ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ಜೂನ್ 3ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶೇಷ ಅಂದರೆ ಅದೇ ದಿನ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಕೂಡ ರಿಲೀಸ್ ಆಗಿದೆ. ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರತ್ತಿವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಬಾಕ್ಸ ಆಫೀಸ್‌ನಲ್ಲಿ ಯಾವ ಸಿನಿಮಾ ಮೋಡಿ ಮಾಡಲಿದೆ ಎಂದು ಕಾತರರಾಗಿದ್ದರು.
ದಕ್ಷಿಣ ಭಾರತದ ಸಿನಿಮಾಗಳು ದೇಶ, ವಿದೇಶಗಳಲ್ಲಿ ರಾರಾಜಿಸುತ್ತಿವೆ. ಸೌತ್ ಸ್ಟಾರ್‌ಗಳ ಅಬ್ಬರಕ್ಕೆ ಬಾಲಿವುಡ್ ಮಂಕಾಗಿದೆ. ಹಿಂದಿ ಸಿನಿಮಾಗಳು ಸರಣಿ ಸೋಲಿನ ಸುಳಿಯಲ್ಲಿ ಸಿಲುಕಿವೆ. ಇತ್ತೀಚಿಗೆ ರಿಲೀಸ್ ಆದ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಬಿಟ್ಟರೆ ಬೇರೆಲ್ಲ ಸಿನಿಮಾಗಳು ನೆಲಕಚ್ಚಿವೆ. ಬಾಲಿವುಡ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದರೆ ದಕ್ಷಿಣ ಭಾರತದ ಚಿತ್ರಗಳು ದೇಶದಾದ್ಯಂತ ಅಬ್ಬರಿಸುತ್ತಿವೆ.
ತೆಲುಗಿನ ಪುಷ್ಪ, ಆರ್ ಆರ್ ಆರ್, ಕನ್ನಡದ ಕೆಜಿಎಫ್ 2 ಸಿನಿಮಾ ಬಳಿಕ ಇದೀಗ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿದೆ. ಅಂದಹಾಗೆ ಕಮಲ್ ಹಾಸನ್ ನಟನೆಯ ಬಹುನಿರೀಕ್ಷೆಯ ವಿಕ್ರಮ್ ಸಿನಿಮಾ ಜೂನ್ 3ರಂದು ಅದ್ದೂರಿಯಾಗಿ ತೆರೆಗೆ ಬಂದಿದೆ. ವಿಶೇಷ ಅಂದರೆ ಅದೇ ದಿನ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್(Akshay Kumar) ನಟನೆಯ ಸಾಮ್ರಾಟ್ ಪೃಥ್ವಿರಾಜ್(Samrat Prithviraj) ಸಿನಿಮಾ ಕೂಡ ರಿಲೀಸ್ ಆಗಿದೆ. ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರತ್ತಿವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಬಾಕ್ಸ ಆಫೀಸ್‌ನಲ್ಲಿ ಯಾವ ಸಿನಿಮಾ ಮೋಡಿ ಮಾಡಲಿದೆ ಎಂದು ಕಾತರರಾಗಿದ್ದರು.
ಇದೀಗ ಕಮಲ್ ಮತ್ತು ಅಕ್ಷಯ್ ನಟನೆಯ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಬಹಿರಂಗವಾಗಿದೆ. ಇದರಲ್ಲಿ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್ ಸಿನಿಮಾ ನಿಧಾನಗತಿಯಲ್ಲಿ ಸಾಗುವ ಮೂಲಕ ಮತ್ತೆ ಸೌತ್ ಸಿನಿಮಾಗಳ ಮುಂದೆ ಮಂಡಿಯೂರುವಂತಾಗಿದೆ. ಹೌದು, ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಸಮ್ರಾಟ್ ಪೃಥ್ವಿರಾಜ್ ಸಿನಿಮಾ ಮೊದಲ 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್ ರಾಜ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮಿಂಚಿದ್ದರು. ಮಾನುಷಿಗೆ ಇದು ಮೊದಲ ಸಿನಿಮಾ. ಇನ್ನು ಈ ಸಿನಿಮಾದಲ್ಲಿ ಸಂಜಯ್ ದತ್, ಸೋನು ಸೇರಿದಂತೆ ಅನೇಕ ಕಲಾವಿದರು ಮಿಂಚಿದ್ದಾರೆ.
Vikram Twitter Review;ಕಮಲ್ ಹಾಸನ್ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದನು?
ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ನೀಡಿದ ಪ್ರಕಾರ ಸಮ್ರಾಟ್ ಪೃಥ್ವಿರಾಜ್ ಸಿನಿಮಾ ಮೊದಲ ದಿನ 11 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದಿದ್ದಾರೆ. ಪೃಥ್ವಿರಾಜ್ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಇಡಲಾಗಿತ್ತು. ಈ ಸಿನಿಮಾ ಬಾಲಿವುಡ್‌ಅನ್ನು ಸರಣಿ ಸೋಲಿನಿಂದ ಪಾರು ಮಾಡಲಿದೆ ಎಂದು ಹಿಂದಿ ಮಂದಿ ಭಾವಿಸಿದ್ದರು. ಆದರೀಗ ಕಲೆಕ್ಷನ್ ನೋಡಿದರೆ ಬಾಲಿವುಡ್ ಲೆಕ್ಕಾಚಾರ ಉಲ್ಟ ಆಗುವ ಸಾಧ್ಯತೆ ಇದೆ.
All-India Nett Day 1 early estimates around 11 Crs..
— Ramesh Bala (@rameshlaus)ಕಮಲ್ ಹಾಸನ್ ವಿಕ್ರಮ್ ಸಿನಿಮಾ
ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ಮೊದಲ ದಿನ ಬರೋಬ್ಬರಿ 34 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ. ತಮಿಳುನಾಡು ಒಂದರಲ್ಲೇ ಸಿನಿಮಾ 30 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಕಮಲ್ ಹಾಸನ್ ವಿಕ್ರಮ್ ಸಿನಿಮಾ ಸದ್ಯದಲ್ಲೇ 100 ಕೋಟಿ ಕ್ಲಬ್ ಸೇರಲಿದೆ ಎಂದಿದ್ದಾರೆ. ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ.
Samrat Prithviraj Twitter Review; ಅಕ್ಷಯ್ ಕುಮಾರ್ ಸಿನಿಮಾಗೆ ಫ್ಯಾನ್ಸ್ ಫಿದಾ
ಅಂದಹಾಗೆ ಈ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ದಕ್ಷಿಣ ಭಾರತದ ಮತ್ತಿಬ್ಬರು ಖ್ಯಾತ ಕಲಾವಿದರಾದ ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಕೂಡ ಮಿಂಚಿದ್ದಾರೆ. ಮೂವರು ಕಲಾವಿದರನ್ನು ಒಂದೇ ಸಿನಿಮಾದಲ್ಲಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನು ತಮಿಳು ನಟ ಸೂರ್ಯ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೌತ್ ಮತ್ತು ಬಾಲಿವುಡ್ ಸಿನಿಮಾಗಳ ಪೈಪೂಟಿಯಲ್ಲಿ ಹಿಂದಿ ಸಿನಿಮಾ ಮತ್ತೆ ಮಂಕಾಗಿರುವುದು ಹಿಂದಿ ಮಂದಿಗೆ ಆಘಾತ ತಂದಿದೆ.