ಪತ್ನಿಯನ್ನು ಹಗ್ ಮಾಡಿ ಚುಂಬಿಸಿದ ತಲಾ ಅಜಿತ್ ರೊಮ್ಯಾಂಟಿಕ್ ಫೋಟೋ ವೈರಲ್

Published : Mar 22, 2022, 04:04 PM IST
 ಪತ್ನಿಯನ್ನು ಹಗ್ ಮಾಡಿ ಚುಂಬಿಸಿದ ತಲಾ ಅಜಿತ್ ರೊಮ್ಯಾಂಟಿಕ್ ಫೋಟೋ ವೈರಲ್

ಸಾರಾಂಶ

ತಮಿಳು ನಟ ಅಜಿತ್ ಪತ್ನಿ ಶಾಲಿನಿಯನ್ನು ತಬ್ಬಿಕೊಂಡು ಮುತ್ತಿಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜಿತ್ ದಂಪತಿಯ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಜೋಡಿಗಳಲ್ಲಿ ತಲಾ ಅಜಿತ್ ಮತ್ತು ಶಾಲಿನಿ(Ajith Kumar-Shalini) ದಂಪತಿ ಜೋಡಿಯು ಒಂದು. ಕಾಲಿವುಡ್ ನ ಈ ಮುದ್ದಾದ ಜೋಡಿ ಅನೇಕರಿಗೆ ಮಾದರಿ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್, ಅಭಿನಯನದ ಹೊರತಾಗಿಯೂ ಅನೇಕರಿಗೆ ಮಾದರಿ. ಈ ಸ್ಟಾರ್ ದಂಪತಿ ಸಾಮಾಜಿಕ ಜಾಲತಾಣದಿಂದ ತುಂಬಾ ದೂರ ಇದ್ದರೂ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ. ಅಜಿತ್ ಫೋಟೋಗಳು ವೈರಲ್ ಆಗುತ್ತವೆ ಇರತ್ತದೆ.

ಇದೀಗ ಅಜಿತ್ ಅವರ ರೊಮ್ಯಾಂಟಿಕ್ ಫೋಟೋವೊಂದು(romantic photo) ಅಭಿಮಾನಿಗಳ ಹೃದಯ ಗೆದ್ದಿದೆ. ಅಜಿತ್ ಪತ್ನಿ ಶಾಲಿನಿ ಸಾರ್ವಜನಿಕವಾಗಿ ಅಷ್ಟು ಕಾಣಿಸಿಕೊಳ್ಳುವುದಿಲ್ಲ. ಸದಾ ಕ್ಯಾಮರಾ ಹಿಂದೆ ಇರುವ ಶಾಲಿನಿ ಇದೀಗ ಅಜಿತ್ ಜೊತೆ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಫೋಟೋ ವೈರಲ್ ಆಗಿರುವುದು ಅಭಿಮಾನಿಗಳಿಗೆ ಅಪರೂಪ ಎನಿಸಿದೆ.

ಫೋಟೋದಲ್ಲಿ ಅಜಿತ್ ಪತ್ನಿ ಶಾಲಿಯನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಡುತ್ತಿದ್ದಾರೆ. ಪತ್ನಿ ಜೊತ ಪ್ರೀತಿ ಮೂಡ್ ನಲ್ಲಿರುವ ಅಜಿತ್ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಸಾರ್ವಜನಿಕವಾಗಿ ಇಬ್ಬರು ಇಷ್ಟು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ಹಾಗಾಗಿ ಅಭಿಮಾನಿಗಳಿಗೆ ಅಜಿತ್ ದಂಪತಿಯ ಈ ಫೋಟೋ ಅಚ್ಚರಿ ಮೂಡಿಸಿದೆ. ತಲಾ ದಂಪತಿಯನ್ನು ಅಭಿಮಾನಿಗಳು ಇದು ಪ್ಯೂರ್ ಕಪಲ್ ಗೋಲ್ ಎಂದು ಕರೆಯುತ್ತಿದ್ದಾರೆ.

Valimai Movie: ಅಜಿತ್ ಬಗ್ಗೆ ಸ್ಪೆಷಲ್ ಮಾಹಿತಿಯನ್ನು ಹಂಚಿಕೊಂಡ ಹುಮಾ ಖುರೇಷಿ ಹಾಗೂ ಕಾರ್ತೀಕೆಯ!

ಅಂದಹಾಗೆ ಈ ಫೋಟೋವನ್ನು ಅಜಿತ್ ಪತ್ನಿಯ ಶಾಲಿನಿ ಸಹೋದರಿ ಹಂಚಿಕೊಂಡಿದ್ದಾರೆ. ಅಂದಹಾಗೆ ಅಜಿತ್ ದಂಪತಿ ಏಪ್ರಿಲ್ 24ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಸಂಭ್ರಮ ಕ್ಷಣಗಳ ಫೋಟೋ ಎಂದು ಹೇಳಲಾಗುತ್ತಿದೆ. ಅಂದಹಾಗೆ ಅಜಿತ್ ಮತ್ತು ಶಾಲಿನಿ ಇಭ್ಬರು 2000ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇವರದ್ದು ಪ್ರೇಮ ವಿವಾಹ. ಇವರ ಪ್ರೀತಿಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಕೇರಳ ಮೂಲದ ನಟಿ ಶಾಲಿನಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇಬ್ಬರ ಪ್ರೀತಿ ಪ್ರಾರಂಭವಾಗಿದ್ದು 'ಅಮರ್ಕಳಂ' ಚಿತ್ರದ ಚಿತ್ರೀಕರಣ ವೆಳೆ.

Ajith Kumar: ನನ್ನ ತಲ ಅಂತ ಕರೀಬೇಡಿ, AK ಅನ್ನಿ ಸಾಕು ಎಂದ ಸೌತ್ ನಟ

'ಅಮರ್ಕಳಂ' ಬಿಡುಗಡೆಯ ಬಳಿಕ ಈ ಜೋಡಿ ಪರಸ್ಪರ ಪ್ರೀತಿಸುತ್ತಿರುವುದನ್ನು ಹೇಳಿಕೊಂಡರು. 2000ರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿರಿಸಿದರು. ಮದುವೆ ನಂತರ ಶಾಲಿನಿ ನಟನೆಗೆ ಗುಡ್ ಬೈ ಹೇಳಿದರು. 22 ವರ್ಷಗಳ ಸಂತೋಷದ ಸಾಂಸಾರಿಕ ಜೀವನ ಇವರದ್ದಾಗಿದೆ. ಅಜಿತ್ ಮತ್ತು ಶಾಲಿನಿ ನಡುವಿನ ಪ್ರೀತಿ-ಬಾಂಧವ್ಯ ಕೊಂಚವು ಕಡಿಮೆ ಆಗಿಲ್ಲ.

ಅಜಿತ್ ಸಿನಿಮಾ ವಿಚಾರಕ್ಕೆ ಬರುವುದಾದರೆ ವಲಿಮೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಈ ಸಿನಿಮಾ ಮಾರ್ಚ್ 25ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಝೀ5 ಒಟಿಟಿಯಲ್ಲಿ ಬರ್ತಿದೆ. ಚಿತ್ರಕ್ಕೆ ನಿರೀಕ್ಷೆಯ ಫಲ ಸಿಕ್ಕಿಲ್ಲ. ಬೋನಿ ಕಪೂರ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಸದ್ಯ ಅಜಿತ್ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?