ಸೌತ್‌‌ ಚಿತ್ರರಂಗದಲ್ಲೂ ನೆಪೋಟಿಸಮ್ ಇದೆ: ಬಾಲಿವುಡ್ ನಟಿಯ ಶಾಕಿಂಗ್ ಹೇಳಿಕೆ

Published : Jun 12, 2023, 12:21 PM IST
ಸೌತ್‌‌ ಚಿತ್ರರಂಗದಲ್ಲೂ ನೆಪೋಟಿಸಮ್ ಇದೆ: ಬಾಲಿವುಡ್ ನಟಿಯ ಶಾಕಿಂಗ್ ಹೇಳಿಕೆ

ಸಾರಾಂಶ

ಸೌತ್ ಸಿನಿಮಾರಂಗದಲ್ಲೂ ನೆಪೋಟಿಸಮ್ ಇದೆ, ತೆಲುಗು ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತದಿಂದ ತುಂಬಿದೆ ಎಂದು ನಟಿ ಅವಿಕಾ ಗೋರ್ ಹೇಳಿದ್ದಾರೆ.  

ಹಿಂದಿಯ ಜನಪ್ರಿಯ ಧಾರಾವಾಹಿ ಬಾಲಿಕಾ ವಧು ಮೂಲಕ ಕಿರುತೆರೆ ಪ್ಕೇಕ್ಷಕರ ಮನೆ ಮಾತಾಗಿದ್ದ ನಟಿ ಅವಿಕಾ ಗೋರ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿರುವ ಅವಿಕಾ ನೆಪೋಟಿಸಮ್ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲೂ ನಟಿಸಿರುವ ಅವಿಕಾ ಗೋರ್ ಸೌತ್ ಸಿನಿರಂಗದ ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವಿಕಾ ದಕ್ಷಿಣ ಭಾರತದಲ್ಲಿಯೂ ಸ್ವಜನ ಪಕ್ಷಪಾತವಿದೆ ಎಂದು ಹೇಳಿದ್ದಾರೆ. 

ನಟಿ ಅವಿಕಾ ಗೋರ್ ತೆಲುಗು ಚಿತ್ರರಂಗದಲ್ಲೂ ಮಿಂಚಿದ್ದಾರೆ. 2013ರಲ್ಲಿ ಬಂದ ಉಯ್ಯಾಲಾ ಜಂಪಾಲಾ  ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರಗೆ ಪರಿಚಿತರಾದರು. ಲಕ್ಷ್ಮಿ ರಾವೆ ಮಾ ಇಂತಿ, ಚೂಪಿಸ್ತಾ ಮಾವಾ, ತನು ನೇನು ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಅವಿಕಾಗೆ ಬಾಲಿವುಡ್ ಮತ್ತು ಸೌತ್ ಸಿನಿಮಾಗಳ ಬಗ್ಗೆ  ಪ್ರಶ್ನೆ ಎದುರಾಯಿತು. ಆಗ ಸೌತ್ ಸಿನಿಮಾರಂಗದ ನೆಪೋಟಿಸಮ್ ಬಗ್ಗೆ ಮಾತನಾಡಿದರು. 

'ಸ್ಟಾರ್ ಪವರ್ ಬಗ್ಗೆ ಹೇಳುವುದಾದರೆ ಸೌತ್ ಸ್ಟಾರ್ ಪವರ್ ಬಗ್ಗೆ ಹೇಳುವಾಗ ಸ್ವಜನಪಕ್ಷಪಾತ ಅಂತ ಬಂದಾಗ ನಾವು ಈ ಪದವನ್ನು ಕೇಳಿದಾಗ ತುಂಬಾ ಸುಸ್ತಾಗುವ ಮಾತು. ಸೌತ್ ಮತ್ತು ನಾರ್ತ್ ಎಲ್ಲಾ ವಿಷಯವೂ ಒಂದೇ ಆಗಿದೆ. ಸೌತ್‌ನಲ್ಲೂ ಇದೆ. ಬಾಲಿವುಡ್ ಮತ್ತು ಹಿಂದಿ ಚಲನಚಿತ್ರಗಳ ಬಗ್ಗೆ ಕಾಲಾನಂತರದಲ್ಲಿ ಪಕ್ಷಪಾತವನ್ನು ರಚಿಸಲಾಗಿದೆ. ಅವರು ಏನು ಮಾಡಿದರೂ ನಾವು ನಿರ್ಣಯಿಸುತ್ತೇವೆ ಒಂದು ಹಂತದಲ್ಲಿ ಬಹಳಷ್ಟು ಸೌತ್ ಚಿತ್ರಗಳನ್ನು ರಿಮೇಕ್ ಮಾಡುವ ಕಾಲ ಬಂದಿತ್ತು, ಹಾಗಾಗಿ ನಾವು ಚಿತ್ರಗಳನ್ನು ನಕಲು ಮಾಡುತ್ತೇವೆ ಎಂದು ಜನರು ಭಾವಿಸಿದ್ದರು' ಎಂದು ಹೇಳಿದ್ದಾರೆ.

 ಅಬ್ಬಬ್ಬಾ! 13 ಕೆಜಿ ತೂಕ ಇಳಿಸಿಕೊಂಡ ಕಿರುತೆರೆ ನಟಿ ಈಗ ಹೇಗಾಗಿದ್ದಾರೆ ನೋಡಿ!

'ತೆಲುಗು ಉದ್ಯಮವು ಸ್ವಜನಪಕ್ಷಪಾತದಿಂದ ತುಂಬಿದೆ. ಜನರು ಅದನ್ನು ಸಾಕಷ್ಟು ಪ್ರಚಾರ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸಮಯದೊಂದಿಗೆ ಸಾಮಾಜಿಕ ಮಾಧ್ಯಮವು ಅದರೊಂದಿಗೆ ವಿಶ್ರಾಂತಿ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. 

ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಳ್ಳುವುದಕ್ಕೂ ಇಷ್ಟವಿರಲಿಲ್ಲ: Avika Gor

ಅವಿಕಾ ಗೋರ್ 1920 ಹಾರರ್ ಆಫ್ ದಿ ಹಾರ್ಟ್ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ವಿಕ್ರಮ್ ಭಟ್ ಪುತ್ರಿ ಕೃಷ್ಣ ಭಟ್ ನಿರ್ದೇಶನದ ಈ ಚಿತ್ರವು ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ. ಅವಿಕಾ ಗೋರ್ ಕಿರುತೆರೆ ಹಾಗೆ ಸಿನಿಮಾರಂಗದಲ್ಲೂ ಖ್ಯಾತಿಗಳಿಸುತ್ತಾರಾ ಎಂದು ಕಾದುನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!