ಪದ್ಮಾವತಿ ಈಗ ದ್ರೌಪದಿ; ಹೊಸ ಪ್ರಾಜೆಕ್ಟ್‌ನಲ್ಲಿ ದೀಪಿಕಾ ಪಡುಕೋಣೆ!

Published : Oct 25, 2019, 10:17 AM IST
ಪದ್ಮಾವತಿ ಈಗ ದ್ರೌಪದಿ; ಹೊಸ ಪ್ರಾಜೆಕ್ಟ್‌ನಲ್ಲಿ ದೀಪಿಕಾ ಪಡುಕೋಣೆ!

ಸಾರಾಂಶ

  'ಚಪಾಕ್' ಹಾಗೂ '83' ಚಿತ್ರದಲ್ಲಿ ಬ್ಯುಸಿಯಾಗಿರುವ ಬಾಲಿವುಡ್ ಹೈಲಿ ಟ್ಯಾಲೆಂಟೆಡ್‌ ನಟಿ ದೀಪಿಕಾ ಪಡುಕೋಣೆ ನಿರ್ಮಾಪಕಿ ಹಾಗೂ ನಟಿಯಾಗಿ ವಿಭಿನ್ನ ಪಾತ್ರಕ್ಕೆ ಕೈ ಹಾಕುತ್ತಿದ್ದಾರೆ. ಮಹಾಭಾರತದ ದ್ರೌಪದಿ ಪಾತ್ರಕ್ಕೆ ದೀಪಿಕಾ ತಯಾರಿ ನಡೆಸುತ್ತಿದ್ದಾರೆ.

ಪದ್ಮಾವತಿಯಾಗಿ ಈಕೆಯನ್ನು ನೋಡಿದ ನಂತರ ಏನಾದ್ರೂ ವಿಭಿನ್ನವಾಗಿ ನೋಡಬೇಕೆಂದು ಬಯಸುತ್ತಿದ್ದ ಅಭಿಮಾನಿಗಳಿಗೆ ದೀಪಿಕಾ ಗುಡ್ ನ್ಯೂಸ್ ನೀಡಿದ್ದಾರೆ.

ನನ್ನ ಸಾಧನೆಯೆಲ್ಲವೂ ರಣವೀರ್‌ಗೆ ಅರ್ಪಣೆ: ದೀಪಿಕಾ

ಮಹಾಭಾರತದ 'ದ್ರೌಪದಿ' ಪಾತ್ರದಲ್ಲಿ ಮಿಂಚಲು ದೀಪಿಕಾ ರೆಡಿಯಾಗಿದ್ದಾರೆ. ಅಷ್ಟೇ ಅಲ್ಲದೆ ಇದನ್ನು ಎರಡು ಭಾಗವಾಗಿ ವಿಂಗಡಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಧು ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರೀಕರಣದ ಮೊದಲ ಭಾಗವನ್ನು ದೀಪಾವಳಿಗೆ ಶುರು ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ದ್ರೌಪದಿಯನ್ನು ಗಂಡಸರ ದೃಷ್ಟಿಯಲ್ಲಿ ಒಂದು ಕಥೆ ಮಾಡಿದರೆ, ಹೆಂಗಸರ ದೃಷ್ಟಿಯಲ್ಲಿ ಬೇರೆ ಕಥೆ ಮಾಡಲಾಗಿದೆ. ಆಕೆಯ ಮತ್ತೊಂದು ರೂಪವನ್ನು ಜನರಿಗೆ ತೋರಿಸುವ ಪ್ರಯತ್ನಕ್ಕೆ ದೀಪಿಕಾ ಕೈ ಹಾಕಿದ್ದಾರೆ.

ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

'ಪದ್ಮಾವತಿ' ಚಿತ್ರದ ನಂತರ ಮೇಘನಾ ಗುಲ್ಜಾರ್ ಆ್ಯಸಿಡ್ ಆಟ್ಯಾಕ್ ಕಥೆಯಾದ 'ಚಪಾಕ್' ಹಾಗೂ ಕಬೀರ್ ಸಿಂಗ್ ಚಿತ್ರವಾದ '83' ಮುಗಿದ ನಂತರ ದ್ರೌಪದಿ ಪ್ರಾಜೆಕ್ಟ್ ಶುರು ಮಾಡಲಿದ್ದಾರೆ.

ನರೇಂದ್ರ ಮೋದಿಯ 'ಭಾರತ ಕಿ ಲಕ್ಷ್ಮಿ' ಕ್ಯಾಂಪೇನ್‌ನಲ್ಲಿ ಬ್ಯಾಡ್ಮಿಂಟನ್ ಪಟು ಪಿ.ವಿ ಸಿಂದು ಹಾಗೂ ದೀಪಿಕಾ ಪಡುಕೋಣೆ 'Achievements of Inian Women' ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ' ಈ ದೀಪಾವಳಿಗೆ ಬೆಳಕು ಚೆಲ್ಲುತಾ ಹೆಣ್ಣು ಮಕ್ಕಳ ಸಾಧನೆಗೆ ಬೆನ್ನು ತಟ್ಟೋಣ' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?