ರತಿಮೆ ನಿರ್ಮಿಸಿ ಜತೆಗೆ ಸ್ಮಾರಕ ನಿರ್ಮಾಣಕ್ಕೆ ಸಮುದಾಯ ಮುಂದಾಗಿದೆ.
ವನ್ಯಜೀವಿಗಳಲ್ಲು ಮತ್ತು ಪರಿಸರವನ್ನು ಬಿಷ್ಣೋಯಿ ಸಮಾಜ ಆರಾಧನೆ ಮಾಡಿಕೊಂಡು ಬಂದಿದೆ. ಜೋಧಪುರದ ಈ ಸಮುದಾಯ ಸಲ್ಮಾನ್ ಎದರಿಗೆ ನಿಂತಿದ್ದು ಒಂದು ಇತಿಹಾಸ, ಭಾವನೆಗಳಿಗೆ ಧಕ್ಕೆಯಾಧ ಕಾರಣಕ್ಕೆ ಸಮದಾಯ ತಿರುಗಿಬಿದ್ದು ವರ್ತಿಸಿದ ರೀತಿಯೇ ಒಂದು ರೋಚಕ ಕತೆ.
ನಮ್ಮ ಗುರು ಜಂಬೇಶ್ವರ ಅವರ ಚಿಂತನೆಗಳನ್ನು ಸಾರಲು ಈ ಸ್ಮಾರಕ ದೊಡ್ಡ ಕೊಡುಗೆಯಾಗಲಿದೆ. ಪ್ರಾಣಿ ಕೊಲ್ಲುವುದು ಮತ್ತು ಮರ ಕಡಿಯುವುದನ್ನು ನಾವು ಒಪ್ಪಲು ಸಾಧ್ಯವೇ ಇಲ್ಲ. ನಮ್ಮೊಳಗಿನ ಕಿಡಿ ಹಾಗೆಯೇ ಇದೆ ಎಂದು ಸಮುದಾಯದ ವ್ಯಕ್ತಿಯೊಬ್ಬರು ಹೇಳುತ್ತಾರೆ.
ಅಳಿವಿನ ಅಂಚಿಗೆ ತಲುಪಿರುವ ಕೃಷ್ಣಮೃಗವನ್ನು ಸಲ್ಮಾನ್ ಖಾನ್ ಬೇಟೆಯಾಡಿದ್ದರು. ರಾಜಸ್ಥಾನದ ಸೆಷನ್ಸ್ ಕೋರ್ಟ್ ನಲ್ಲಿ ಖಾನ್ ವಿಚಾರಣೆಯನ್ನು ಎದುರಿಸಿದ್ದಾರೆ, ಕೋರ್ಟ್ ಐದು ವರ್ಷಗಳ ಶಿಕ್ಷೆಯನ್ನು ನೀಡಿದ್ದು ಖಾನ್ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿನಿಮಾದ ಸಹನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಕೊಠಾರಿ ಅವರನ್ನು ಪ್ರಕರಣದಿಂದ ಖುಲಾಸೆ ಮಾಡಲಾಗಿದೆ.
ಮಹಾತಾಯಿ: ಬಿಷ್ಣೋಯಿ ಸಮುದಾಯಕ್ಕೆ ಸೇರಿದ ತಾಯಿ ಪ್ರಾಣಿಗಳ ವಿಚಾರದಲ್ಲೂ ಬೇಧಭಾವ ಮಾಡದೆ ಮರಿ ಜಿಂಕೆಗೆ ಹಾಲುಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಜೋಧ್ಪುರದ ಬಿಷ್ಣೋಯಿ ಸಮುದಾಯದ ಮಹಿಳೆಯೊಬ್ಬರು ಮರಿ ಜಿಂಕೆಗೆ ಹಾಲುಣಿಸುತ್ತಿರುವ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಹಿಳೆಯ ಮಾತೃ ವಾತ್ಸಲ್ಯಕ್ಕೆ ಎಲ್ಲರೂ ತಲೆದೂಗಿದ್ದು, ಅವರೊಬ್ಬರು ಜಗತ್ತಿನ ಶ್ರೇಷ್ಠ ತಾಯಿಯಾಗಿದ್ದು ಅವರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.
ಬಿಷ್ಣೋಯಿ ಜನಾಂಗ: ನಿಸರ್ಗದ ಆರಾಧನೆ ಮತ್ತು ವನ್ಯಜೀವಿ ರಕ್ಷಣೆಗೆ ಬಿಷ್ಣೋಯಿ ಜನಾಂಗ ಸದಾ ಮುಂದೆ. ಕೃಷ್ಣಮೃಗವನ್ನು ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ ಜನ್ಮ ಎಂದೇ ಸಮುದಾಯ ಭಾವಿಸಿದೆ. ಇದೇ ಕಾರಣಕ್ಕೆ ಮೃಗವನ್ನು ಜಾಂಬಾಜಿ ಎಂದು ಕರೆಯಲಾಗುತ್ತದೆ. ಕಾಡು ಪ್ರಾಣಿಗಳ ಹತ್ಯೆಯನ್ನೂ ಅವರು ಎಂದಿಗೂ ಸಹಿಸಲ್ಲ. ಹದಿನೈದನೇ ಶತಮಾನದಿಂದ ಇತಿಹಾಸ ಹೊಂದಿರುವ ಸಮುದಾಯ ಖಾನ್ ಗೆ ವಿರುದ್ಧವಾಗಿ ಹೋರಾಟ ನಡೆಸಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.