ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಹಿಂಪಡೆದ ವಿಷಯ ಒಳಗೊಂಡ ಅದೇ ಹೆಸರಿನ ಸಿನಿಮಾ ಒಟಿಟಿ ಬಿಡುಗಡೆಗೆ ರೆಡಿಯಾಗಿದೆ. ಇದು ಜನರಿಂದ ವ್ಯಾಪಕ ಮೆಚ್ಚುಗೆ ಗಳಿಸಿದ ಚಿತ್ರವಾಗಿದೆ.
ಜಮ್ಮುಕಾಶ್ಮೀರಕ್ಕೆ ವಿಶೇಷ ಮಾನ್ಯತೆ ಕೊಟ್ಟ ಆರ್ಟಿಕಲ್ 370 ಹಿಂಪಡೆದ ವಿಷಯವನ್ನೊಳಗೊಂಡ, ಅದೇ ಹೆಸರಿನ ಯಾಮಿ ಗೌತಮ್ ನಟನೆಯ ಚಿತ್ರ ಫೆಬ್ರವರಿ 23, 2024 ರಂದು ಥಿಯೇಟರ್‌ಗೆ ಬಂದಿತು. ಚಿತ್ರವನ್ನು ಹಾಗೂ ಯಾಮಿ ಗೌತಮ್ ಅವರ ನಟನಾ ಕೌಶಲ್ಯವನ್ನು ವಿಮರ್ಶಕರು ಶ್ಲಾಘಿಸಿದರು. ಚಿತ್ರವು ಎರಡು ತಿಂಗಳ ಹಿಂದೆ ಥಿಯೇಟರ್‌ಗೆ ಪಾದಾರ್ಪಣೆ ಮಾಡಿತು ಮತ್ತು ಈಗ ಅಭಿಮಾನಿಗಳು ಅದರ OTT ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ರಿ ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರವನ್ನು ನಿರ್ದೇಶಿಸಿದ್ದ ಆದಿತ್ಯ ಧರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಆರ್ಟಿಕಲ್ 370 OTT ಬಿಡುಗಡೆ ದಿನಾಂಕ
ವರದಿಗಳನ್ನು ನಂಬುವುದಾದರೆ, ಆರ್ಟಿಕಲ್ 370 ಏಪ್ರಿಲ್ 19, 2024 ರಿಂದ OTT ಪ್ಲಾಟ್‌ಫಾರ್ಮ್ JioCinema ನಲ್ಲಿ ಲಭ್ಯವಿರುತ್ತದೆ. ಆದಾಗ್ಯೂ, ಅದರ ಬಗ್ಗೆ ಅಧಿಕೃತ ದೃಢೀಕರಣಕ್ಕಾಗಿ ಇನ್ನೂ ಕಾಯಲಾಗುತ್ತಿದೆ.
ಆರ್ಟಿಕಲ್ 370 ಬಗ್ಗೆ
ಈ ಚಲನಚಿತ್ರವು 2019 ರಲ್ಲಿ 'ಆರ್ಟಿಕಲ್ 370 ರದ್ದತಿ' ಎಂದು ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ವಿಷಯವನ್ನು ಹೊಂದಿದೆ. ಇದು ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಎರಡನೇ ಅವಧಿಯಲ್ಲಿ ನಡೆಯಿತು. ಈ ಆರ್ಟಿಕಲ್ 370 ಅನ್ನು ಏಕೆ ರದ್ದು ಮಾಡಬೇಕಾಯಿತು, ಅದಕ್ಕೆ ಕಾರಣವಾದ ಘಟನೆಗಳು ಯಾವುವು ಇತ್ಯಾದಿ ವಿಷಯಗಳ ಸುತ್ತ ಈ ಸಿನಿಮಾ ಸುತ್ತುತ್ತದೆ.
ಆರ್ಟಿಕಲ್ 370 ಪಾತ್ರವರ್ಗ
ಯಾಮಿ ಗೌತಮ್: NIA ಏಜೆಂಟ್ ಝೂನಿ ಹಕ್ಸರ್ ಪಾತ್ರದಲ್ಲಿ
ಪ್ರಿಯಾಮಣಿ: ಪಿಎಂಒ ಕಚೇರಿಯ ಜಂಟಿ ಕಾರ್ಯದರ್ಶಿ ರಾಜೇಶ್ವರಿ ಸ್ವಾಮಿನಾಥನ್ ಪಾತ್ರದಲ್ಲಿ
ರಾಜ್ ಅರ್ಜುನ್: ಶ್ರೀನಗರದ ಐಡಿ ಸ್ಟೇಷನ್ ಮುಖ್ಯಸ್ಥ ಖಾವರ್ ಅಲಿ
ಬುರ್ಹಾನ್ ವಾನಿಯಾಗಿ ಶಿವಂ ಖಜುರಿಯಾ
ವೈಭವ್ ತತ್ವವಾಡಿ: ಉಪ ಕಮಾಂಡೆಂಟ್ CRPF ಯಶ್ ಚೌಹಾಣ್
ಅರುಣ್ ಗೋವಿಲ್: ಭಾರತದ ಪ್ರಧಾನಮಂತ್ರಿ
ರಾಜ್ ಝುತ್ಶಿ: ಜೆ & ಕೆ ಮಾಜಿ ಮುಖ್ಯಮಂತ್ರಿ ಸಲಾವುದ್ದೀನ್ ಜಲಾಲ್
ದಿವ್ಯಾ ಸೇಠ್: J&K ಸಿಎಂ ಪರ್ವೀನಾ ಅಂದ್ರಾಬಿ