
ಬಾಲಿವುಡ್ ನಟ ಅಕ್ಷಯ್ ಖನ್ನಾ ಅಭಿನಯದ 'ಧುರಂಧರ್' ಚಿತ್ರದ 'ರೆಹಮಾನ್ ಡಕಾಯಿತ'ನ ಪಾತ್ರ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ವಿಶೇಷವಾಗಿ ಚಿತ್ರದ 'Fa9la' ಸೀಕ್ವೆನ್ಸ್ ಮತ್ತು ಅಕ್ಷಯ್ ಅವರ ಖದರ್ ಅಭಿಮಾನಿಗಳಿಗೆ ಹೊಸ ಕಿಕ್ ನೀಡಿದೆ. ಆದರೆ, ಈ ಐಕಾನಿಕ್ ಲುಕ್ ಸಿದ್ಧವಾಗುವ ಹಿಂದೆ ದೊಡ್ಡ ಕಸರತ್ತೇ ನಡೆದಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಸ್ಮೃತಿ ಚೌಹಾಣ್ ಪ್ರಕಾರ, ಅಕ್ಷಯ್ ಖನ್ನಾ ಅವರಿಗಾಗಿ ಮೊದಲು ಅತ್ಯಂತ ಸರಳವಾದ ಪಠಾಣಿ ಸೂಟ್ ಅನ್ನು ಯೋಜಿಸಲಾಗಿತ್ತು. ಆದರೆ, ಈ ಲುಕ್‌ನಲ್ಲಿ ಏನೋ ಒಂದು ಕೊರತೆ ಇದೆ ಎಂದು ಅಕ್ಷಯ್ ಅವರಿಗೆ ಅನ್ನಿಸಿತ್ತು. ಸ್ವತಃ ಅಕ್ಷಯ್ ಅವರೇ ಕೆಲವು ಇನ್‌ಪುಟ್‌ಗಳನ್ನು ನೀಡಿ, ಪಾತ್ರದ ಗಾಂಭೀರ್ಯ ಹೆಚ್ಚಿಸಲು ಸಲಹೆ ನೀಡಿದರು. ಈ ಒಂದು ಸಲಹೆಯು ಪಾತ್ರದ ಕಾಸ್ಟ್ಯೂಮ್ ವಿನ್ಯಾಸವನ್ನೇ ಸಂಪೂರ್ಣವಾಗಿ ಬದಲಿಸಿತು.
ಮೊದಲ ಲುಕ್ ಟೆಸ್ಟ್ ಆದ ನಂತರವೂ ಅಕ್ಷಯ್ ಅವರಿಗೆ ಸಮಾಧಾನವಿರಲಿಲ್ಲ. ರೆಹಮಾನ್ ಡಕಾಯಿತ ಬೀದಿಯಿಂದ ಬಂದವನಾಗಿದ್ದರಿಂದ, ಆತನ ಉಡುಪಿನಲ್ಲಿ ಒಂದು ರೀತಿಯ ಒರಟುತನ (Roughness) ಇರಬೇಕು ಎಂಬುದು ಅವರ ಹಠವಾಗಿತ್ತು. ಹೀಗಾಗಿ ಕಥೆಯ ಆರಂಭದಲ್ಲಿ ಡೆನಿಮ್ ಮತ್ತು ಲಿನಿನ್ ಬಟ್ಟೆಗಳನ್ನು ಬಳಸಲಾಯಿತು. ನಂತರದ ಭಾಗದಲ್ಲಿ ಆತ ರಾಜಕೀಯ ಪ್ರವೇಶಿಸಿದಾಗ, ಆತನ ಶ್ರೀಮಂತಿಕೆಯನ್ನು ತೋರಿಸಲು 'ಸಿಲ್ಕ್-ವೂಲ್' ಪಠಾಣಿ ಸೂಟ್ ಅನ್ನು ಬಳಸುವ ಮೂಲಕ ಪಾತ್ರದ ಪಯಣವನ್ನು ಬಟ್ಟೆಗಳ ಮೂಲಕವೇ ವಿವರಿಸಲಾಯಿತು.
ವೈರಲ್ ಆಯ್ತು 'Fa9la' ಹಾಡು ಮತ್ತು ಬ್ಲ್ಯಾಕ್ ಲುಕ್
ಚಿತ್ರದ ಅತ್ಯಂತ ಜನಪ್ರಿಯ ದೃಶ್ಯಗಳಲ್ಲಿ 'Fa9la' ಹಾಡಿಗೆ ರೆಹಮಾನ್ ಹೆಜ್ಜೆ ಹಾಕುವುದು ಒಂದು. ಇಲ್ಲಿ ಮೊದಲು ಎಲ್ಲರಿಗೂ ಕಪ್ಪು ಬಟ್ಟೆ ನೀಡುವ ಪ್ಲಾನ್ ಇತ್ತು. ಆದರೆ ನಿರ್ದೇಶಕ ಆದಿತ್ಯ ಧರ್ ಅವರು ಬಲೂಚಿಗಳ ಮೂಲ ಸಂಸ್ಕೃತಿಯಾದ 'ಬಿಳಿ ಬಣ್ಣ'ವನ್ನೇ ಡ್ಯಾನ್ಸರ್‌ಗಳಿಗೆ ಬಳಸಲು ಸೂಚಿಸಿದರು. ಇದರಿಂದಾಗಿ ನೂರಾರು ಬಿಳಿ ಬಟ್ಟೆಯ ಡ್ಯಾನ್ಸರ್‌ಗಳ ನಡುವೆ ಅಕ್ಷಯ್ ಖನ್ನಾ ಅವರು ಮಾತ್ರ 'ಕಪ್ಪು ಬಲೂಚಿ ಪಠಾಣಿ' ಡ್ರೆಸ್‌ನಲ್ಲಿ ಸಿಂಹದಂತೆ ಎದ್ದು ಕಾಣುವಂತಾಯಿತು.
ನಿರ್ದೇಶಕ ಆದಿತ್ಯ ಧರ್ ಅವರ ಸ್ಪಷ್ಟ ದೃಷ್ಟಿಕೋನ
ರೆಹಮಾನ್ ಡಕಾಯಿತ ಪರದೆಯ ಮೇಲೆ ಎಂಟ್ರಿ ಕೊಟ್ಟಾಗ ಪ್ರೇಕ್ಷಕರು ಎದ್ದು ನಿಂತು ನೋಡಬೇಕು ಎಂಬುದು ನಿರ್ದೇಶಕ ಆದಿತ್ಯ ಧರ್ ಅವರ ಕನಸಾಗಿತ್ತು. ಅದಕ್ಕಾಗಿ ಅವರು ಪ್ರತಿಯೊಂದು ಸಣ್ಣ ವಿಷಯದಲ್ಲೂ ತೊಡಗಿಸಿಕೊಂಡಿದ್ದರು. ಅಕ್ಷಯ್ ಖನ್ನಾ ಅವರಿಗೆ 'ಶೇರ್-ಎ-ಬಲೂಚ್' ಎಂಬ ಬಿರುದಿರುವುದಕ್ಕೆ ತಕ್ಕಂತೆ ಅವರನ್ನು ಎಲ್ಲರಿಗಿಂತ ಭಿನ್ನವಾಗಿ ತೋರಿಸುವಲ್ಲಿ ತಂಡ ಯಶಸ್ವಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳೇ ಇದಕ್ಕೆ ಸಾಕ್ಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.