ಅಲ್ಲು ಅರ್ಜುನ್ 'ಪುಷ್ಪ-2' ಹೇರ್ ಸ್ಟೈಲ್ ವೈರಲ್ ಆಗಿದೆ. ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ನೋಡಿ ಅಭಿಮಾನಿಗಳು 'ತಗ್ಗೋದೇ ಇಲ್ಲ' ಎಂದು ಹೇಳಿದ್ದಾರೆ.
ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. ಪಾರ್ಟ್ 1 ಸೂಪರ್ ಸಕ್ಸಸ್ ಬಳಿಕ ಪುಷ್ಪ-2 ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ. ಮೊದಲ ಭಾಗ ರಿಲೀಸ್ ಆಗಿ ಒಂದು ವರ್ಷದ ಬಳಿಕ ಪಾರ್ಟ್-2 ಚಿತ್ರೀಕರಣ ಪ್ರಾರಂಭ ಮಾಡಲಾಗಿದೆ. ನಿರೀಕ್ಷೆ ಹೆಚ್ಚಿದ್ದ ಕಾರಣ ಒಂದಿಷ್ಟು ಬದಲಾವಣೆಯೊಂದಿಗೆ ಪುಷ್ಪ-2 ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ ನಿರ್ದೇಶಕ ಸುಕುಮಾರ್. ಪುಷ್ಪ-2 ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಪಾರ್ಟ್ -2ನಲ್ಲಿ ಅವರು ನಟಿಸುತ್ತಾರೆ, ಇವರು ನಟಿಸುತ್ತಾರೆ ಎನ್ನುವ ಸುದ್ದಿ ಕೇಳಿ ಬರುತ್ತಲೇ ಇದೆ. ಆದರೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಈ ನಡುವೆ ಅಲ್ಲು ಅರ್ಜುನ್ ಹೇರ್ ಸ್ಟೈಲ್ ವೈರಲ್ ಆಗಿದೆ.
ಮುಂಬೈ ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಹೊಸ ಹೇರ್ ಸ್ಟೈಲ್ ನಲ್ಲಿ ದರ್ಶನ ನೀಡಿದ್ದಾರೆ. ಸ್ಟೈಲಿಸ್ ಸ್ಟಾರ್ ಹೊಸ ಅವತಾರ ನೋಡುತ್ತಿದ್ದಂತೆ ಅಭಿಮಾನಿಗಳು ಇದು ಪಕ್ಕ ಪುಷ್ಪ-2 ಹೇರ್ ಸ್ಟೈಲ್ ಎಂದು ಹೇಳುತ್ತಿದ್ದಾರೆ. ಗೋಲ್ಡನ್ ಕಲರ್ ಹೈಲೈಟ್ ಮಾಡಿಸಿರುವ ಅಲ್ಲು ಅರ್ಜುನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಮುಂದೆ ಶಾರ್ಟ್ ಹೇರ್ ಇದ್ದು ಹಿಂದೆ ಲಾಂಗ್ ಹೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಪ್ಯಾಂಟ್ ಮತ್ತು ಕಪ್ಪು-ಬಿಳಿಯ ಶರ್ಟ್ ಧರಿಸಿದ್ದರು. ಅಲ್ಲು ಅರ್ಜುನ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ಚಿತ್ರೀಕರಣ
ಪುಷ್ಪ-2 ಮುಂದಿನ ಶೆಡ್ಯೂಲ್ ಬೆಂಗಳೂರಿನಿಂದ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿನಿಮಾತಂಡ ಪ್ಲಾನ್ ಮಾಡಿದ್ದು ಸದ್ಯದಲ್ಲೇ ಇಡೀ ತಂಡ ಬೆಂಗಳೂರಿಗೆ ಆಗಮಿಸಲಿದೆ ಎನ್ನಲಾಗಿದೆ. ಅಂದಹಾಗೆ ಪುಷ್ಪ-2ನಲ್ಲಿ ದೊಡ್ಡ ತಾರಾಬಳಗವೇ ಇದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ಪಾರ್ಟ್-2ನಲ್ಲಿ ಅಬ್ಬರಿಸಲಿದ್ದಾರೆ. ಇನ್ನೂ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಎಂದರೆ ಸೌತ್ ಸ್ಟಾರ್ ಸಾಯಿ ಪಲ್ಲವಿ ಕೂಡ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಮುಂದುವರೆಯಲಿದ್ದಾರೆ.
ಕಣ್ಣು ಮಿಟುಕಿಸದೆ ಮಗಳ ಯೋಗಾಭ್ಯಾಸ ನೋಡುತ್ತಾ ಕುಳಿತ ಅಲ್ಲು ಅರ್ಜುನ್; ಫೋಟೋ ವೈರಲ್
ಬೆಂಗಳೂರಿನ ಶೆಡ್ಯೂಲ್ ನಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಕಾಣಿಸಿಕೊಳ್ಳಲಿದ್ದು ಇಬ್ಬರೂ ಸ್ಟಾರ್ ಪ್ರಮುಖ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಚಿತ್ರತಂಡ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಅಂದಹಾಗೆ ಫಹಾದ್ ಫಾಸಿಲ್ ಈಗಾಗಲೇ ಬೆಂಗಳೂರಿನಲ್ಲಿದ್ದು ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ
ಸುಕುಮಾರ್ ಬರೆದು ನಿರ್ದೇಶನ ಮಾಡುತ್ತಿರುವ ಪುಷ್ಪ: ದಿ ರೂಲ್ ಸಿನಿಮಾದಲ್ಲಿ ಅಲ್ಲು ಅರ್ಜುನ್, ಫಹದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಳ್ಳುತ್ತಿದ್ದಾರೆ. ಅಂದುಕೊಂಡಂತೆ ಈ ಸಿನಿಮಾದ ಚಿತ್ರೀಕರಣ ನಡೆದು ಮುಕ್ತಾಯವಾದರೇ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ.