
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್‌ಗೆ ಗಣೇಶನ ಹಬ್ಬಕ್ಕೆ ದೊಡ್ಡ ಸರ್ಪೈಸ್ ಸಿಗಲಿದೆ. ನಟ ಚಿರಂಜೀವಿ ಅವರ 152ನೇ ಸಿನಿಮಾ ಆಗಸ್ಟ್ 22ರಂದು ಅನೌನ್ಸ್ ಆಗಲಿದೆ.
ಆಗಸ್ಟ್ 22ರಂದು ಸಂಜೆ 4 ಗಂಟೆಗೆ ಸಿನಿಮಾ ಅನೌನ್ಸ್ ಮಾಡಲಿದ್ದು, ಸಿನಿಮಾದ ಮೋಷನ್ ಪೋಸ್ಟರ್ ಕೋಡಾ ಬಿಡುಗಡೆಯಾಗಲಿದೆ. ಅಂದು ನಟ ಚಿರಂಜೀವಿ ಬರ್ತ್‌ಡೇ ಅನ್ನೋದು ಇನ್ನೊಂದು ವಿಶೇಷ.
ರೆಡಿಯಾಗ್ತಿದೆ ಮಗಧೀರ ಸಿನಿಮಾ ನಟನ ಬಯೋಪಿಕ್..!
ಸಿನಿಮಾವನ್ನು ಕೊರಟಲ ಶಿವ ಮತ್ತು ನಿರಂಜನ್ ರೆಡ್ಡಿ ನಿರ್ದೇಶಿಸಲಿದ್ದು, ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ ಹಾಗೂ ಸುರೇಖಾ ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಬ್ಯಾನರ್‌ನಡಿ ಸಿನಿಮಾ ನಿರ್ಮಾಣ ಆಗಲಿದೆ.
ಈ ಹಿಂದೆ ಸಿನಿಮಾಗೆ ಆಚಾರ್ಯ ಎಂಬ ಟೈಟಲ್ ಇರಲಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದೇ ಹೆಸರು ಎಂಬುದು ಇನ್ನೂ ಅಂತಿಮವಾಗಿಲ್ಲ. ಸಿನಿಮಾ ಬಗ್ಗೆ ಶೀಘ್ರವೇ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಸಮಂತಾ ಸಂಭಾವನೆ ಬೇಡಿಕೆ ಕೇಳಿ ನಿರ್ಮಾಪಕರೇ ಸುಸ್ತು..!
ಈ ಸಿನಿಮಾದಲ್ಲಿ ಚಿರಂಜೀವಿ ಪುತ್ರ ರಾಮ್ ಚರಣ್ ಕೂಡಾ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಈ ಪಾತ್ರಕ್ಕಾಗಿ ನಟ ಮಹೇಶ್ ಬಾಬುನನ್ನು ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ನಟಿ ತ್ರಿಷಾ ಸಿನಿಮಾದಲ್ಲಿ ಚಿರಂಜೀವಿಗೆ ಜೊತೆಯಾಗಲಿದ್ದಾರೆ ಎಂಬ ಮಾಹಿತಿ ಇದ್ದು, ಸದ್ಯ ನಟಿ ರಾಂಗಿ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
Fansday Special Common Motion Poster Glimps Outnow Video Link : https://youtu.be/b0aVRz2blX0
Posted by Chiranjeevi on Tuesday, August 18, 2020
ಚಿರಂಜೀವಿ ಕೊನೆ ಬಾರಿಗೆ ಸೈರಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ನಯನ್‌ತಾರಾ, ತಮನ್ನಾ, ಕಿಚ್ಚ ಸುದೀಪ್ ಸೇರಿ ಪ್ರಮುಖ ತಾರಾಗಣ ಒಟ್ಟಿಗೆ ಕೆಲಸ ಮಾಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.