
ದಿ ಬೆಂಗಾಲ್ ಫೈಲ್ಸ್ CBFC ಕಟ್ಸ್: ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ 'ದಿ ಬೆಂಗಾಲ್ ಫೈಲ್ಸ್' ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) 'A' ಪ್ರಮಾಣಪತ್ರ ನೀಡಿದ್ದರೂ, ಚಿತ್ರದ ಕೆಲ ದೃಶ್ಯಗಳಿಗೆ ಕತ್ತರ ಬಿದ್ದಿದೆ. ಆದರೆ ಸೆನ್ಸಾರ್ ಮಂಡಳಿಯು ಚಿತ್ರವನ್ನು ಅನುಮೋದಿಸಿದ ದಿನದಿಂದಲೂ ಇದು ಬಾಲಿವುಡ್‌ನ ಅತಿ ಉದ್ದದ ಚಿತ್ರಗಳಲ್ಲೊಂದು. ಈ ವಿಷಯದಲ್ಲಿ ಇದು ರಣಬೀರ್ ಕಪೂರ್ ಅಭಿನಯದ 'ಆ್ಯನಿಮಲ್' ಮತ್ತು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರಗಳ ಥಿಯೇಟ್ರಿಕಲ್ ಆವೃತ್ತಿಗಳನ್ನು ಹಿಂದಿಕ್ಕಿದೆ. 'ಅನಿಮಲ್' ಮತ್ತು ಇದರ ರನ್‌ಟೈಮ್‌ನಲ್ಲಿ ಕೇವಲ 1 ನಿಮಿಷದ ವ್ಯತ್ಯಾಸವಿದೆ.
ಬಾಲಿವುಡ್ ಹಂಗಾಮ ವರದಿಯಂತೆ, ಮೊದಲು CBFC ಪರಿಶೀಲನಾ ಸಮಿತಿಯು 'ದಿ ಬೆಂಗಾಲ್ ಫೈಲ್ಸ್' ಅನ್ನು ಅನುಮೋದಿಸಿರಲಿಲ್ಲ, ನಂತರ ಪರಿಷ್ಕರಣಾ ಸಮಿತಿ ಚಿತ್ರವನ್ನು ಅನುಮೋದಿಸಿದೆ. ಅನುಮೋದನೆಗೂ ಮುನ್ನು ಸಮಿತಿ ಸೂಚಿಸಿದಂತೆ ಚಿತ್ರದಲ್ಲಿ ಹಲ ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿಯೂ ಮಂಗಳಮುಖಿಯರ ವಿರುದ್ಧ ಅವಹೇಳನಕಾರಿ ಪದಗಳನ್ನು ತೆಗೆದುಹಾಕಲು ಮತ್ತು ಅವುಗಳ ಸ್ಥಳದಲ್ಲಿ ಸೂಕ್ತ ಪದಗಳನ್ನು ಸೇರಿಸಲು RC ಚಿತ್ರ ನಿರ್ಮಾಪಕರಿಗೆ ಸೂಚಿಸಿತ್ತು. ಅದೇ ರೀತಿ ಚಿತ್ರದಲ್ಲಿ ಬಳಸಲಾದ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನೂ ಸೂಚನೆಯಂತೆ ತೆಗೆದುಹಾಕಲಾಗಿದೆ. ಅದೇ ದೃಶ್ಯಗಳಲ್ಲಿ ಅಗತ್ಯ ಚಿತ್ರಗಳನ್ನು ಸೇರಿಸಲಾಗಿದೆ. ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಚಿತ್ರ ನಿರ್ಮಾಪಕರು ಸಲ್ಲಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ಕೆಲಸ ಮಾಡಿದ ಮಕ್ಕಳ ಪೋಷಕರ ಒಪ್ಪಿಗೆ ಪತ್ರಗಳನ್ನು ಸಹ CBFCಗೆ ಸಲ್ಲಿಸಲಾಗಿದೆ. ವಾಯ್ಸ್ ಓವರ್ ಜೊತೆ, ಬೋಲ್ಡ್ ಲೆಟರ್ಸ್‌ನಲ್ಲಿ ಹಕ್ಕು ನಿರಾಕರಣೆಯನ್ನೂ ಸೇರಿಸಲಾಗಿದೆ. ನಿರ್ಮಾಪಕರು ಎಲ್ಲ ಬದಲಾವಣೆಗಳನ್ನು ಮಾಡಿದ ನಂತರ, CBFC ಈ ಚಿತ್ರಕ್ಕೆ 'A' ಪ್ರಮಾಣಪತ್ರವನ್ನು ನೀಡಿದ್ದು ರನ್‌ಟೈಮ್ ಉಲ್ಲೇಖಿಸಿದೆ. ಚಿತ್ರದ ರನ್‌ಟೈಮ್ 2 ಗಂಟೆ 24 ನಿಮಿಷ 30 ಸೆಕೆಂಡುಗಳು.
ಅದೇ ವರದಿಯಲ್ಲಿ, CBFC ಜೂನ್ 25, 2025 ರಂದು ನಿರ್ಮಾಪಕರಿಗೆ ಚಿತ್ರದ ಪ್ರಮಾಣ ಪತ್ರವನ್ನು ನೀಡಿದೆ ಎನ್ನಲಾಗುತ್ತಿದೆ. ಸುಮಾರು ಎರಡು ತಿಂಗಳ ನಂತರ, ಆಗಸ್ಟ್ 26 ರಂದು, ನಿರ್ಮಾಪಕರು CBFC ಅನ್ನು ಸಂಪರ್ಕಿಸಿದರು ಮತ್ತು ಚಿತ್ರದಲ್ಲಿ 29 ದೃಶ್ಯಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿತ್ತೆ. '100 ವರ್ಷ ವಯಸ್ಸಿನ' ಎಂಬ ಸಂಭಾಷಣೆಯನ್ನು 'ಚಿತ್ತವೈಕಲ್ಯ ಹೊಂದಿರುವ ವೃದ್ಧ ಮಹಿಳೆ' ಎಂದು ಬದಲಾಯಿಸಲಾಗಿದೆ. ಫೋನ್ ದೃಶ್ಯದಲ್ಲಿ ಫೋಟೋವನ್ನು ಸೇರಿಸಲಾಗಿದೆ. ಫೋನ್ ವೀಡಿಯೊ ದೃಶ್ಯವನ್ನು ಬದಲಾಯಿಸಲಾಗಿದೆ. ‘ಭಾರತವು ಒಂದು ದಿನ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ,’ ಎಂಬ ಸಂಭಾಷಣೆಯನ್ನು ಕಡಿತಗೊಳಿಸಲಾಗಿದೆ. ಗೋಪಾಲ್ ಮುಖೋಪಾಧ್ಯಾಯ ಎಂಬ ಹೆಸರಿಗೆ ಹಲವೆಡ ಕೋಕ್ ನೀಡಲಾಗಿದೆ. ಇದಲ್ಲದೆ, ರಣಹದ್ದು ಮತ್ತು ಮಗುವಿನ ದೃಶ್ಯಕ್ಕೂ ಕತ್ತರಿ ಹಾಕಿ, ಗೂಬೆ ದೃಶ್ಯವನ್ನು ಸೇರಿಸಲಾಗಿದೆ. ಹಲವು ದೃಶ್ಯಗಳಲ್ಲಿ ನಿರ್ಮಾಪಕರು ಪಠ್ಯವನ್ನು ಬದಲಾಯಿಸಿದ್ದಾರೆ. ಚಿತ್ರ ನಿರ್ಮಾಪಕರು ಎರಡು ವಿಷಯಗಳನ್ನು ಸೇರಿಸಿದ್ದು, ಪತ್ರಿಕೆ ಇರೋ ದೃಶ್ಯವನ್ನು ಒಂದು ಸೆಕೆಂಡ್ ಹೆಚ್ಚಿಸಲಾಗಿದೆ. ಮತ್ತೊಂದು ದೃಶ್ಯದ ಸ್ಥಳದಲ್ಲಿ ಪಠ್ಯ ಮತ್ತು ಪತ್ರಿಕೆ ದೃಶ್ಯವನ್ನು ಸೇರಿಸಿದ್ದು 68 ಸೆಕೆಂಡುಗಳಷ್ಟು ಉದ್ದವಾಗಿದೆ.
ಒಟ್ಟಾರೆಯಾಗಿ, ನಿರ್ಮಾಪಕರು ಚಿತ್ರದಿಂದ 1 ನಿಮಿಷ 42 ಸೆಕೆಂಡನ್ನು ತೆಗೆದು ಹಾಕಿದ್ದಾರೆ. 1 ನಿಮಿಷ 44 ಸೆಕೆಂಡುಗಳನ್ನು ಸೇರಿಸಿದ್ದು. ಚಿತ್ರದ ಒಟ್ಟು ಅವಧಿ 2 ಗಂಟೆ 40 ನಿಮಿಷನಷ್ಟಾಗಿದೆ. 'ದಿ ಬೆಂಗಾಲ್ ಫೈಲ್ಸ್' ರನ್‌ಟೈಮ್ ವಿಷಯದಲ್ಲಿ 'ಅನಿಮಲ್' ಅನ್ನು 1 ನಿಮಿಷದ ಅಂತರದಿಂದ ಹಿಂದಿಕ್ಕಿದೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಚಿತ್ರದ ಥಿಯೇಟ್ರಿಕಲ್ ಆವೃತ್ತಿಗಿಂತ 'ದಿ ಬೆಂಗಾಲ್ ಫೈಲ್ಸ್' 4 ನಿಮಿಷ ಉದ್ದವಾಗಿದೆ.
'ದಿ ಬೆಂಗಾಲ್ ಫೈಲ್ಸ್'ನಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಶಾಶ್ವತ ಚಟರ್ಜಿ, ರಾಜೇಶ್ ಖೇರಾ, ಪುನೀತ್ ಇಸ್ಸರ್, ಪ್ರಿಯಾಂಶು ಚಟರ್ಜಿ ಮತ್ತು ಮೋಹನ್ ಕಪೂರ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ನಿರ್ಮಾಪಕರು ಅಭಿಷೇಕ್ ಅಗರ್ವಾಲ್ ಮತ್ತು ಪಲ್ಲವಿ ಜೋಶಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.