'ಸಮಯ ಸಿಕ್ಕಿದೆ' ಆಸ್ಪತ್ರೆಯಲ್ಲಿರುವ ಅಮಿತಾಬ್ ಹಂಚಿಕೊಂಡ ಜೀವನ ಪಾಠ

By Suvarna News  |  First Published Jul 19, 2020, 4:28 PM IST

ಆಸ್ಪತ್ರೆಯಲ್ಲಿರುವ ಅಮಿತಾಬ್ ಹಂಚಿಕೊಂಡ ಸಾಲುಗಳು/ ತಂದೆಯ ಕವಿತೆ ಸಾಲು ಹಂಚಿಕೊಂಡ ಬಿಗ್ ಬಿ/ ನನಗೆ ಜೀವನದಲ್ಲಿ ಏನು ಮಾಡಿದೆ ಎಂಬುದನ್ನು ಯೋಚನೆ ಮಾಡಲು ಸಮಯ ಸಿಕ್ಕಿದೆ


ಮುಂಬೈ(ಜು. 19)   ಕೊರೋನಾ ಸೋಂಕಿಗೆ ಗುರಿಯಾಗಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ತಂದೆ ಕವಿ ಹರಿವಂಶರಾಯ್ ಬಚ್ಚನ್ ಅವರ ಕವಿತೆ ಸಾಲುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬ್ಲಾಗ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.  ತಾನು ಇಂದು ಯಾವ ಸ್ಥಿತಿಯಲ್ಲಿ ಇದ್ದೇನೆ ಎಂಬುದಕ್ಕೆ ತನ್ನ ಭೂತಕಾಲದ ಕೆಲ ನಿರ್ಧಾರಗಳು ಕಾರಣ ಎಂಬ ಅರ್ಥದ ಸಾಲುಗಳನ್ನು ಹಂಚಿಕೊಂಡಿದ್ದಾರೆ.  ಇಂದಿನ ರಿಪ್ಲೆಕ್ಷನ್ ಗೆ ಅಂದಿನ ನಿರ್ಧಾರಗಳೇ ಕಾರಣ  ಎಂಬ ಅರ್ಥದಲ್ಲಿ  ಹೇಳಿದ್ದಾರೆ.

ಕೊರೋನಾ ಸೋಂಕು ದೃಢಪಟ್ಟ ನಂತರ ಅಮಿತಾಬ್ ಬಚ್ಚನ್ ಮುಂಬೈ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಅಮಿತಾಬ್ ನಂತರ ಪುತ್ರ ಅಭೀಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ಮೊಮ್ಮಗಳು ಆರಾಧ್ಯ ಸಹ ಆಸ್ಪತ್ರೆಗೆ ದಾಖಲಾಗಿದ್ದಾರೆ.

Latest Videos

undefined

ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

ಇದೊಂದು ಸಿಕ್ಕಾಪಟ್ಟೆ ಜಂಜಾಟದ ಜೀವನ, ಒಂದು ಕಡೆ ಕುಳಿತು ಯೋಚನೆ ಮಾಡಲು ಸಮಯ ಸಿಕ್ಕಿರಲಿಲ್ಲ,  ನಾನು ಏನು ಮಾಡಿದ್ದೇನೆ ಎಂದು ಯೋಚನೆ ಮಾಡುವ ಅವಕಾಶವೂ ಬಂದಿರಲಿಲ್ಲ, ನಾನು ಏನನ್ನು ನಂಬಿದ್ದೇನೋ ಅದನ್ನೇ ಹೇಳಿದ್ದೇನೆ.. ಅದರಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು.. ಎಂಬ ಲೈನ್ ಶೇರ್ ಮಾಡಿಕೊಂಡಿದ್ದಾರೆ. ಈಗ ನನಗೆ ಸಮಯ ಸಿಕ್ಕಿದೆ ಎಂದು ಸೇರಿಸಿದ್ದಾರೆ.

ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಕೇಳಿ ಸಾವಿರಾರು ಅಭಿಮಾನಿಗಳು ಬೇಗ ಗುಣಮುಖರಾಗಿರಿ ಎಂದು ಹಾರೈಸಿದ್ದರು.  ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಬಿಗ್ ಬಿ ಅಭಿಮಾನಿಗಳಿಗೆ ಧನ್ಯವಾದ ಮತ್ತು ವಂದನೆ ಸಲ್ಲಿಸಿದ್ದರು. 

click me!