ಕಂಗನಾ ರಣಾವತ್ ಅವರ ಎಮರ್ಜೆನ್ಸಿ ಸಿನಿಮಾದಲ್ಲಿ ಬಾಲಿವುಡ್‌ನ ಮತ್ತೋರ್ವ ಖ್ಯಾತ ಹಿರಿಯ ನಟ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅನುಪಮ್ ಖೇರ್ ಫಸ್ಟ್ ಲುಕ್ ರಿಲೀಸ್ ಆಗಿದೆ.
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಸದಾ ವಿವಾದಗಳ ಮೂಲವೇ ಸುದ್ದಿಯಲ್ಲಿರುತ್ತಿದ್ದ ನಟಿ ಕಂಗನಾ ಇದೀಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಧಾಕಡ್ ಹೀನಾಯ ಸೋಲಿನ ಸೋಲಿನ ಬಳಿಕ ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಎಮರ್ಜೆನ್ಸಿ ಸಿನಿಮಾದ ಕಂಗನಾ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಹಾಗೆ ಎಮರ್ಜೆನ್ಸಿಯಲ್ಲಿ ಕಂಗನಾ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾದಿಂದ ಮತ್ತೊಂದು ಪಾತ್ರ ರಿವೀಲ್ ಆಗಿದೆ. ಹೌದು ಕಂಗನಾ ಸಿನಿಮಾದಲ್ಲಿ ಬಾಲಿವುಡ್‌ನ ಮತ್ತೋರ್ವ ಖ್ಯಾತ ಹಿರಿಯ ನಟ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಅನುಪಮ್ ಖೇರ್ ಫಸ್ಟ್ ಲುಕ್ ರಿಲೀಸ್ ಆಗಿದೆ.
ಅಂದಹಾಗೆ ಕಾಶ್ಮೀರ್ ಫೈಲ್ಸ್ ನಟ ಎಮರ್ಜೆನ್ಸಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 1970ರಲ್ಲಿ ಇಂದಿರಗಾಂಧಿ ಅವರ ವಿರೋಧಿ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ ಕಂಗನಾ ರಣಾವತ್ ಪುಟ್ಟ ವಿಡಿಯೋ ಶೇರ್ ಮಾಡುವ ಮೂಲಕ ಇಂದಿರಾಗಾಂಧಿ ಪಾತ್ರ ಪರಿಚಯಿಸಿದ್ದರು. ಅಂದಹಾಗೆ ಎಮರ್ಜೆನ್ಸಿಗೆ ಕಂಗನಾ ರಣಾವತ್ ಅವರೇ ನಿರ್ದೇಶನ ಮಾಡಿ, ನಿರ್ಮಾಣ ಮಾಡುತ್ತಿದ್ದಾರೆ. ಕಂಗನಾ ಅವರದ್ದೇ ಆದ ಮಣಿಕರ್ಣಿಕಾ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬರುತ್ತಿದೆ.
1975-1977ರಲ್ಲಿ 21 ತಿಂಗಳ ಅವಧಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. ಇಂದಿರಾ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ಮಾಡುತ್ತಿದ್ದ ಸಮಯವಾಗಿತ್ತು. ಇದನ್ನು ಸ್ವತಂತ್ರ ಭಾರತದ ಕರಾಳ ಅವಧಿಗಳಲ್ಲಿ ಒಂದೆಂದು ಕರೆಯಲಾಗುತ್ತದೆ. ಈ ಬಗ್ಗೆ ಕಂಗನಾ ರಣಾವತ್ ಸಿನಿಮಾ ಮಾಡುತ್ತಿರುವುದು ಕುತೀಹಲ ಮೂಡಿಸಿದೆ. ಎಮರ್ಜೆನ್ಸಿ ಎಂದೆ ಟೈಟಲ್ ಇಟ್ಟಿರುವುದರಿಂದ ಸಿನಿಮಾದಲ್ಲಿ ಹೆಚ್ಚಾಗಿ ತುರ್ತು ಪರಿಸ್ಥಿಯ ಬಗ್ಗೆ ಇರಲಿದೆ ಎನ್ನುವುದು ಗೊತ್ತಾಗುತ್ತಿದೆ.
ಈ ಬಗ್ಗೆ ಮಾತನಾಡಿದ್ದ ಕಂಗನಾ ರಣಾವತ್, ತುರ್ತು ಪರಿಸ್ಥಿತಿಯು ಭಾರತೀಯ ರಾಜಕೀಯ ಇತಿಹಾಸದ ಪ್ರಮುಖ ಅವಧಿಗಳಲ್ಲಿ ಒಂದನ್ನು ಪ್ರತಿಬಿಂಬಿಸುತ್ತದೆ. ಅದು ನಾವು ಅಧಿಕಾರವನ್ನು ನೋಡುವ ವಿಧಾನವನ್ನು ಬದಲಾಯಿಸಿದೆ ಮತ್ತು ಅದಕ್ಕಾಗಿಯೇ ನಾನು ಈ ಕಥೆಯನ್ನು ಹೇಳಲು ನಿರ್ಧರಿಸಿದೆ. ಇದಲ್ಲದೆ, ತೆರೆಮೇಲೆ ಪ್ರಸಿದ್ಧ ವ್ಯಕ್ತಿಯ ಪಾತ್ರ ಮಾಡುವುದು ಸವಾಲಾಗಿದೆ. ಏಕೆಂದರೆ ನೋಟ, ಗುಣಲಕ್ಷಣಗಳು ಮತ್ತು ವ್ಯಕ್ತಿತ್ವವನ್ನು ಸರಿಯಾಗಿ ಪಡೆಯಬೇಕು. ನಾನು ವಿಷಯದ ಬಗ್ಗೆ ಸಂಶೋಧನೆ ಮಾಡಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆ' ಎಂದಿದ್ದರು.
'ಧಾಕಡ್' ಹೀನಾಯ ಸೋಲಿನ ಬಳಿಕ ವೈಟ್ ಅಂಡ್ ವೈಟ್ ಲುಕ್‌ನಲ್ಲಿ ಕಾಣಿಸಿಕೊಂಡ ಕಂಗನಾ
ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳುವ ಬಗ್ಗೆಯೂ ಮಾತನಾಡಿದ ಕಂಗನಾ, ಅವರ ನಾಡಿಮಿಡಿತವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು. 'ನನ್ನ ಸಂದರ್ಶನಗಳು, ನನ್ನ ಉಲ್ಲೇಖಗಳು ಮತ್ತು ನಾನು ರಚಿಸಿದ ಪದಗಳಿಂದ ಪ್ರೇಕ್ಷಕರ ನಾಡಿಮಿಡಿತ ನನಗೆ ತಿಳಿದಿದೆ ಎಂದು ನಾನು ನಂಬುತ್ತೇನೆ' ಎಂದು ಹೇಳಿದರು.
ತಮ್ಮ ಹೊಸ ಮನೆಯ ಫೋಟೋ ಹಂಚಿಕೊಂಡ ಕಂಗನಾ, ಹೇಗಿದೆ ನೋಡಿ ಒಳಾಂಗಣ?
ಸದ್ಯ ಅನುಪಮ್ ಖೇರ್ ಎಂಟ್ರಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ದೊಡ್ಡ ಮಟ್ಟದ ಹಿಟ್ ಪಡೆದಿರುವ ಅನುಪಮ್ ಖೇರ್ ಇದೀಗ ಎಮರ್ಜೆನ್ಸಿಯಲ್ಲಿ ಜಯಪ್ರಕಾಶ್ ನಾರಾಯಣ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಕಂಗನಾ ಎಮರ್ಜೆನ್ಸಿ ಹೇಗಿರಲಿದೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.