10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಅಲ್ಲು ಅರ್ಜುನ್​: ಇನ್ನಾದ್ರೂ ಬುದ್ಧಿ ಕಲೀರಿ ಅಂತ ಉಳಿದವರಿಗೆ ಫ್ಯಾನ್ಸ್​ ಕ್ಲಾಸ್​!

Published : Dec 15, 2023, 05:25 PM IST
10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಅಲ್ಲು ಅರ್ಜುನ್​:  ಇನ್ನಾದ್ರೂ ಬುದ್ಧಿ ಕಲೀರಿ ಅಂತ ಉಳಿದವರಿಗೆ ಫ್ಯಾನ್ಸ್​ ಕ್ಲಾಸ್​!

ಸಾರಾಂಶ

10 ಕೋಟಿ ಆಫರ್​ ರಿಜೆಕ್ಟ್​ ಮಾಡಿದ ಅಲ್ಲು ಅರ್ಜುನ್​:  ಇನ್ನಾದ್ರೂ ಬುದ್ಧಿ ಕಲೀರಿ ಅಂತ ಉಳಿದವರಿಗೆ ಫ್ಯಾನ್ಸ್​ ಕ್ಲಾಸ್​ ತೆಗೆದುಕೊಳ್ತಿದ್ದಾರೆ.  ಆಗಿದ್ದೇನು?  

ಇಂದು ಸಿನಿ ತಾರೆಯರು ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾಹೀರಾತು ಕಂಪೆನಿಗಳ ಬ್ರಾಂಡ್​ ಅಂಬಾಸಿಡರ್​ ಕೂಡ ಆಗಿದ್ದಾರೆ. ಸಿನಿಮಾಗಳಲ್ಲಿ ಬರುವ ದುಡ್ಡಿಗಿಂತ ನಾಲ್ಕೈದು ಪಟ್ಟು ಹೆಚ್ಚು ಹಣವೂ ಇವರಿಗೆ ಅಲ್ಲಿ ಸಿಗುತ್ತದೆ. ಹಾಗೆಂದು ಜೀವಕ್ಕೆ ಹಾನಿ ತರುವ, ವಿಷಕಾರಕ ಎನಿಸಿರುವ, ಕ್ಯಾನ್ಸರ್​ನಂಥ ಮಾರಕ ರೋಗಗಳನ್ನು ತರಬಲ್ಲ ಕೆಲವೊಂದು ಪ್ರಾಡಕ್ಟ್​ಗಳ ಬಗ್ಗೆ ಗೊತ್ತಿದ್ದರೂ ದುಡ್ಡಿನ ಆಸೆಗೋಸ್ಕರ್​ ಆ ಕಂಪೆನಿಗಳ ಜಾಹೀರಾತು ಮಾಡುವಲ್ಲಿ ಬಹುತೇಕ ನಟ ಹಿಂದೆ ಬಿದ್ದಿಲ್ಲ. ಇನ್ನು ಹಲವು ಅಂಧಾಭಿಮಾನಿಗಳಿಗೋ, ಸಿನಿಮಾ ನಾಯಕರೆಂದರೆ ಅವರೇ ಸಾಕ್ಷಾತ್​ ದೇವರು. ಅವರು ಏನು ಮಾಡಿದರೂ ಅದನ್ನು ಪ್ರಸಾದ ಎಂಬಂತೆ ಸ್ವೀಕರಿಸುತ್ತಾರೆ. ಇದರ ಅರಿವಿದ್ದರೂ ನೂರಾರು ಕೋಟಿ ರೂಪಾಯಿಗಳ ಒಡೆಯಲಾಗಿದ್ದರೂ, ಮತ್ತಷ್ಟು ದುಡ್ಡಿನ ಆಸೆಗೆ ಮಾರಕ ಜಾಹೀರಾತುಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇವರಿಗೆಲ್ಲರಿಗೂ ಆದರ್ಶ ಆಗಿದ್ದಾರೆ ನಟ ಅಲ್ಲು ಅರ್ಜುನ್​. 

ಅಲ್ಲು ಅರ್ಜುನ್‌ ಅವರು ಈ ಮೊದಲು ಅಂದರೆ,  ಪುಷ್ಪ-1 ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟ ಬಳಿಕ ಅವರಿಗೆ ಸಹಜವಾಗಿ ಬೇಡಿಕೆ ಹೆಚ್ಚಾಗಿತ್ತು. ಆಗ  ಹಲವು ತಂಬಾಕು ಕಂಪೆನಿಗಳು ಇವರಿಗೆ ಆಫರ್​ ನೀಡಿದ್ದರು.  ಟೆಲಿವಿಷನ್‌ ಕಮರ್ಷಿಯಲ್‌ ಜಾಹೀರಾತುಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡುವ ಆಫರ್‌ಗಳನ್ನು ನೀಡಿತ್ತು. ಆದರೆ ಅದನ್ನು ಅಲ್ಲು ಅರ್ಜುನ್​ ಸಾರಾಸಗಟಾಗಿ ತಿರಸ್ಕರಿಸಿದ್ದರು. ತಮಗೆ ಇಂಥ ಕೆಟ್ಟ ಚಟವಿಲ್ಲ. ಹಾಗಿದ್ದ ಮೇಲೆ ಅದರಲ್ಲಿ ನಾನು ನಟಿಸಲಾರೆ. ನಮ್ಮನ್ನು ಅನುಸರಿಸುವ ಹಲವಾರು ಅಭಿಮಾನಿಗಳಿದ್ದಾರೆ. ಅವರಿಗೆ ನಾನು ಕೆಟ್ಟ ಸಂದೇಶ ನೀಡಲಾರೆ ಎಂದಿದ್ದರು.  ಇದೀಗ ಮತ್ತೆ ಅಂಥದ್ದೇ ಆಫರ್​ ಅವರು ರಿಜೆಕ್ಟ್​ ಮಾಡಿದ್ದಾರೆ ಎಂದು ವರದಿಯಾಗಿದೆ. 

ಅರೆಬರೆ ಬೆತ್ತಲಾದ ರಶ್ಮಿಕಾಗಿಂತ ಪೂರ್ತಿ ನಗ್ನಳಾದ ತೃಪ್ತಿಗೆ ಇಷ್ಟು ಕಮ್ಮಿ ದುಡ್ಡಾ? ಮೋಸ ಅಂತಿದ್ದಾರೆ ಫ್ಯಾನ್ಸ್​

ಇವರ  ಪುಷ್ಪ: ದಿ ರೈಸ್‌-2 ಶೂಟಿಂಗ್​ ನಡೆಯುತ್ತಿದೆ. ಈ ಚಿತ್ರದಲ್ಲಿ ತಮ್ಮ ಕಂಪೆನಿಯ ಪಾನ್​ ಮತ್ತು ಲಿಕ್ಕರ್​ ಹೆಸರು ತೋರಿಸುವಂತೆ ಪ್ರತಿಷ್ಠಿತ  ಲಿಕ್ಕರ್‌ ಮತ್ತು ಪಾನ್‌ ಬ್ರಾಂಡ್‌ ಕಂಪೆನಿಯೊಂದು ಪುಷ್ಪ ಸಿನಿಮಾ ತಯಾರಕರನ್ನು ಸಂಪರ್ಕಿಸಿದೆ. ಈ ಚಿತ್ರದಲ್ಲಿ ತಮ್ಮ ಬ್ರಾಂಡ್‌ ಅಸ್ತಿತ್ವ ತೋರಿಸಲು ಮತ್ತು ಅದಕ್ಕೆ ಪ್ರತಿಯಾಗಿ 10 ಕೋಟಿ ರೂಪಾಯಿ ನೀಡಲು ಮುಂದೆ ಬಂದಿದೆ.  ಸಿನಿಮಾದ ಹೀರೋ ಕುಡಿಯುವ ಸಂದರ್ಭದಲ್ಲಿ, ಸಿಗರೇಟು ಸೇದುವ ಸಂದರ್ಭದಲ್ಲಿ, ಪಾನ್‌ ಮಸಾಲ ಜಗಿಯುವ ಸಂದರ್ಭದಲ್ಲಿ ತಮ್ಮ ಬ್ರಾಂಡ್‌ ಹೆಸರು ಎಲ್ಲಾದರೂ ಕಾಣಿಸುವಂತೆ ಮಾಡಿ ಎನ್ನುವುದು ಅವರ ಬೇಡಿಕೆಯಾಗಿತ್ತು. ಆದರೆ ಸುತರಾಂ ಇದನ್ನು ತಾವು ಮಾಡುವುದೇ ಇಲ್ಲ ಎಂದು 10 ಕೋಟಿ ರೂಪಾಯಿಗಳನ್ನು ಅಲ್ಲು ಅರ್ಜುನ್​ ನಿರಾಕರಿಸಿದ್ದಾರೆ ಎನ್ನಲಾಗಿದೆ. ತಂಬಾಕು, ಆಲ್ಕೋಹಾಲ್‌, ಪಾನ್‌ ಮಸಾಲ ಇತ್ಯಾದಿಗಳ ಪ್ರಮೋಷನ್‌ನಲ್ಲಿ ಭಾಗಿಯಾಗುವುದಿಲ್ಲ. ನನಗೆ ದಯವಿಟ್ಟು ಇದಕ್ಕೆ ಫೋರ್ಸ್​ ಮಾಡಬೇಡಿ ಎಂದಿದ್ದಾರೆ ಎಂದು  ಗುಲ್ಟೆ ಮೀಡಿಯಾ ವರದಿ ಮಾಡಿದೆ.  
 
ಕೆಲ ದಿನಗಳ ಹಿಂದೆ ಗುಟ್ಕಾ ಪಾನ್​ ಮಸಾಲಾ ಜಾಹೀರಾತಿನಿಂದ ಅಕ್ಷಯ್​ ಕುಮಾರ್​ ಹೊರಕ್ಕೆ ಬಂದಿದ್ದರು. ಆದರೆ ಕೋಟ್ಯಂತರ ಅಭಿಮಾನಿಗಳಿಂದ ದೇವರು ಎನಿಸಿಕೊಳ್ತಿರೋ ಶಾರುಖ್​ ಖಾನ್​ ಮತ್ತು ಅಜಯ್​ ದೇವಗನ್​ ಇನ್ನೂ ಈ ಜಾಹೀರಾತಿನಲ್ಲಿ ಮುಂದುವರೆದಿದ್ದು, ಅವರಿಗೆ ಹೈಕೋರ್ಟ್​ ನೋಟಿಸ್​ ನೀಡಿರುವುದು ಇಲ್ಲಿ ಉಲ್ಲೇಖಾರ್ಹ. ಇದಷ್ಟೇ ಅಲ್ಲದೇ, ವಿಷಕಾರಕ ಪಾನೀಯ ಸೇರಿದಂತೆ ಹಲವು ವಿದೇಶಿ ಬ್ರ್ಯಾಂಡ್​​ಗಳಲ್ಲಿ ಸಿನಿಮಾ ನಟರು ಮಾತ್ರವಲ್ಲದೇ ದುಡ್ಡಿನ ಆಸೆಗಾಗಿ ಕ್ರಿಕೆಟ್​ ತಾರೆಯರೂ ಅಂಬಾಸಿಡರ್​ ಆಗುವುದು ಹೊಸ ವಿಷಯವೇನಲ್ಲ. 

ಮೂರು ಪತ್ನಿಯರ ಮೇಲೆ ಕ್ರೌರ್ಯ ಮೆರೆದಿದ್ದು ತಪ್ಪಲ್ಲ: ಅಬ್ರಾರ್​ ಹಖ್ ರೊಮ್ಯಾಂಟಿಕ್​ ವ್ಯಕ್ತಿ ಎಂದ ಬಾಬಿ ಡಿಯೋಲ್​!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?