ಹೊಸ ಮನೆ ಖರೀದಿಸಿದ ನಟಿ ವೈಷ್ಣವಿ; ಗೃಹಪ್ರವೇಶ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

By Shruiti G Krishna  |  First Published May 9, 2022, 3:12 PM IST

ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 8(Bigg Boss Kannada season 8) ಸ್ಪರ್ಧಿ ವೈಷ್ಣವಿ ಗೌಡ(Vaishnavi Gowda) ಹೊಸ ಮನೆ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಹೊಸ ಮನೆ ಖರೀದಿ ಮಾಡಿರುವ ವೈಷ್ಣವಿ ಇತ್ತೀಚಿಗಷ್ಟೆ ಗೃಹಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.


ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ಕನ್ನಡ ಸೀಸನ್ 8(Bigg Boss Kannada season 8) ಸ್ಪರ್ಧಿ ವೈಷ್ಣವಿ ಗೌಡ(Vaishnavi Gowda) ಹೊಸ ಮನೆ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಹೊಸ ಮನೆ ಖರೀದಿ ಮಾಡಿರುವ ವೈಷ್ಣವಿ ಇತ್ತೀಚಿಗಷ್ಟೆ ಗೃಹಪ್ರವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸಂಪ್ರದಾಯಬದ್ಧವಾಗಿ ಶಾಸ್ತ್ರೋಕ್ತವಾಗಿ ನಡೆದ ಗೃಹಪ್ರವೇಶ ಸಮಾರಂಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಸಹ ಭಾಗಿಯಾಗಿದ್ದರು. ವೈಷ್ಣವಿ ಜೊತೆ ಹೊಸ ಮನೆಯಲ್ಲಿ ಕುಳಿತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೃಹ ಪ್ರವೇಶ ಸಂಭ್ರಮದಲ್ಲಿ ವೈಷ್ಣವಿ ರೇಶ್ಮೆ ಸೀರಿಯಲ್ಲಿ ಮಿಂಚಿದ್ದಾರೆ. ವೈಷ್ಣವಿ ಜೊತೆ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ರಾಜೀವ್ ಮತ್ತು ಪತ್ನಿ, ದಿವ್ಯ ಉರುಡುಗ ಮತ್ತು ಅರವಿಂದ್ ಕೆಪಿ ಹಾಗೂ ರಘು ವೈನ್ ಸ್ಟೋರ್ ಭಾಗಿಯಾಗಿದ್ದರು. ಎಲ್ಲರೂ ವೈಷ್ಣವಿ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸುದ್ದರು. ಮೇ 8ರಂದು ನಡೆದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

Tap to resize

Latest Videos

ಎಲ್ಲರೂ ವೈಷ್ಣವಿ ಮನೆಯ ಗೃಹಪ್ರವೇಶದ ಫೋಟೋ ಶೇರ್ ಮಾಡಿ ವೈಷ್ಣವಿಗೆ ವಿಶ್ ಮಾಡಿದೆ. ನಟ ರಾಜೀವ್ ಫೋಟೋ ಶೇರ್ ಮಾಡಿ, 'ಅಭಿನಂದನೆಗಳು ವೈಷ್ಣವಿ. ಇದು ಅದ್ಭುತವಾದ ಗೃಹಪ್ರವೇಶದ ಕಾರ್ಯಕ್ರಮವಾಗಿತ್ತು. ಇಡೀ ಕುಟುಂಬಕ್ಕೆ ಒಳ್ಳೆಯದಾಗಲಿ. ನನ್ನ ಎಲ್ಲಾ ಸ್ನೇಹಿತರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವಾಗಿದೆ. ಲವ್ ಯು ಆಲ್' ಎಂದು ಹೇಳಿದ್ದಾರೆ.

ಹಳ್ಳಿ ಹಕ್ಕಿಯಾದ 'ಬಿಗ್ ಬಾಸ್' ವೈಷ್ಣವಿ ಗೌಡ ; ವಿಭಿನ್ನ ಸಿನಿಮಾದಲ್ಲಿ 'ಅಗ್ನಿಸಾಕ್ಷಿ' ನಟಿ

ಇನ್ನು ವೈಷ್ಣವಿ ಗೌಡ ಸ್ನೇಹಿತ ರಘು ಕೂಡ ಫೋಟೋ ಶೇರ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ನಟ ವಿಜಯ್ ಸೂರ್ಯ ಸಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ನಟಿ ವೈಷ್ಣವಿ ಗೌಡ ಮತ್ತು ವಿಜಯ್ ಸೂರ್ಯ ಇಬ್ಬರೂ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಈ ಜೋಡಿ ರಿಯಾಲ್ ಲೈಫ್‌ನಲ್ಲೂ ಮದುವೆಯಾಗ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ವಿಜಯ್ ಸೂರ್ಯ ಮದುವೆಯಾಗುವ ಮೂಲಕ ಗಾಸಿಪ್‌ಗೆ ತೆರೆ ಎಳೆದಿದ್ದರು.

ನಟಿ ವೈಷ್ಣವಿ ಗೌಡ ಧಾರಾವಾಹಿ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ದೇವಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ಈ ಧಾರಾವಾಹಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು. ಬಳಿಕ ಪುನರ್ ವಿವಾಹ ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದರು. ಬಳಿಕ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಕಾಣಿಸಿಕೊಂಡ ವೈಷ್ಣವಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ವೈಷ್ಣವಿಗೆ ಸ್ಟಾರ್ ಗಿರಿತಂದುಕೊಟ್ಟ ಧಾರಾವಾಹಿ ಆಗಿದೆ.


ಸ್ಯಾಂಡಲ್‌ವುಡ್‌ ನಟಿಯರ ಐಕಾನಿಕ್‌ ಲುಕ್‌ ರೀ-ಕ್ರಿಯೇಟ್ ಮಾಡಿದ ಕಿರುತೆರೆ ಚೆಲುವೆಯರು!

 

ಧಾರಾವಾಹಿ ಜೊತೆಗೆ ವೈಷ್ಣವಿ ಸಿನಿಮಾಗಳಲ್ಲೂ ಮಿಂಚಿದ್ದಾರೆ. 2016ರಲ್ಲಿ ಡ್ರೆಸ್ ಕೋಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಬಳಿಕ ಗಿರ್ ಗಿಟ್ಲೆ ಸಿನಿಮಾಲ್ಲಿಯೂ ಕಾಣಿಸಿಕೊಂಡಿದ್ದರು. ಬಳಿಕ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಮನೆಯಲ್ಲಿ ವೈಷ್ಣವಿ ಕನ್ನಡಿಗರ ಮನಗೆಲ್ಲುವ ಮೂಲಕ ಮತ್ತೊಮ್ಮೆ ಸದ್ದು ಮಾಡಿದರು. ಬಿಗ್ ಬಾಸ್ ಬಳಿಕ ವೈಷ್ಣವಿ ಮತ್ತೆಲ್ಲೂ ಕಾಣಿಸಿಕೊಂಡಿರಲ್ಲ.

click me!