ವಮಿಕಾಗೆ ವರ್ಷ ತುಂಬುವ ಮುನ್ನವೇ ಸಿಕ್ಕಿತು ನೇಮ್‌ಪ್ಲೇಟ್ | ಎಷ್ಟು ಕ್ಯೂಟ್ ಆಗಿದೆ ನೋಡಿ
ಮೊದಲ ಮಗಳನ್ನು ತಮ್ಮ ಜೀವನದಲ್ಲಿ ಸ್ವಾಗತಿಸಿದ ನಂತರ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗ ಮಗುವಿನ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಮಗಳ ಮುಖ ತೋರಿಸದಿದ್ದರೂ ವಮಿಕಾ ಎಂದು ಹೆಸರಿಟ್ಟಿರುವುದಾಗಿ ಈ ಜೋಡಿ ತಿಳಿಸಿದೆ.
ಈ ಮುದ್ದು ವಮಿಕಾಳ ಹೆಸರಿನಲ್ಲಿ ಈಗಾಗಲೇ ಆಕೆಯದ್ದೇ ನೇಮ್ಪ್ಲೇಟ್ ಕೂಡಾ ಬಂದಾಗಿದೆ. ಅಹಮದಾಬಾದ್ನಲ್ಲಿ ವಮಿಕಾಳ ಹೆಸರಿನ ನೇಮ್ ಪ್ಲೇಟ್ ನೋಡಬಹುದು.
undefined
ಮನೀಶ್ ವಿನ್ಯಾಸದ ನೂರಾನಿಯತ್ ಕಲೆಕ್ಷನ್‌ನಲ್ಲಿ ಸಾರಾ..!
ವಿರಾಟ್ ಕೊಹ್ಲಿ ಮತ್ತು ಅವರ ತಂಡವು ಇಂಗ್ಲೆಂಡ್‌ನೊಂದಿಗೆ ನಡೆಯುತ್ತಿರುವ ಸರಣಿಯಲ್ಲಿ ಬ್ಯುಸಿ ಇದ್ದು ಅಹಮದಾಬಾದ್‌ನಲ್ಲಿ ಉಳಿದುಕೊಂಡಿದ್ದರು. ಆಟಗಾರರಿಗೆ ಮನೆಯಲ್ಲಿ ಇರುವಂತಹ ಅನುಭವ ನೀಡಲು ಹೋಟೆಲ್ ನಿರ್ಧರಿಸಿತ್ತು.
ಹೋಟೆಲ್ ನಿರ್ವಹಣೆ ಕೋಣೆಯ ಸಂಖ್ಯೆಯ ಬದಲಾಗಿ ಆಟಗಾರರ ಮತ್ತು ಅವರ ಕುಟುಂಬ ಸದಸ್ಯರ ನಾಮ ಫಲಕಗಳೊಂದಿಗೆ ಬದಲಾಯಿಸಲಾಗಿತ್ತು. ಕ್ಯಾಪ್ಟನ್ ಕೊಹ್ಲಿಯ ಕೋಣೆಯ ಹೊರಗಿನ ಮುದ್ದಾದ ನಾಮಫಲಕವು ವಮಿಕಾ, ಅನುಷ್ಕಾ ಮತ್ತು ವಿರಾಟ್ ಎಂಬ ಮೂರು ಹೆಸರುಗಳನ್ನು ಹೊಂದಿತ್ತು.