ರಿಮ್ಜಿಮ್ ಗಿರೇ ಸಾವನ್‌: ಅತೀ ಹೆಚ್ಚು ಸಂಭಾವನೆ ಪಡೆಯೋ ಕಿರುತೆರೆ ನಟಿಯ ರೊಮ್ಯಾನ್ಸ್ ವೀಡಿಯೋ ವೈರಲ್

Published : Jul 11, 2023, 01:41 PM ISTUpdated : Jul 11, 2023, 02:07 PM IST
ರಿಮ್ಜಿಮ್ ಗಿರೇ ಸಾವನ್‌: ಅತೀ ಹೆಚ್ಚು ಸಂಭಾವನೆ ಪಡೆಯೋ ಕಿರುತೆರೆ ನಟಿಯ ರೊಮ್ಯಾನ್ಸ್ ವೀಡಿಯೋ ವೈರಲ್

ಸಾರಾಂಶ

ಹಿಂದಿ ಜನಪ್ರಿಯ ಸೀರಿಯಲ್ ಅನುಪಮಾ ಖ್ಯಾತಿಯ ನಟಿ ರೂಪಾ ಗಂಗೂಲಿ ಪತಿಯ ಜೊತೆ ಮುಂಗಾರು ಮಳೆಯಲ್ಲಿ ರೋಮಾನ್ಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ

ಹಿಂದಿ ಜನಪ್ರಿಯ ಸೀರಿಯಲ್ ಅನುಪಮಾ ಖ್ಯಾತಿಯ ನಟಿ ರೂಪಾ ಗಂಗೂಲಿ ಪತಿಯ ಜೊತೆ ಮುಂಗಾರು ಮಳೆಯಲ್ಲಿ ರೋಮಾನ್ಸ್ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿ ಅಶ್ವಿನ್ ಜೊತೆ ಮಳೆಯಲ್ಲಿ ಎಂಜಾಯ್ ಮಾಡುತ್ತಿರುವ ವೀಡಿಯೋವನ್ನು ರೂಪಾ ಗಂಗೂಲಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಕಿರುತೆರೆ ಪ್ರಿಯರನ್ನು ಬಹುವಾಗಿ ಸೆಳೆದ ಹಿಂದಿಯ ಅನುಪಮಾ ಸೀರಿಯಲ್ ನೋಡುವವರಿಗೆ ಈ ರೂಪಾಲಿ ಬಹಳ ಅಚ್ಚುಮೆಚ್ಚು, ತನ್ನ ಆರೋಗ್ಯ ಕಷ್ಟ ಸುಖ ಎಲ್ಲವನ್ನು ಮರೆತು ಬರೀ ಮನೆ ಮಠ ಗಂಡ ಮಕ್ಕಳು ಅತ್ತೆ ಮಾವ ಅಂತ  ಬರೀ ಅವರಿಗಾಗಿಯೇ ಜೀವನ ಸವೆಸುವ ಭಾರತೀಯ ಗೃಹಿಣಿಯ ಕತೆ ಹೊಂದಿರುವ ಈ ಅನುಪಮ ಸೀರಿಯಲ್‌ನ ಅನುಪಮಾಳನ್ನು ಇಷ್ಟಪಡದ ಜನರಿಲ್ಲ, ಅದೇ ರೀತಿ ಈಗ ರೂಪಾಲಿಯವರ ಈ ವೀಡಿಯೋ ವೈರಲ್ ಆಗಿದೆ. 

ದೇಶದ್ಯಾಂತ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದ್ದರೆ, ಬಹುತೇಕರು ಮಳೆಯ ಹಳೆಯ ಹಾಡುಗಳ ಜೊತೆ  ಗತಕ್ಕೆ ಜಾರುತ್ತಿದ್ದಾರೆ. ಹಾಗೆಯೇ ಇಲ್ಲಿ 
1979 ಮಂಜಿಲ್ ಸಿನಿಮಾದ ರಿಮ್ಜಿಮ್ ಗಿರೇ ಸಾವನ್  ಹಾಡಿಗೆ ಪತಿ ಅಶ್ವಿನ್ ಜೊತೆ ನಟಿ ರೂಪಾಲಿ ಮಳೆಯ ಮಧ್ಯೆ ಹೆಜ್ಜೆ ಹಾಕಿದ್ದು, ಇವರಿಬ್ಬರ ಡ್ಯುಯೆಟ್ ಈಗ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಪರ್ಫೆಕ್ಟ್ ಜೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.  ಇನ್ನು ನಟಿ ರೂಪಾಲಿ ಅದ್ಭುತ ನಟಿ ಮಾತ್ರವಲ್ಲದೇ ಪತಿ ಅಶ್ವಿನ್‌ ಕೆ ವರ್ಮಾಗೆ ಪ್ರೀತಿಯ ಪತ್ನಿ, ರುದ್ರಾಂಶ್ ಎಂಬ ಪುತ್ರನನ್ನು ಹೊಂದಿರುವ ಈ ಜೋಡಿ 2013ರ ಫೆಬ್ರವರಿ 6 ರಂದು ಮದ್ವೆಯಾಗಿದ್ದರು. ತಾಯ್ತನದ ಕಾರಣಕ್ಕೆ ಕೆಲ ವರ್ಷಗಳ ಕಾಲ ಸೀರಿಯಲ್‌ನಿಂದ ಬಿಡುವು ಪಡೆದುಕೊಂಡಿದ್ದ ರೂಪಾಲಿ ನಂತರ ಅನುಪಮಾ ಸೀರಿಯಲ್ ಮೂಲಕ ಮತ್ತೆ ಬಂದಿದ್ದು, ಈ ಸೀರಿಯಲ್ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದೆ.

ವೀಡಿಯೋದಲ್ಲಿ ನಟಿ ರೂಪಾಲಿ ಪತಿಯ ಜೊತೆ ಮುಂಗಾರು ಮಳೆಯನ್ನು ಎಂಜಾಯ್ ಮಾಡ್ತಿದ್ದಾರೆ. ಈ ವೀಡಿಯೋಗೆ ತಕ್ಕಂತೆ ರಿಮ್ ಜಿಮ್ ಗಿರೇ ಸಾವನ್ ಹಾಡು ಈ ವೀಡಿಯೋದ ಅಂದ ಹೆಚ್ಚಿಸಿದೆ.  ವೀಡಿಯೋ ಶೇರ್ ಮಾಡಿಕೊಂಡಿರುವ ರೂಪಾಲಿ, ಪ್ರೀತಿ ಮತ್ತು ಪ್ರಣಯದ ಈ ಋತುವಿನಲ್ಲಿ ಸ್ವಲ್ಪ "ನಮ್ಮ" ಸಮಯವನ್ನು ಹುಡುಕುತ್ತಿದ್ದೇನೆ. ಮಳೆ ಸುರಿಯುತ್ತಿದರೆ ಸ್ವಲ್ಪ  ರೊಮ್ಯಾನ್ಸ್ ಆಗುತ್ತೆ ಅಲ್ವಾ ಎಂದು ಅವರು ಬರೆದು ಕೊಂಡಿದ್ದಾರೆ. 

ಇನ್ನು ಈ ರಿಮ್ಜಿಮ್ ಗಿರೇ ಸಾವನ್ ಹಾಡನ್ನು 1979 ಮಂಜಿಲ್ ಸಿನಿಮಾಕ್ಕಾಗಿ ಕಿಶೋರ್ ಕುಮಾರ್ ಹಾಡಿದ್ದು, ಮುಂಗಾರು ಬಂದಾಗಲೆಲ್ಲಾ ಈ ಹಾಡು ಅನೇಕರನ್ನು ಬಹುವಾಗಿ ಕಾಡುತ್ತದೆ. ಮಳೆ ಹಾಗೂ ಪ್ರೀತಿ ಪ್ರಣಯ ವಿರಹವನ್ನು ಸುಂದರವಾಗಿ ಬಣ್ಣಿಸಿದ ಹಿಂದಿಯ ರೋಮ್ಯಾಂಟಿಕ್ ಹಾಡಿದು.  ಈ ಹಾಡಿನಲ್ಲಿ ಅಮಿತಾಭ್ ಬಚ್ಚನ್ ಹಾಗೂ ಮೌಸಮಿ ಚಟರ್ಜಿ ಅವರು  ನಟಿಸಿದ್ದಾರೆ. ಸುರಿಯುತ್ತಿರುವ ಮಳೆಯ ಮಧ್ಯೆ ಮುಂಬೈನ ಪ್ರಸಿದ್ಧ ಸ್ಥಳಗಳಲ್ಲಿ ಈ ಹಾಡಿನ ಶೂಟಿಂಗ್ ನಡೆದಿತ್ತು. ಆರ್‌ಡಿ ಬರ್ಮನ್ ಅವರ  ಸಂಗೀತಾದಲ್ಲಿ ಈ ರಿಮ್‌ಜಿಮ್ ಗಿರೇ ಸಾವನ್ ಹಾಡನ್ನು ಖ್ಯಾತ ಗಾಯಕ ಕಿಶೋರ್ ಕುಮಾರ್ ಹಾಡಿದ್ದರು. 

ಇದೇ ಹಾಡನ್ನು ಹಿರಿಯ ದಂಪತಿಯೊಬ್ಬರು  ಕೆಲ ದಿನಗಳ ಹಿಂದಷ್ಟೇ ರೀಕ್ರಿಯೇಟ್ ಮಾಡಿದ್ದರು. ಈ ವೀಡಿಯೋವನ್ನು ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಮುಂಗಾರು ಮಳೆಯನ್ನು ಬಣ್ಣಿಸಲು ಇದಕ್ಕಿಂತ ಒಳ್ಳೆ ಹಾಡು ಯಾವುದಿದೆ ಎಂದು ಕೇಳಿದ್ದರು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಜೊತೆ ರಾಜಮೌಳಿ ಯಾಕೆ ಸಿನಿಮಾ ಮಾಡಿಲ್ಲ? ಕಾರಣ ಕೇಳಿದ್ರೆ ಆಶ್ಚರ್ಯಪಡ್ತೀರಾ!
ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?