
ದುಬೈ(ಆ. 13) ಸುಶಾಂತ್ ಸಿಂಗ್ ಸಾವಿನ ಪ್ರಕರಣ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಲೇ ಇದೆ. ಸಿಬಿಐ ಮತ್ತು ಇಡಿ ಅಂಗಳದಲ್ಲಿ ಕೇಸ್ ಇದ್ದು ಅದೆಲ್ಲದರ ನಡುವೆ ಸುಶಾಂತ್ ಒಂದು ಕಾಲದ ಗೆಳತಿ, ಸಹನಟಿ ಅಂಕಿತಾ ಲೋಕಂಡೆ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ನ್ಯಾಯ ಸಿಗಬೇಕು ಎಂದು ಸೋಶಿಯಲ್ ಮೀಡಿಯಾ ಸಹ ಆಗ್ರಹ ಮಾಡುತ್ತಲೇ ಬಂದಿದ್ದಾರೆ. ಸುಶಾಂತ್ ಕುಟುಂಬ ಹೋರಾಟ ಮಾಡುತ್ತಲೇ ಇದೆ.
ಸುಶಾಂತ್ ಸಾವಿಗೆ ಟ್ವಿಸ್ಟ್ ಕೊಟ್ಟ ವಕೀಲ
ಸುಶಾಂತ್ ವಿಚಾರದಲ್ಲಿ ಏನಾಗಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಾಗಬೇಕಿದೆ. ಅಂಕಿತಾ ಕೈಯಲ್ಲೊಂದು ಪತ್ರ ಹಿಡಿದು #JusticeforSushant and #CBIforSSR ಆಗ್ರಹ ಮಾಡಿದ್ದಾರೆ.
ಸುಶಾಂತ್ ಸಿಂಗ್ ಪ್ರಕರಣ ಸುಪ್ರೀಂ ಮುಂದೆ ಗುರುವಾರ ಬಂದಿತ್ತು. ಸಿಬಿಐ ಹೆಚ್ಚುವರಿ ಮಾಹಿತಿಯನ್ನು ಸಲ್ಲಿಕೆ ಮಾಡುವುದರಲ್ಲಿತ್ತು. ಇದೇ ಕಾರಣಕ್ಕೆ ಟ್ವೀಟ್ ಮಾಡಿದ್ದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ನಮ್ಮ ಕುಟುಂಬಕ್ಕೆ ಸಹಾಯ ಬೇಕಿದೆ ಎಂದು ಕೋರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.