ಅಯ್ಯಯ್ಯೋ... ಇದನ್ನು ತೆಗೆಯಲು ಮರೆತೇ ಬಿಟ್ರಾ ಜಾನ್ವಿ ಕಪೂರ್?

By Kannadaprabha News  |  First Published Oct 25, 2019, 4:11 PM IST

ಬಾಲಿವುಡ್ ಕ್ಯೂಟ್ ಗರ್ಲ್ ಜಾನ್ವಿ ಕಪೂರ್ ಮಾಡಿದ ಒಂದು ಸಣ್ಣ ಮಿಸ್ಟೇಕ್ ಟ್ರೋಲಿಗರಿಗೆ ಆಹಾರವಾಗಿದೆ. ಆಕೆ ಗೊತ್ತಾಗಿಯೋ, ಗೊತ್ತಿದ್ದೋ ಏನೇ ಮಾಡಿದ್ರು ಸೋಷಿಯಲ್ ಮೀಡಿಯಾ ಮಾತ್ರ ಅವರನ್ನು ಬಿಡುವುದಿಲ್ಲ. 


ಬಾಲಿವುಡ್ ಸ್ಟೈಲ್ ಐಕಾನ್, ಕ್ಯೂಟ್ ಗರ್ಲ್ ಜಾನ್ವಿ ಕಪೂರ್ ಏನೇ ಮಾಡಿದ್ರೂ ಸೋಷಿಯಲ್ ಮೀಡಿಯಾ ಮಾತ್ರ ಅವರನ್ನು ಬಿಡುವುದಿಲ್ಲ. 

ಯಾವಾಗಲೂ ತುಂಡುಡುಗೆ ಹಾಕಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಜಾನ್ವಿ ಸಲ್ವಾರ್ ಕಮೀಜ್ ಹಾಕಿಕೊಂಡರೂ ಬಿಡಲಿಲ್ಲ. ಅರೇ ಇದರಲ್ಲೇನಿದೆ ಅಂತೀರಾ? ಸಲ್ವಾರ್ ಹಾಕಿಕೊಂಡರೂ ಎಡವಟ್ಟು ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಬಿಗ್ ಬಾಸ್ ಸ್ಟೈಲ್ ವಾಲಿ; ರಿಯಲ್ ಲೈಫಿನಲ್ಲಿ ಯಾಕಿಂಗೆ?

 

 
 
 
 
 
 
 
 
 
 
 
 
 

#jhanvikapoor snapped at her pilates class today #viralbayani @viralbhayani

A post shared by Viral Bhayani (@viralbhayani) on Oct 22, 2019 at 1:46am PDT

ಹಳದಿ ಬಣ್ಣದ ಸಲ್ವಾರ್ ಹಾಕಿಕೊಂಡು ಕಾರಿನ ಬಳಿ ಬರುತ್ತಾರೆ. ಮಜಾ ಎಂದರೆ ದುಪ್ಪಟ್ಟಾದಲ್ಲಿ ಪ್ರೈಸ್ ಟ್ಯಾಗ್ ಹಾಗೆಯೇ ಇದೆ. ಇದನ್ನು ನೋಡಿದ ನೆಟ್ಟಿಗರು ಆಕೆಯನ್ನು ಕಾಲೆಳೆದಿದ್ದಾರೆ. ಮಿಂತ್ರಾದಲ್ಲಿ ಪ್ರೈಸ್ ಟ್ಯಾಗ್ ಇಲ್ಲದಿದ್ದರೆ ಅವರು ವಾಪಸ್ ತೆಗೆದುಕೊಳ್ಳುವುದಿಲ್ಲ. ಹಾಗಾಗಿಯೇ ತೆಗೆದಿಲ್ಲ ಎನಿಸುತ್ತದೆ ಎಂದು ತಮಾಷೆ ಮಾಡಿದ್ದಾರೆ. 

BB7: ಅಮ್ಮ ತೀರಿ ಹೋದಾಗಲೂ ಕೊನೆಗೂ ಮುಖ ನೋಡಲಾಗದ ನತದೃಷ್ಟ ಇವರು!

ಸದ್ಯ ಜಾನ್ವಿ ಕಪೂರ್ ಕಾರ್ತಿಕ್ ಆರ್ಯನ್ ಜೊತೆ ದೋಸ್ತಾನಾ 2 ಗೆ ತಯಾರಿ ನಡೆಸುತ್ತಿದ್ದಾರೆ. ಪ್ರಿಯಾಂಕ ಚೋಪ್ರಾ, ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಿಂ ಅವರ  ದೋಸ್ತಾನಾ ಎನ್ನುವ ಸಿನಿಮಾ ಮಾಡಿದ್ದರು. ಈ ಸಿನಿಮಾದ ಸೀಕ್ವೆಲ್ ಬರಲು ಸಿದ್ಧವಾಗಿದೆ. 

ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!