ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಟಿ ಈಕೆ!

By Suvarna News  |  First Published Apr 12, 2021, 10:21 AM IST

ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯೋ ನಟಿಯರಲ್ಲಿ ಇಬ್ಬರು ಕನ್ನಡಿಗರು ಇದಾರೆ, ಯಾರು ಗೊತ್ತಾ?


ದಕ್ಷಿಣ ಭಾರತದ ಹಲವು ಹೀರೋಯಿನ್‌ಗಳು ಬಾಲಿವುಡ್‌ನ ನಟಿಯರಿಗೆ ಏನೂ ಕಡಿಮೆಯಿಲ್ಲ ಎಂಬ ಥರಾ ಡಿಮ್ಯಾಂಡ್ ಹೊಂದಿದ್ದಾರೆ. ಅವರ ಸಂಭಾವನೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ.

ಅತಿ ಹೆಚ್ಚು ಸಂಭಾವನೆ ಪಡೆಯೋರ ಲಿಸ್ಟಿನಲ್ಲಿರೋ ಮೊದಲ ನಟಿ ಅಂದ್ರೆ ಅನುಷ್ಕಾ ಶೆಟ್ಟಿ. ಮಂಗಳೂರು ಮೂಲದ ಈ ಚೆಲುವೆ ಈಗ ತೆಲುಗು ತಮಿಳು ಭಾಷೆಗಳ ಬಲು ಬೇಡಿಕೆಯ ನಟಿ. ಬಾಹುಬಲಿ ಫಿಲಂಗೆ ಈಕೆ 4-5 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದಳು. ಅಷ್ಟೇ ಸಿಕ್ಕಿತ್ತು. ಇದು ದಕ್ಷಿಣ ಭಾರತದ ಯಾವುದೇ ನಟಿ ಇದುವರೆಗೆ ಪಡೆದ ಹೆಚ್ಚಿನ ಸಂಭಾವನೆ. ಬಾಹುಬಲಿಯೊಂದಿಗೆ ಈಕೆಯ ಖ್ಯಾತಿ ಉತ್ತುಂಗಕ್ಕೆ ಏರಿತು. ರುದ್ರಮದೇವಿ, ಭಾಗಮತಿ ಕೂಡ ಈಕೆಯ ಅದ್ಭುತ ಫಿಲಂಗಳು.

Tap to resize

Latest Videos

undefined

ನಯನತಾರಾ ಒಂದು ಫಿಲಂಗೆ ಪಡೆಯೋ ಸಂಭಾವನೆ 2-3 ಕೋಟಿ. ಈಕೆ 2018ರ ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿ ಲಿಸ್ಟಿನಲ್ಲಿ ಜಾಗ ಪಡೆದ ದಕ್ಷಿಣ ಭಾರತದ ಏಕೈಕ ನಟಿ. ಗ್ಲಾಮರ್ ಹಾಗೂ ನಟನೆಯ ಪ್ರತಿಭೆ ಎರಡನ್ನೂ ಹೊಂದಿರುವ ಈಕೆ ಎರಡು ದಶಕಗಳಿಂದ ತಮಿಳನ್ನು ಆಳುತ್ತಿದ್ದಾಳೆ. ಮನಸಿನಕ್ಕರೆ ಫಿಲಂ ಮೂಲಕ ಇಂಡಸ್ಟ್ರಿಗೆ ಬಂದ ಈಕೆ ವಲ್ಲವನ್‌, ತುಳಸಿ, ಮುಂತಾದ ಚಿತ್ರಗಳ ಜೊತೆಗೆ ಕನ್ನಡದಲ್ಲೂ ನಟಿಸಿದ್ದಾಳೆ.



ಸಮಂತ ಅಕ್ಕಿನೇನಿ ಅವರು ಒಂದು ಚಲನಚಿತ್ರಕ್ಕೆ 2 ಕೋಟಿ ರೂ. ಪಡೆಯುತ್ತಾರೆ. ಈಕೆ ಇತ್ತೀಚೆಗೆ ನಟಿಸಿರುವ ಬಲು ಬೇಡಿಕೆಯ ಒಟಿಟಿ ಸೀರೀಸ್ ಫ್ಯಾಮಿಲಿ ಮ್ಯಾನ್- 2ನೇ ಭಾಗ. ತನ್ನದೇ ಆದ ಒಂದು ಎನ್‌ಜಿಒ ಕೂಡ ನಡೆಸುತ್ತಿದ್ದಾಳೆ. ಯೇ ಮಾಯಾ ಚೇಸವೆ ಚಿತ್ರದಲ್ಲಿ ನಾಗಚೈತನ್ಯ ಜೊತೆ ರೊಮ್ಯಾನ್ಸ್ ಮಾಡುತ್ತಾ ತೆಲುಗು ಚಿತ್ರರಂಗದ ಮನೆಮಾತಾದವಳು ಈಕೆ.

ತಾಪಸಿ ಪನ್ನು ತೆಲುಗು ತಮಿಳಿನಿಂದಲೇ ಬಾಲಿವುಡ್‌ಗೆ ಹೋದ ನಟಿ, ನಂತರ ಅಲ್ಲಿ ಅಮಿತಾಭ್ ಬಚ್ಚನ್ ಮುಂತಾದ ಲೆಜೆಂಡ್‌ಗಳ ಜೊತೆಗೆ ನಟಿಸಿ ಹೆಸರು ಮಾಡಿದಳು. ಆದರೂ ದಕ್ಷಿಣದಲ್ಲೇ ಆಕೆ ಬ್ಯುಸಿ. ಈಕೆ ಕಡೆಯುವ ಸಂಭಾವನೆ 1.5-2 ಕೋಟಿ.

ರಶ್ಮಿಕಾ ಮಂದಣ್ಣ ಕನ್ನಡದಿಂದ ತಮಿಳಿಗೆ ಹೋಗಿ, ಅಲ್ಲಿಂದ ಈಗ ಬಾಲಿವುಡ್‌ಗೂ ಹೋಗಿದ್ದಾರೆ. ತಮಿಳಿನ ಸುಲ್ತಾನ್ ಮತ್ತು ಅಲ್ಲು ಅರ್ಜುನ್‌ನ ಪುಷ್ಪಾ ಸಿನಿಮಾಗಳಲ್ಲೂ ನಟಿಸಿದ್ದಾಳೆ. ಇವರು ಒಂದು ಫಿಲಂಗೆ 2 ಕೋಟಿ ಪಡೆಯುತ್ತಾರೆ ಎಂಬ ರೂಮರ್ ಇದೆ. ಆದರೆ ರಶ್ಮಿಕಾ ಈ ಬಗ್ಗೆ ಕೇಳಿದಾಗ ವ್ಯಂಗ್ಯವಾಗಿ ಉತ್ತರಿಸಿದ್ದರು. ಈ ರೂಮರ್‌ನಿಂದಾಗಿಯೇ ಇನ್‌ಕಂ ಟ್ಯಾಕ್ಸ್‌ನವರು ನನ್ನ ಮನೆಗೆ ರೈಡ್ ಮಾಡುವ ಹಾಗಾಯಿತು ಎಂದಿದ್ದರು.

ಈ ಸೆಲೆಬ್ರಿಟಿಗಳಿಗೆ ಅನ್ಯ ದೇಶಗಳಿಗೆ ಪ್ರವೇಶವಿಲ್ಲ! ...

ಶ್ರುತಿ ಹಾಸನ್‌ ತುಂಬಾ ಟ್ಯಾಲೆಂಟೆಡ್ ನಟಿ. ಈಕೆ ಚಿತ್ರವೊಂದಕ್ಕೆ 2.5 ಕೋಟಿ ಚಾರ್ಜ್ ಮಾಡುತ್ತಾಳೆ. ಜೊತೆಗೆ ಈಕೆ ರಾಕ್‌ಸ್ಟಾರ್ ಕೂಡ. ಪಾಪ್ ಸಿಂಗರ್, ಪ್ಲೇ ಬ್ಯಾಕ್ ಸಿಂಗರ್, ಮ್ಯೂಸಿಕ್ ನೀಡುವವಳು ಕೂಡ. ಗಬ್ಬರ್ ಸಿಂಗ್, ಎವಡು, ಶ್ರೀಮಂತುಡು ಮೊದಲಾದವು ಈಕೆಯ ಫಿಲಂಗಳು.

ತಮನ್ನಾ ಆಲ್‌ರೌಂಡರ್. ತಮಿಳಿನಲ್ಲಿ ಖ್ಯಾತಿ ಪಡೆದವಳು. ಚಾಂದ್‌ಸಾ ರೋಶನ್‌ ಚೆಹರಾ ಮೂಲಕ ಈಕೆ ಬಾಲಿವುಡ್‌ನಲ್ಲೂ ಒಂದು ಕಾಲು ಇಟ್ಟಿದ್ದಾಳೆ. ಬಾಹುಬಲಿ ಮೂಲಕ ತೆಲುಗಿನಲ್ಲೂ ಇತರ ಕಡೆಗೂ ಪ್ರಖ್ಯಾತಳಾದಳು. ಈಕೆಯ ಗೌರವಧನ 2-3 ಕೋಟಿ. 100%ಲವ್ ಎಂಬುದು ಈಕೆಯ ದೊಡ್ಡ ಹಿಟ್ ಮೂವಿ.

ಕಾಜಲ್ ಅಗರ್‌ವಾಲ್‌ ತಮಿಳು, ತೆಲಗು ಮತ್ತು ಹಿಂದಿ ಫಿಲಂಗಳಲ್ಲಿ ನಟಿಸಿ ಹೆಸರು ಮಾಡಿದವಳು. ಒಂದು ಚಿತ್ರಕ್ಕೆ 1-2 ಕೋಟಿ ಪಡೆಯುತ್ತಾಳೆ. ಕ್ಯೂಂ ಹೋಗಯಾ ನ ಈಕೆಯ ಬಾಲಿವುಡ್ ಪ್ರಥಮ ಚಿತ್ರ. ತೆಲುಗು ಚಿತ್ರರಂಗದ ಎಲ್ಲದಾಖಲೆಗಳನ್ನು ಧೂಳೀಪಟ ಮಾಡಿದ ಮಗಧೀರ ಫಿಲಂನಲ್ಲಿ ನಟಿಸುವ ಮೂಲಕ ಈಕೆ ದೊಡ್ಡ ಮಟ್ಟಿನ ಹೆಸರು ಪಡೆದಳು. ಕರಾವಳಿ ಚೆಲುವೆ ಪೂಜೆ ಹೆಗಡೆ ಸಹ ಇದೇ ಲಿಸ್ಟ್‌ನಲ್ಲಿದ್ದಾರೆ.

ಜಯಾ ಬಚ್ಚನ್‌ರ ಸಿಡುಕು ವರ್ತನೆ ಹಿಂದೆ ಇರುವ ಕಾರಣ ರಿವೀಲ್‌ ಮಾಡಿದ ಅಭಿಷೇಕ್‌! ...
 

click me!