
ರಾಘವ ಲಾರೆನ್ಸ್ ನಿರ್ದೇಶನದ ಲಕ್ಷ್ಮೀ ಬಾಂಬ್ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ಟ್ರೈಲರ್ ಆನ್‌ಲೈನ್‌ನಿಂದ ತೆಗೆದಿದ್ದು, ಕೆಲವು ಹಾಸ್ಯಕರ ಮತ್ತು ಭಯಾನಕ ದೃಶ್ಯಗಳಿಂದ ಜನರನ್ನು ಮೆಚ್ಚಿಸುವಲ್ಲಿ ಸಫಲವಾಗಿದೆ.
ನಟ ಅಕ್ಷಯ್ ಕುಮಾರ್ ಅವರ ತೃತೀಯಲಿಂಗಿ ಪಾತ್ರ ಈಗಲೂ ಬಹಳಷ್ಟು ಜನಕ್ಕೆ ಸ್ವಾರಸ್ಯಕರವಾಗಿಯೇ ಕಂಡುಬಂದಿದೆ. ಸಿನಿಮಾ ನಿರ್ದೇಶಕ ರಾಘವ ಲಾರೆನ್ಸ್ ಸಿನಿಮಾದ ಸೆನ್ಸಾರ್ ಸರ್ಟಿಫೀಕೇಟ್ ಪಡೆಯಲು ತೆರಳಿದ್ದು, ಸಿನಿಮಾ ರಿಲೀಸ್‌ಗೂ ಮುನ್ನ ಚಿತ್ರತಂಡ ಸಿಬಿಎಫ್‌ಸಿ ಜೊತೆ ಚರ್ಚೆ ನಡೆಸಿದೆ.
ಅಕ್ಷಯ್ ಅಭಿನಯದ ಲಕ್ಷ್ಮೀ ಬಾಂಬ್ ತಂಡಕ್ಕೆ ನೋಟಿಸ್: ಸಿನಿಮಾ ಹೆಸರು ಬದಲಾವಣೆಗೆ ಒತ್ತಾಯ
ಪ್ರೇಕ್ಷಕರ ಭಾವನೆಗಳನ್ನು ಗೌರವಿಸಿ ಸಿನಿಮಾ ನಿರ್ಮಾಪಕರಾದ ಶಬಿನಾ ಖಾನ್, ತುಷಾರ್ ಕಪೂರ್ ಹಾಗೂ ಅಕ್ಷಯ್ ಕುಮಾರ್ ಸಿನಿಮಾದ ಟೈಟಲ್ ಬದಲಾಯಿಸಲು ನಿರ್ಧರಿಸಿದ್ದಾರೆ
ಅಕ್ಷಯ್ ಕುಮಾರ್ ಅಭಿನಯದ ಕಾಮೆಡಿ ಹಾರರ್ ಸಿನಿಮಾಗೆ ಈಗ ಲಕ್ಷ್ಮೀ ಬಾಂಬ್ ಬದಲು ಲಕ್ಷ್ಮಿ ಎಂದು ಹೆಸರಿಡಲಾಗಿದೆ. ಸಿನಿಮಾ ನವೆಂಬರ್ 09ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್ ಅಗಲಿದೆ. ಸಿನಿಮಾವನ್ನು ಕೇಪ್ ಆಫ್ ಗುಡ್ ಹೋಪ್ಸ್ ಫಿಲ್ಮ್ಸ್, ತುಷಾರ್ ಎಂಟರ್ಟೈನ್‌ಮೆಂಟ್ ಹೌಸ್, ಹಾಗೂ ಶಬಿನಾ ಎಂಟರ್ಟೈನ್‌ಮೆಂಟ್ ನಿರ್ಮಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.