
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂಬೈನಲ್ಲಿ ಶೂಟಿಂಗ್‌ಗಾಗಿ ಹೊರ ಬಂದಿದ್ದಾರೆ. ಇತ್ತೀಚೆಗಷ್ಟೇ ನಟಿ ದುಬೈನಿಂದ ಹಿಂದಿರುಗಿ ಬಂದಿದ್ದರು. ಐಪಿಎಲ್ 2020ರಲ್ಲಿ ಪತಿ ಕೊಹ್ಲಿಗೆ ಸಾಥ್ ಕೊಡೋಕೆ ನಟಿ ದುಬೈಗೆ ತೆರಳಿದ್ದರು.
ತಮ್ಮ ವ್ಯಾನಿಟಿ ವ್ಯಾನ್‌ನಿಂದ ನಟಿ ಹೊರ ಬರುತ್ತಿರುವ ಫೋಟೋ ಈಗ ವೈರಲ್ ಆಗಿದೆ. ನಟಿ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್ ಎಲ್ಲರೂ ಕೊರೋನಾ ಮಾರ್ಗ ಸೂಚಿಗಳನ್ನು ಪಾಲಿಸಿದ್ದರು.
ತಾಯಿಯಾಗಲಿರೋ ಮಗಳ ಫೋಟೋ ಕ್ಲಿಕ್ ಮಾಡಿದ್ರು ಅನುಷ್ಕಾ ತಂದೆ, ಹೇಗಿದೆ ನೋಡಿ
ಟೀಲ್ ಗ್ರೀನ್ ಸಿಂಗಲ್ ಶೋಲ್ಡರ್ ಗೌನ್ ಧರಿಸಿದ್ದ ನಟಿ ಫ್ಲಾಟ್ ಚಪ್ಪಲಿ ಧರಿಸಿದ್ದರು. ಅವರೂ ಫೇಸ್‌ಮಾಸ್ಕ್ ಧರಿಸಿದ್ದರು. ಇತ್ತೀಚೆಗಷ್ಟೇ ನಟಿ ಸೆಟ್‌ನಿಂದ ದೂರವಿದ್ದು ಸೆಟ್‌ನ್ನು ಎಷ್ಟು ಮಿಸ್ ಮಾಡ್ಕೊಳ್ತಿದ್ರು ಎಂಬುದನ್ನು ತಿಳಿಸಿದ್ದರು.
ಆಗಸ್ಟ್‌ನಲ್ಲಿ ವಿರಾಟ್ ಮತ್ತು ಅನುಷ್ಕಾ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದರು. 2021ರ ಜನವರಿಯಲ್ಲಿ ಮಗು ಹುಟ್ಟುವ ನಿರೀಕ್ಷೆ ಇದೆ. ಅನುಷ್ಕಾ ಪ್ರೆಗ್ನೆನ್ಸಿ ಗ್ಲೋನಲ್ಲಿ ಮಿಂಚುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.