'ಸೈರಾಟ್' ಮರಾಠಿ ಸಿನಿರಂಗವನ್ನೇ ನಾಶಪಡಿಸಿತು, ಆ ತಪ್ಪು ಮಾಡಬೇಡಿ; ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆ

By Shruthi Krishna  |  First Published Dec 10, 2022, 4:14 PM IST

ಸೈರಟ್ ಸಿನಿಮಾ ಸಕ್ಸಸ್ ಮರಾಠಿ ಸಿನಿಮಾರಂಗವನ್ನೇ ನಾಶ ಪಡಿಸಿತು, ಆ ತಪ್ಪನ್ನು ರಿಷಬ್ ಶೆಟ್ಟಿ ಮಾಡಬಾರದು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದರು. 


ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಪ್ಯಾನ್ ಇಂಡಿಯಾ ಸಿನಿಮಾ, ಬಿಗ್ ಬಜೆಟ್ ಮತ್ತು ಸಿನಿಮಾರಂಗದ ಇಂದಿನ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸೈರಾಟ್ ಸಿನಿಮಾದ ಸೂಪರ್ ಸಕ್ಸಸ್ ಮರಾಠಿ ಸಿನಿಮಾರಂಗವನ್ನು ಹೇಗೆ ನಾಶಪಡಿಸಿತು ಎಂದು ನಿರ್ದೇಶಕ ನಾಗರಾಜ್ ಮಂಜುಳೆ ಹೇಳಿದ್ದರು ಹಾಗೆ ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಅದೇ ತಪ್ಪನ್ನು  ಮಾಡಬಾರದು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಎಚ್ಚರಿಕೆ ನೀಡಿದರು. ಕಡಿಮೆ ಬಜೆಟ್ ಸಿನಿಮಾದಿಂದನೂ ದೊಡ್ಡ ಮಟ್ಟದ ಹಣ ಮಾಡಬಹುದ ಎಂದು ಮರಾಠಿಯ ಸೈರಾಟ್ ಸಿನಿಮಾ ತೋರಿಸಿಕೊಟ್ಟಿತ್ತು. ಇದರಿಂದ ಇದ್ದಕ್ಕಿದ್ದಂತೆ ನಿರ್ದೇಶಕ ಉಮೇಶ್ ಕುಲಕರ್ಣಿ ಸೇರಿದಂತೆ ಅನೇಕರು ಸಿನಿಮಾ ಮಾಡುವುದನ್ನೇ ನಿಲ್ಲಿಸಿದರು. ಏಕೆಂದರೆ ಎಲ್ಲರೂ ಸೈರಾಟ್ ಸಿನಿಮಾವನ್ನೇ ಅನುಕರಿಸಲು ಬಯಸಿದರು' ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದರು. 

'ಒಂದು ವೇಳೆ ಕಾಂತಾರ ಸ್ಟಾರ್ ರಿಷಬ್ ಸೆಟ್ಟಿ ತನ್ನ ದಾರಿಯನ್ನು ಬದಲಾಯಿಸಲು ಪ್ರಾರಂಭಿಸಿದರ, ಬಾಕ್ಸ್  ಆಫ್ಸೀಸ್ ಮೇಲೆ ಕಣ್ಣಿಟ್ಟು ದೊಡ್ಡ ಬಜೆಟ್ ಸಿನಿಮಾಗಳ ಹಿಂದೆ ಬಿದ್ದರೆ ದೊಡ್ಡ ಸಮಸ್ಯೆ ಆಗಲಿದೆ' ಎಂದು ರಿಷಬ್ ಶೆಟ್ಟಿಯನ್ನು ಎಚ್ಚರಿಸಿದರು ಅನುರಾಗ್ ಕಶ್ಯಪ್. 

Tap to resize

Latest Videos

ಇದೇ ವೇಳೆ ಅನುರಾಗ್ ಕಶ್ಯಪ್ ಮತ್ತೋರ್ವ ಖ್ಯಾತ ನಿರ್ದೇಶಕ ಅಮೆರಿಕಾದ ಜೇಸನ್ ಬ್ಲಮ್ ಅವರ ಉದಾಹರಣೆಯನ್ನು ನೀಡಿದರು. ಅವರು ತಮ್ಮ ಬ್ಯುಸಿನೆನ್ ಮಾದರಿಯನ್ನು ಬದಲಾಯಿಸಲಿಲ್ಲ. ಕಡಿಮೆ ಬಜೆಟ್‌ನ ಹಾರರ್ ಸಿನಿಮಾಗಳಲ್ಲಿ ಯಶಸ್ಸು ಕಂಡ ನಂತರವೂ  ಜೇಸನ್ ಬ್ಲಮ್ ತನ್ನ ಸಿನಿಮಾದ ನಿರ್ಮಾಣ ವೆಚ್ಚ ಹೆಚ್ಚಿಸಲು ನಿರಾಕರಿಸಿದರು ಎಂದು ಹೇಳಿದರು. ಇವತ್ತಿಗೂ ಜೇಸನ್ ಬ್ಲಮ್ ಅತ್ಯಂತ ನಿಯಂತ್ರಿತ ಬಜೆಟ್ ನಲ್ಲೇ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸಿನಿಮಾದ ಸಕ್ಸಸ್‌ನಿಂದ ಪ್ರತಿಯೊಬ್ಬರೂ ಅದರಿಂದ ಪಡೆಯುತ್ತಿದ್ದಾರೆ' ಎಂದು ಅನುರಾಗ್ ಕಶ್ಯಪ್ ವಿವರಿಸಿದರು. 

ನಾವೇನು ಮಾಡ್ತಿದ್ದೀವಿ ಅಂತ ಯೋಚಿಸಬೇಕಿದೆ; 'ಕಾಂತಾರ' ಸಕ್ಸಸ್ ಬಗ್ಗೆ ನಿರ್ದೇಶಕ ರಾಜಮೌಳಿ ಅಚ್ಚರಿ ಹೇಳಿಕೆ

ಸೈರಾಟ್ ಸಿನಿಮಾ ಬಗ್ಗೆ

ಮರಾಠಿ ಸಿನಿಮಾ ಸೈರಾಟ್ 2016ರಲ್ಲಿ ರಿಲೀಸ್ ಆಗಿತ್ತು. ನಾಗರಾಜ್ ಮಂಜುಳೆ ಅವರ ಸಾರಥ್ಯದಲ್ಲಿ ಬಂದ ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಕೇವಲ 4 ಕೋಟಿ ಬಜೆಟ್ ನಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 110 ಕೋಟಿ ಕಲೆಕ್ಷನ್ ಮಾಡಿತ್ತು. ಮರಾಠಿಯಲ್ಲಿ ರಿಲೀಸ್ ಬಂದ ಸೈರಾಟ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಸಿನಿಮಾ ಬಳಿಕ ಅನೇಕ ಭಾಷೆಗಳಿಗೆ ರಿಮೇಕ್ ಆಗಿತ್ತು. 

'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?

ಕಾಂತಾರ ಸಕ್ಸಸ್ 

ಕಾಂತಾರ ಸಿನಿಮಾದ ಕೂಡ ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾವಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿರುವ ಕಾಂತಾರ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ರಿಲೀಸ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ಕಾಂತಾರ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಚಿತ್ರಕ್ಕೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಹಾಡಿಹೊಗಳಿದ್ದರು. 
 

click me!