ಕಲ್ಕಿ ಸಿನಿಮಾದ ನಟಿ ಬಾಲಿವುಡ್ ಬ್ಯೂಟಿ ದಿಶಾ ಪಟಾನಿಯ ಗೇಣುದ್ದ ಸೊಂಟದ ಮೇಲೆ ಬರೋಬ್ಬರಿ 8 ಸಾಲಿನ ಬರಹವನ್ನು ಬರೆಸಿಕೊಂಡಿದ್ದಾರೆ. ಆದರೆ, ಇದ್ಯಾವ ಭಾಷೆ ಇದರ ಅರ್ಥವೇನು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ನವದೆಹಲಿ (ಜು.08): ನಟ ಪ್ರಭಾಸ್ ಹಾಗೂ ಬಾಲಿವುಡ್ ನಟಿ ದಿಶಾ ಪಟಾನಿ ಸಿನಿಮಾ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ (Kalki 2898 AD) ಬಿಡುಗಡೆಯಾಗಿ ನೂರಾರು ಕೋಟಿ ಬಾಚಿಕೊಂಡಿದೆ. ಆದರೆ, ಈ ಸಿನಿಮಾದಲ್ಲಿ ನಟಿ ದಿಶಾ ಪಟಾನಿಯ (Actress Disha Patan) ಗೇಣುದ್ದ ಸೊಂಟದ ಮೇಲೆ 8 ಸಾಲಿನ ಬರಹ ಬರೆಯಲಾಗಿದೆ. ಆದರೆ, ಈ ಭಾಷೆ ಯಾವುದು, ಅದರ ಅರ್ಥವೇನು? ಎಂಬುದರ ಮಾಹಿತಿ ಇಲ್ಲಿದೆ ನೋಡಿ...
ಬಾಲಿವುಡ್ ಹಾಟ್ ನಟಿ ಹಾಗೂ ಉತ್ತಮ ಮೈಮಾಟವನ್ನು ಹೊಂದಿರುವ ನಟಿಯರ ಪೈಕಿ ದಿಶಾ ಪಟಾನಿ ಪ್ರಮುಖ ಸಾಲಿನಲ್ಲಿದ್ದಾಳೆ. ದಿಶಾ ಪಟಾನಿ ತನ್ನ ಸೌಂದರ್ಯಕ್ಕೆ ತಕ್ಕಂತೆ ತುಂಡುಡುಗೆಗಳನ್ನು ತೊಟ್ಟು ಅಭಿಮಾನಿಗಳ ಮನಸ್ಸಿಗೂ ಮುದ ನೀಡುತ್ತಾಳೆ. ಆದರೆ, ಈಕೆಯ ಮೈಮಾಟ ನೋಡಿದ ಪಡ್ಡೆಗಳು ಮಾತ್ರ ಮನಸ್ಸಿನಲ್ಲಿ ಮಂಡಗೆ ತಿನ್ನುವುದು ಮಾತ್ರ ಗ್ಯಾರಂಟಿ. ಇನ್ನು ಬಾಲಿವುಡ್‌ನ ದೊಡ್ಡ ಬಜೆಟ್ ಸಿನಿಮಾವಾದ 'ಕಲ್ಕಿ 2898 ಎಡಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ ದಿಶಾ ಪಟಾನಿಗೆ ಅಭಿಮಾನಿಗಳ ಸಂಖ್ಯೆಯೂ ಅಧಿಕವಾಗಿದೆ. ಇನ್ನು ಇತ್ತೀಚೆಗೆ ಕೈ ಮೇಲೆ 'ಪಿಡಿ' ಟ್ಯಾಟೂ (ಪ್ರಭಾಸ್ ಮತ್ತು ದಿಶಾ ಪಟಾನಿ) ಹಾಕಿಸಿ ನೆಟ್ಟಿಗರ ಮುಂದೆ ಟ್ರೋಲ್ ಆಗಿದ್ದಳು. ಆದರೆ, ಈಗ ಸೊಂಟದ ಮೇಲಿನ ಬರಹದಿಂದ ಮತ್ತೆ ಮುನ್ನೆಲೆಗೆ ಬಂದಿದ್ದಾಳೆ.
ರಿಲೀಸ್ ಆಯ್ತು, ಈ ವರ್ಷದ ಸೆಕ್ಸಿಯಸ್ಟ್ ಸಾಂಗ್- ವಿಕ್ಕಿ-ತೃಪ್ತಿಯ ಜಲಕ್ರೀಡೆಗೆ ಫ್ಯಾನ್ಸ್ ಕಕ್ಕಾಬಿಕ್ಕಿ
ದೇಶಾದ್ಯಂತ ಕಲ್ಕಿ ಸಿನಿಮಾ ಭರ್ಜರಿ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದು, ಬರೋಬ್ಬರಿ 900 ಕೋಟಿ ರೂ. ಬಾಚಿಕೊಂಡಿದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ರಾಕ್ಸಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆಯುತ್ತಿದ್ದಂತೆಯೇ ದಿಶಾ ಪಟಾನಿ ಶೂಟಿಂಗ್ ವೇಳೆಯ ಕೆಲವು ದೃಶ್ಯಗಳ ಫೋಟೋ ಹಂಚಿಕೊಂಡಿದ್ದಾಳೆ. ಕಲ್ಕಿ ಚಿತ್ರದ ದೊಡ್ಡ ಯಶಸ್ಸಿಗೆ ಅಭಿಮಾನಿಗಳಿಗೆ ದಣ್ಯವಾದ ಹೇಳಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ದಿಶಾ ಪಟಾನಿ ಸೊಂಟದ ಮೇಲಿನ ಬರಹದ ಫೋಟೋ ವೈರಲ್ ಆಗುತ್ತಿದೆ.
ದಿಶಾ ಪಟಾನಿ ರಾಕ್ಸಿ ಗೆಟಪ್ ನಲ್ಲಿರುವ ಫೋಟೋಗಳಲ್ಲಿ ವರ್ಕಿಂಗ್ ಸ್ಟಿಲ್‌ಗಳೂ ಇವೆ. ಅದರ ಒಂದು ಫೋಟೋದಲ್ಲಿ ದಿಶಾ ತನ್ನ ಸೊಂಟದ ಮೇಲಿರುವ ಬರಹವನ್ನು ತೋರಿಸಿದ್ದಾಳೆ. ಈ ಬರಹ ಸುಮಾರು 8 ಸಾಲುಗಳನ್ನು ಹೊಂದಿದ್ದು, ಅನ್ಯ ದೇಶಿ ಭಾಷೆಯಾಗಿದೆ. ಇನ್ನು ನಟಿಯ ಸೊಂಟದ ಮೇಲಿನ ಭಾಷೆ ಯಾವುದು? ಈ ಬರಹದ ಅರ್ಥವೇನು ಎಂದು ನೆಟ್ಟಿಗರು ಹುಡುಕಲು ಮುಂದಾಗಿದ್ದಾರೆ. ಹಲವರು ಈ ಭಾಷೆಯ ಬಗ್ಗೆ ತಮಗೆ ತಿಳಿದ ಅಭಿಪ್ರಾಯವನ್ನು ಕಾಮೆಂಟ್ ಮಾಡುತ್ತಿದ್ದಾರೆ.
ಜೈಲೂಟ ತಿಂದ ನಟ ದರ್ಶನ್‌ಗೆ ವಾಂತಿ ಭೇದಿ; ಭರ್ಜರಿ ತೂಕ ಇಳಿಕೆ
ನಟಿ ದಿಶಾ ಪಟಾನಿ ಸೊಂಟದ ಮೇಲಿನ ಬರಹ ಹೀಬ್ರೂ ಭಾಷೆಯಲ್ಲಿದೆ . ಇದು ಇಸ್ರೇಲ್, ಏಷ್ಯಾ ಮತ್ತು ಆಫ್ರಿಕಾದ ನಡುವಿನ ಕೆಲವು ದೇಶಗಳಲ್ಲಿ ಮಾತನಾಡುವ ಭಾಷೆಯಾಗಿದೆ. ಇದು ಮಧ್ಯಕಾಲೀನ ಯುಗದಲ್ಲಿಯೇ ಅಸ್ತಿತ್ವಕ್ಕೆ ಬಂಬ ಭಾಷೆಯಾಗಿದೆ. ದಿಶಾ ಪಟಾನಿ ಟ್ಯಾಟೂ ವೈರಲ್ ಆಗಲಿದೆ. ಕಲ್ಕಿಗಾಗಿ ದಿಶಾ ಪಟಾನಿ ಈ ತಾತ್ಕಾಲಿಕ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರು ಕೆಲವು ವರ್ಕಿಂಗ್ ಸ್ಟಿಲ್ಸ್ ಮತ್ತು ಪ್ರಭಾಸ್ ಜೊತೆಗಿನ ಸೆಲ್ಸಿ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ದಿಶಾ ಪಟಾನಿ ರಾಕ್ಸಿ ಗೆಟಪ್‌ನಲ್ಲಿ ಅದ್ಭುತವಾಗಿದ್ದಾರೆ ಎಂದು ಚಿತ್ರ ನೋಡಿದಿಂದಲೂ ಪ್ರೇಕ್ಷಕರು ಹೇಳುತ್ತಿದ್ದಾರೆ.
ಇದರ ಅರ್ಥವೇನು ಗೊತ್ತಾ.?
ಯಾರ ಮನಸ್ಸು, ಎಲ್ಲವೂ, ಪಡೆಯಬಹುದು, ಅವನು ಎಲ್ಲಿದ್ದಾನೆಯೋ, ಅಲ್ಲಿಯೇ ನಂಬಿಕೆಯಿಂದ ನೋಡುತ್ತಾನೆ ಎಂದು ಅರ್ಥ ಬರುವಂತೆ ಹಿಬ್ರೂ ಭಾಷೆಯಲ್ಲಿ ಬರೆಯಲಾಗಿದೆ. ಆದರೆ, ಮೇಲಿನ ಮೊದಲು ಸಾಲು ಹಾಗೂ ಕೆಳಗಿನ ಕೊನೆಯ ಸಾಲು ಬಟ್ಟೆಗಳಿಂದ ಮುಚ್ಚಿಕೊಳ್ಳಲಾಗಿದೆ.