
ಹಾಲಿವುಡ್ ನಟಿ ಏಂಜಲೀನಾ ಜೋಲಿ ವಿಶ್ವ ಜೇನುಹುಳಗಳ ದಿನವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ವಿಡಿಯೋ ಹಾಗೂ ಫೋಟೋಗಳನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇಂತಹ ಸಾಹಸಕ್ಕೆ ಕೈ ಹಾಕಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು! ಸುಮಾರು 18 ನಿಮಿಷಗಳ ಕಾಲ ಏಂಜಲೀನಾ ಜೇನುಹುಳಗಳೊಂದಿಗೆ ಇದ್ದು ಫೋಟೋ ಹಾಗೂ ವಿಡಿಯೋ ತೆಗೆಸಿಕೊಂಡಿದ್ದಾರೆ. ನಮ್ಮ ಪರಿಸರದಲ್ಲಿ ಜೇನುಹುಳಗಳು ಪ್ರಮುಖ ಪಾತ್ರ ವಹಿಸುತ್ತದೆ. ಗಿಡಮರಗಳ ವಂಶವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದು. ಜನರಿಗೆ ಜೇನುಹುಳ ಕಂಡ ಭಯ. ಕಚ್ಚಿದರೆ ಹೇಗಪ್ಪಾ ಎಂದು ಚಿಂತಿಸುತ್ತಾರೆ. ಆದರೆ ಜೇನುಹುಳಗಳ ನಡುವೆ ಅದೆಷ್ಟೋ ಮಂದಿ ಕೆಲಸ ಮಾಡುತ್ತಾರೆ.
ಏಂಜೆಲಿನಾ ಜೋಲಿ ಜೇಡ, ಚೇಳು ಹಸಿಹಸಿಯಾಗಿ ತಿಂತಾಳಾ!
'ವುಮೆನ್ ಫಾರ್ ಬೀಸ್' ಎಂದು ಆಯೋಜನೆಯಡಿ ಏಂಜಲೀನಾ ಜೋಲಿ ಯುನೆಸ್ಕೋ ಮತ್ತು ಗುಯೆರ್ಲೈನ್‌ನೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಲ್ಲಿ ಸುಮಾರು 2500 ಜೇನುಗೂಡುಗಳನ್ನು ಕಟ್ಟಿಸಿದ್ದಾರೆ. 2025ರ ವೇಳೆ ಸುಮಾರು 125 ಮಿಲಿಯನ್ ಜೇನುಹುಳ ರೀಸ್ಟಾಕ್ ಮಾಡಬೇಕೆಂಬ ಗುರಿ ಇಟ್ಟಿಕೊಂಡಿದ್ದಾರೆ. ಒಟ್ಟು 50 ಮಹಿಳೆಯರಿಗೆ ಬೀಕೀಪರ್ ತರಬೇತಿ ನೀಡಿ ಬೆಂಬಲಿಸುವ ಉದ್ದೇಶ ಕೂಡ ಇದೆ ಎಂದು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.