'ಅನುಶ್ರೀ ಹೆಸರು ಕೈಬಿಟ್ಟಿರುವ ಹಿಂದೆ ಪ್ರಭಾವ ಇದೆ ಎಂದು ಅನಿಸುವುದಿಲ್ಲ'

Published : Sep 09, 2021, 05:19 PM ISTUpdated : Sep 09, 2021, 05:25 PM IST
'ಅನುಶ್ರೀ ಹೆಸರು ಕೈಬಿಟ್ಟಿರುವ ಹಿಂದೆ ಪ್ರಭಾವ ಇದೆ ಎಂದು ಅನಿಸುವುದಿಲ್ಲ'

ಸಾರಾಂಶ

* ಡ್ರಗ್ಸ್ ಕೇಸಿನಲ್ಲಿ ಅನುಶ್ರೀ ಹೆಸರು ವಿಚಾರ * ಸಾಕಷ್ಟು ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರನ್ನು ಬಿಡಲಾಗಿದೆ * ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರು ಬಿಟ್ಟಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ * ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನಲ್ಲಿ ಮಾಡಾಳು ಗ್ರಾಮದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ

ಹಾಸನ(ಸೆ. 09)  ಡ್ರಗ್ಸ್ ಕೇಸಿನಲ್ಲಿ ಅನುಶ್ರೀ ಹೆಸರನ್ನು ಬೊಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಸಚಿವ ಮಾಧುಸ್ವಾಮಿ ಮಾತನಾಡಿದ್ದಾರೆ. ಸಾಕಷ್ಟು ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರನ್ನು ಬಿಡಲಾಗಿದೆ. ಸಾಕ್ಷ್ಯಾಧಾರ ಇಲ್ಲದೆ ಅವರ ಹೆಸರು ಬಿಟ್ಟಿದ್ದೇವೆ ಎಂದು ಕಮಿಷನರ್ ಹೇಳಿದ್ದಾರೆ ಎಂದು  ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಲ್ಲಿ ಮಾಡಾಳು ಗ್ರಾಮದಲ್ಲಿ ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಡ್ರಗ್ ಕೇಸ್ ನಲ್ಲಿ ನಿರೂಪಕಿ ಅನುಶ್ರಿ ಹೆಸರು ಕೈಬಿಟ್ಟ ಬಗ್ಗೆ  ಒಂದರ್ಥದಲ್ಲಿ ಸಮರ್ಥನೆ ಮಾಡಿಕೊಂಡರು. ಪೊಲೀಸ್ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರು ಹೇಳಲು ಆಗಲ್ಲ ಅವರೇನು ಫಿಕ್ಸ್ ಮಾಡಿ ಕೋರ್ಟ್ ಮುಂದೆ ಹೇಳ್ತಾರೆ ಅದರ ಮೇಲೆ ಟ್ರಯಲ್ ನಡೆಯುತ್ತದೆ. ಅನುಶ್ರಿ ಹೆಸರು ಕೈಬಿಟ್ಟಿರೋ ಹಿಂದೆ ಪ್ರಭಾವ ಇದೆ ಎಂದು ನನಗನ್ನಿಸಲ್ಲ ಎಂದರು.

ಕಾಣದ ಕೈ ಅನುಶ್ರೀ ಕಾಪಾಡಿತೆ? ಕಮಿಷನರ್ ಏನಂತಾರೆ!

ಚಾರ್ಜ್ ಶೀಟ್ ನಲ್ಲಿ ಕೈಬಿಟ್ಟಿದಾರೆ ಎಂದು ನಾವು ಮೂರನೆಯವರು ಹೇಗೆ ಹೇಳೋದು? ಪೊಲೀಸರು ಈ ಬಗ್ಗೆ ತೀರ್ಮಾನ ಮಾಡ್ತಾರೆ ನ್ಯಾಯಾಲಯದ ದಲ್ಲಿ ಈ ಬಗ್ಗೆ ಪ್ರಶ್ನೆ ಮಾಡಬಹುದು. ಪಿಸಿಆರ್ ಹಾಕಿ ಕೋರ್ಟ್ ನಲ್ಲೇ ಕೇಳಬಹುದು. ನಾರ್ಕೊಟಿಕ್ ಕೇಸ್ ನಲ್ಲಿ ಪೊಲೀಸರು ಹೀಗೆ ಪ್ರಭಾವದಿಂದ ಹೆಸರು ಕೈಬಿಡ್ತಾರೆ ಎಂದು ನಾನಂದುಕೊಂಡಿಲ್ಲ.  ಜನ ಏನೇನೋ‌ ಮಾತಾಡ್ತಾರೆ, ಒಬ್ಬೊಬ್ಬರಿಗೆ ಒಂದೊಂದು ರೀತಿ ಅನ್ನಿಸುತ್ತೆ. ಪ್ರಭಾವ ಇರೋದು ಎಂದು ಸುಮ್ಮ ಸುಮ್ಮನೇ ಚಾರ್ಜ್ ಶೀಟ್ ನಲ್ಲಿ ತರೋಕೆ ಆಗಲ್ಲ ಎಂದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

52ರ ಹರೆಯದಲ್ಲೂ 25ರ ತರುಣಿಯಂತೆ ಕಾಣುವ ಐಶ್ವರ್ಯಾ ರೈ.. ಸೌಂದರ್ಯದ ಖನಿ ಅಸಲಿ ರಹಸ್ಯವೇನು?
ತ್ರಿಷಾ ಎಂಗೇಜ್‌ಮೆಂಟ್ ಬ್ರೇಕಪ್ ಮಾಡಿಕೊಂಡ ವ್ಯಕ್ತಿ ಜೊತೆ ಡೇಟಿಂಗ್ ಮಾಡಿದ ನಟಿ.. ಎಲ್ಲರ ಮುಂದೆ ಆಗಿದ್ದೇನು?