
ಮುಂಬೈ(ಡಿ.09): ವಾಯುಸೇನೆ ನೀಡಿದ ಖಡಕ್ ಎಚ್ಚರಿಗೆಕೆ ತಲೆಬಾಗಿರುವ ಅನಿಲ್ ಕಪೂರ್ ಕೊನೆಗೂ ಕ್ಷಮೆ ಕೇಳಿದ್ದಾರೆ. ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.
ವೆಬ್ ಸೀರಿಸ್ ಒಂದರಲ್ಲಿ ಅನಿಲ್ ಕಪೂರ್‌ಗೆ ವಾಯುಸೇನಾ ಅಧಿಕಾರಿಯ ಪಾತ್ರ ನೀಡಲಾಗಿದೆ. ಹೀಗಿರುವಾಗ ದೃಶ್ಯವೊಂದರಲ್ಲಿ ಅನಿಲ್ ಕಪೂರ್ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಅಲ್ಲದೇ ಅನಿಲ್ ಕಪೂರ್ ಈ ದೃಶ್ಯವಿರುವ ವಿಡಿಯೋವನ್ನೂ ಟ್ವೀಟ್ ಮಾಡಿದ್ದರು. ಇದನ್ನು ವಾಯುಸೇನೆ ವಿರೋಧಿಸಿತ್ತು.
ಕುಟುಂಬಕ್ಕೆ ಪುಟ್ಟ ಅಥಿತಿ ಬರ ಮಾಡಿಕೊಂಡ ಅನಿಲ್ ಕಪೂರ್!
ವಾಯುಸೇನೆ ತನ್ನ ಟ್ವೀಟ್‌ನಲ್ಲಿ ಈ ವಿಡಿಯೋದಲ್ಲಿ ಭಾರತೀಯ ವಾಯುಸೇನಾ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಯೂನಿಫಾರಂ ಧರಿಸಿದ ಅನಿಲ್ ಕಪೂರ್ ಬಳಸಿದ ಪದಗಳು ಒಪ್ಪಿಕೊಳ್ಳುವಂತಹುದಲ್ಲ. ಇದು ನಮ್ಮ ಸೇನಾಬಲದ ಅಸಲಿ ನಡತೆಯನ್ನು ತೋರಿಸುತ್ತಿಲ್ಲ. ಸೇನೆಗೆ ಸಂಬಂಧಿಸಿದ ಈ ದೃಶ್ಯವನ್ನು ಈ ಕೂಡಲೇ ತೆಗೆಯಬೇಕು ಎಂದಿತ್ತು.
ಕರಣ್ ಮನೆ ಮುಂದೆ ಅನಿಲ್ ಕಪೂರ್, ನೀತು ಕಪೂರ್, ಕೈರಾ ಅಡ್ವಾಣಿ..!
ಈಗಾಗಲೇ ವಿವಾದ ಎದ್ದಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ವೆಬ್ ಸೀರಿಸ್ ಗಳನ್ನು ಸೆನ್ಸಾರ್ ಅಡಿಯಲ್ಲಿ ತರಬೇಕು ಎಂಬ ಕೂಗಿಗೂ ಪುಷ್ಠಿ ಸಿಕ್ಕಿದ್ದು ಮುಂದಿನ ದಿನಗಳಲ್ಲಿ ಹೊಸ ಕಾನೂನು ಜಾರಿಯಾದರೆ ಅಚ್ಚರಿ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.