Akshara Singhs MMS: ಬಾಯ್​ಫ್ರೆಂಡ್​ ಜೊತೆ ನಟಿ ಅಕ್ಷರಾ ಸಿಂಗ್​ ಖಾಸಗಿ ವಿಡಿಯೋ ಲೀಕ್​?

By Suvarna News  |  First Published Apr 3, 2023, 5:42 PM IST

ಹಿಂದೊಮ್ಮೆ ಖಾಸಗಿ ವಿಡಿಯೋ ಲೀಕ್​ ಆಗಿ ಭಾರಿ ಸದ್ದು ಮಾಡಿದ ನಟಿ, ಗಾಯಕಿ ಅಕ್ಷರಾ ಸಿಂಗ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಏನು ವಿಷಯ? 
 


ಭೋಜ್‌ಪುರಿ ಸಿನಿಮಾದ ಜನಪ್ರಿಯ ನಟಿ ಅಕ್ಷರಾ ಸಿಂಗ್ (Akshara Singh) ನೆನಪಿದೆಯೆ?  ಅದ್ಭುತ ಗಾಯಕಿಯೂ ಆಗಿರುವ ಅಕ್ಷರಾ ಸಕತ್​ ಫೇಮಸ್​ ಆಗಿದ್ದು ಬಿಗ್​ಬಾಸ್ ಮೂಲಕ. ಆದರೆ ಭೋಜ್​ಪುರಿಯ ಈ ನಟಿ ಹಲವಾರು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿದ್ದು,  ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇವರು ಸಿನಿಮಾಗಳಿಗಿಂತಲೂ ಹೆಚ್ಚು ಫೇಮಸ್​ ಆಗಿರುವುದು,  ಸೋಷಿಯಲ್ ಮೀಡಿಯಾದ ಮೂಲಕ. ಕಳೆದ ಕೆಲ ತಿಂಗಳ ಹಿಂದೆ ಈಕೆಯ ಸುದ್ದಿ ಭಾರಿ ಸದ್ದು ಮಾಡಿತ್ತು. ಇದಕ್ಕೆ ಕಾರಣ, ಈಕೆ ಹುಡುಗನ ಜೊತೆ ಅಶ್ಲೀಲವಾಗಿ ಇರುವ ಖಾಸಗಿ ವಿಡಿಯೋ ಒಂದು ಲೀಕ್​ ಆಗಿತ್ತು. ಅದು ಭಾರಿ  ವಿವಾದ ಸೃಷ್ಟಿಸಿತ್ತು.  ವೈರಲ್ (Viral) ಆಗಿರುವ ವಿಡಿಯೋದಲ್ಲಿ ಹುಡುಗಿಯೊಬ್ಬಳು ಹುಡುಗನ ಜೊತೆ ರಾಜಿ ಮಾಡಿಕೊಂಡಿರುವುದು ಕಂಡುಬಂದಿದೆ. ವೀಡಿಯೋದಲ್ಲಿ ಕಾಣುವ ಹುಡುಗಿ ಅಕ್ಷರಾ ಸಿಂಗ್‌ನಂತೆ ಕಾಣುತ್ತಿದ್ದಳು. ಆದರೆ, ಆಕೆ ಅಕ್ಷರಾ ಎಂಬುದು ದೃಢಪಟ್ಟಿರಲಿಲ್ಲ. ಆದರೆ ಈ ವೀಡಿಯೊ ಕ್ಲಿಪ್‌ನಿಂದಾಗಿ, ಭೋಜ್‌ಪುರಿ ನಟಿಯನ್ನು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. 

ಆದರೆ ಇದರಲ್ಲಿ ಇರುವಾಕೆ ನಾನು ಅಲ್ಲವೇ ಅಲ್ಲ ಎಂದು ಅಕ್ಷರ ವಾದಿಸಿದ್ದರು. 'ಯಾರೇ ಈ ನೀಚ ಕೆಲಸ ಮಾಡಿದ್ದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಅನೇಕರು ಕಮೆಂಟ್‌ (Comment) ಮಾಡಿ ಕೆಟ್ಟ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾನೇ ನನ್ನ MMS ವಿಡಿಯೋ ಇನ್ನೂ ನೋಡಿಲ್ಲ. ವಿಡಿಯೋದಲ್ಲಿ ಇರುವ ಹುಡುಗಿ ನಾನೇನಾ ಇಲ್ವಾ ಅಂತ ನಿಮಗೆ ಮಾಹಿತಿ ಬೇಕು ಅಲ್ವಾ? ಈ ಚೀಪ್‌ ಟ್ರಿಕ್ಸ್​ಗಳಿಗೆ  ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.  ಅಕ್ಷರಾ ಸಿಂಗ್ ಮಾಧ್ಯಮಗಳಿಗೆ ಹೇಳಿಕೆ  ಕೊಟ್ಟಿದ್ದರು.

Tap to resize

Latest Videos

ಇಬ್ಬರು ಮಕ್ಕಳ ಅಪ್ಪನೊಂದಿಗೆ ಲವ್​ ಆದಾಗ... ನೆನಪು ಬಿಚ್ಚಿಟ್ಟ ನಟಿ ಶಬನಾ ಅಜ್ಮಿ

ಈ ಸುದ್ದಿ ಸ್ವಲ್ಪ ತಣ್ಣಗಾಗುತ್ತಿದ್ದಂತೆಯೇ ಈಗ ಮತ್ತೆ ಅಕ್ಷರಾ ಸದ್ದು ಮಾಡುತ್ತಿದ್ದಾರೆ. 31 ವರ್ಷದ ನಟಿಯ ಆಕ್ಷೇಪಾರ್ಹ ವೀಡಿಯೊ ಕ್ಲಿಪ್ ಅನ್ನು ಟೆಲಿಗ್ರಾಮ್ ಮತ್ತು ರೆಡ್ಡಿಟ್‌ನಲ್ಲಿ (Reddit) ಸೋರಿಕೆ ಮಾಡಲಾಗಿದೆ, ಅದು ವೇಗವಾಗಿ ವೈರಲ್ ಆಗುತ್ತಿದೆ. ಈ ಬಾರಿ ಈಕೆ ಎನ್ನಲಾದ ಹುಡುಗಿಯು ಆಕ್ಷೇಪಾರ್ಹ ರೀತಿಯಲ್ಲಿ ಅಕ್ಷರಾ ಅವರ ಬಾಯ್​ಫ್ರೆಂಡ್​ ಜೊತೆ ಕಾಣಿಸಿಕೊಂಡಿದ್ದಾರೆ! ಈ ವಿಡಿಯೋದಲ್ಲಿ ಇರುವಾಕೆ ಅಕ್ಷರಾ ಎನ್ನುವುದು ಹಲವರ ಅಭಿಮತ. ಅಷ್ಟೇ ಅಲ್ಲದೇ ಬಾಯ್​ಫ್ರೆಂಡ್​ ಜೊತೆ ಕಾಣಿಸಿಕೊಂಡಿರುವುದು ಇನ್ನಷ್ಟು ರೆಕ್ಕೆಪುಕ್ಕಗಳಿಗೆ ದಾರಿಮಾಡಿಕೊಟ್ಟಿದೆ. ಈ ಬಾರಿ ನಟಿ ಏನು ಹೇಳುತ್ತಾರೆ ಎಂದು ಫ್ಯಾನ್ಸ್​ ಕಾತರರಾಗಿದ್ದಾರೆ. 
  
ಇನ್ನು ಅಕ್ಷರಾ ಅವರ ಕೆಲಸದ ಬಗ್ಗೆ ಹೇಳುವುದಾದರೆ, ನಟಿ ಅಕ್ಷರಾ ಸಿಂಗ್ ಅವರು ಭೋಜ್‌ಪುರಿ ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಕಿರುತೆರೆಯ ನಟಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. 50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಅಕ್ಷರಾ ಭೋಜ್‌ಪುರಿ ಚಲನಚಿತ್ರೋದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.ಅವರು ಇಲ್ಲಿಯವರೆಗೆ ಇನ್​ಸ್ಟಾಗ್ರಾಮ್​ನಲ್ಲಿ 5 ಮಿಲಿಯನ್ ಫಾಲೋವರ್ಸ್ (followers) ಹೊಂದಿದ್ದಾರೆ. ಇವರು  'ಬಿಗ್ ಬಾಸ್' ರಿಯಾಲಿಟಿ ಶೋನ OTT ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.  ಅಕ್ಷರಾ 'ಸತ್ಯಮೇವ್ ಜಯತೆ', 'ಸೌಗಂಧ್ ಗಂಗಾ ಮೈಯಾ ಕೆ', ಸರ್ಕಾರ್ ರಾಜ್, 'ಸತ್ಯ', 'ತಬದಲಾ', 'ಧಡ್ಕನ್' ಮತ್ತು ಇತರ ಚಿತ್ರಗಳಲ್ಲಿ ತಮ್ಮ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು 'ಸರ್ವಿಸ್ ವಾಲಿ ಬಹು', 'ಕಾಲಾ ಟೀಕಾ', 'ಸೂರ್ಯಪುತ್ರ ಕರ್ನ್', ಮತ್ತು 'ಪೋರಸ್' ಮುಂತಾದ ಹಿಂದಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. 2021 ರಲ್ಲಿ, ಅವರು ಕರ್ಣ್ ಜೋಹರ್ ಹೋಸ್ಟ್ ಮಾಡಿದ ಬಿಗ್ ಬಾಸ್ OTT (Bigg Boss) ಶೋನಲ್ಲಿ ಕಾಣಿಸಿಕೊಂಡರು.

Jayaprada Birthday: ಅಪ್ರತಿಮ ಸುಂದರಿ ಬಾಳಲ್ಲಿ ಬಿರುಗಾಳಿ- ಮದ್ವೆಯಾದ್ರೂ ಸಿಗಲಿಲ್ಲ ಪತ್ನಿಯ ಸ್ಥಾನಮಾನ!

click me!