
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪದ್ಯವನ್ನು (Poem) ಹರಿಯಬಿಟ್ಟಿದ್ದಾರೆ. ಅದು ಅವರ ಫೇವರೆಟ್ ಪದ್ಯ ಎನ್ನಲಾಗಿದ್ದು, ಆ ಬಗ್ಗೆ ನಟಿ ಸಮಂತಾ ಅವರು ತುಂಬಾ ಸಾರಿ ಹೇಳಿಕೊಂಡಿದ್ದಾರೆ. ರುದ್ಯಾರ್ಡ್ ಕಿಪ್ಲಿಂಗ್ (Rudyard Kipling) ಎನ್ನುವವರ ಆ ಪದ್ಯವನ್ನು ನಟಿ ಸಮಂತಾ ರುತ್ ಪ್ರಭು ತಮ್ಮ ಸೊಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದೇ ತಡ, ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ಅವರು ಆ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈಗ ಈ ಸಂಗತಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ನಟಿ ಸಮಂತಾರ ಆ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ರಿಯಾಕ್ಟ್ ಮಾಡಿರುವ ನಟ ಅರ್ಜುನ್ ಕಪೂರ್ 'ನಾನು ಈ ಪದ್ಯದ ಪ್ರಿಂಟನ್ನು ನನ್ನ ಗೋಡೆಯ ಮೇಲೆ ಹಾಕಿಕೊಂಡಿದ್ದೇನೆ. ನನಗೆ ಇನ್‌ಸ್ಪಿರೇಶನ್ ಬೇಕಾದಾಗಲೆಲ್ಲಾ ಇದು ನನಗೆ ತುಂಬಾನೇ ಸಹಾಯ ಮಾಡುತ್ತದೆ' ಎಂದಿದ್ದಾರೆ ನಟ ಅರ್ಜುನ್ ಕಪೂರ್. ನಟಿ ಸಮಂತಾ ಪೋಸ್ಟ್‌ಗೆ ನಟ ಅರ್ಜುನ್ ಕಪೂರ್ ಮಾಡಿರುವ ರಿಪ್ಲೈ ನೋಡಿ ನೆಟ್ಟಿಗರು ಬೇರೆಯದೇ ಅರ್ಥ ಕಂಡುಕೊಂಡಿದ್ದಾರೆ.
ಡಬಲ್ ಸೀಕ್ರೆಟ್ ಬಿಚ್ಚಿಟ್ಟು ಕನ್ನಡ ಚಿತ್ರರಂಗದ ಗಂಡಸರಿಗೆ ಶಾಕ್ ನೀಡಿದ ನಟಿ ಪ್ರೇಮಾ!
ಕಾರಣ, ನಟಿ ಸಮಂತಾ ಅವರು ತೆಲುಗು ನಟ ನಾಗಚೈತನ್ಯ ಅವರಿಂದ ವಿಚ್ಛೇದನ ತೆಗದುಕೊಂಡಿದ್ದು ಗೊತ್ತೇ ಇದೆ. ಈಗವರು ಒಂಟಿಯಾಗಿ ಜೀವಿಸುತ್ತಿದ್ದಾರೆ. ಅದೇ ರೀತಿ ನಟ ಅರ್ಜುನ್ ಕಪೂರ್ ಕೂಡ ಈಗ ಒಬ್ಬಂಟಿಯೇ. ಮಲೈಕಾ ಅರೋರ ಜೊತೆ ಜಂಟಿಯಾಗಿ ಜೀವಿಸುತ್ತಿದ್ದ ನಟ ಅರ್ಜುನ್ ಕಪೂರ್ ಇತ್ತೀಚೆಗೆ ಮಲೈಕಾರಿಂದ ದೂರವಾಗಿ ವಿರಹ ವೇದನೆಯಲ್ಲಿ ಬೇಯುತ್ತಿದ್ದಾರೆ ಎನ್ನಲಾಗಿದೆ.
ವಿಷಯ ಇಷ್ಟಕ್ಕೇ ಮುಗಿದಿಲ್ಲ. ಕಾರಣ, ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಇತ್ತೀಚೆಗೆ ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ಮತ್ತೆ ಮದುವೆ ಆಗಿದ್ದಾರೆ. ಇದೇ ವೇಳೆ ಸಮಂತಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ 'ನಾನು ಕೂಡ ಮತ್ತೆ ಮದುವೆ ಆಗಬೇಕು, ನನಗೂ ಮಗು ಬೇಕು ಎನ್ನುವ ಬಯಕೆ ಆಗಿದೆ' ಎಂದು ಹೇಳಿಕೆ ಕೊಟ್ಟಿದ್ದಾರೆ. ಇದೇ ವೇಳೆ ಏಕಾಂಗಿಯಾಗಿರುವ ಅರ್ಜುನ್ ಕಪೂರ್ ಅವರು ಸಮಂತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದು ಹಲವರ ಬಾಯಿಗೆ ಆಹಾರವಾಗಿದೆ.
ಅತಿಲೋಕ ಸುಂದರಿ ಜೊತೆ ಚಿರಂಜೀವಿ ಡಾನ್ಸ್ ಮಾಡುವಾಗ ಡಾಕ್ಟರ್-ನರ್ಸ್ ಅಲ್ಲಿದ್ರು ಯಾಕೆ?
ನಟಿ ಸಮಂತಾ ಅವರಿಗೆ ಅರ್ಜುನ್ ಕಪೂರ್ ಕಾಳು ಹಾಕ್ತಿದಾರೆ ಎನ್ನಲಾಗುತ್ತಿದೆ. ಅದರೆ ಸತ್ಯ ಸಂಗತಿ ಏನಿದೆಯೋ ಯಾರಿಗೆ ಗೊತ್ತು? ಆದರೆ, ಈ ಮೊದಲು ಜಂಟಿಯಾಗಿದ್ದ ಇಬ್ಬರೂ ಸದ್ಯ ಒಂಟಿಯಾಗಿದ್ದಾರೆ ಎಂಬ ಕಾರಣಕ್ಕೆ ಈ ಮ್ಯಾಚಿಂಗ್ ನಡಿತಿರಬಹುದು. ಸಮಂತಾ ಪೋಸ್ಟ್‌ಗೆ ಅರ್ಜುನ್ ಕಪೂರ್ ರಿಯಾಕ್ಟ್ ಮಾಡಿಲ್ಲ ಅಂದಿದ್ರೆ ಈ ಸುದ್ದಿ ಬಹುಶಃ ಹುಟ್ಟಿಕೊಳ್ತಾ ಇರ್ಲಿಲ್ವೇನೋ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.