ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ; ನಿಸಾ ದೇವಗನ್ ವಿಡಿಯೋ ವೈರಲ್

By Suvarna NewsFirst Published Apr 24, 2023, 11:53 AM IST
Highlights

ಕಾರಿಂದ ಇಳಿಯುವಾಗ ಜಾರಿ ಭದ್ರತಾ ಸಿಬ್ಬಂದಿ ಮೇಲೆ ಬಿದ್ದ ಕಾಜಲ್ ಪುತ್ರಿ ನಿಸಾ ದೇವಗನ್ ವಿಡಿಯೋ ವೈರಲ್ ಆಗಿದೆ.

ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿ ನಿಸಾ ದೇವಗನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ನಿಸಾ ಅದ್ದೂರಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಭಾನುವಾರ ತನ್ನ ಗೆಳೆಯರಿಗೆ ನಿಸಾ ಪಾರ್ಟಿ ಆಯೋಜಿಸಿದ್ದರು. ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಬಾರ್‌ನಲ್ಲಿ ಅದ್ದೂರಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಪಾರ್ಟಿಗೆ ಆಮಿಸಿದ ನಿಸಾ ಅವರನ್ನು ಪಾಪರಾಜಿಗಳು ಮುತ್ತಿಕೊಂಡರು. ಕಾರಿನಿಂದ ಇಳಿಯಾವಾಗ ನಿಸಾ ಜಾರಿದ್ದಾರೆ. ಕೆಳಗೆ ಬೀಳುವುದರಲ್ಲಿದ್ದ ನಿಜಾ ಜಾರಿ ಮುಂದೆ ನಿಂತಿದ್ದ ಭದ್ರತಾ ಸಿಬ್ಬಂದಿಗೆ ಹೋಗಿ ಡಿಕ್ಕಿ ಹೊಡೆದರು. 

ಪಾರ್ಟಿಗೆ ಖುಷಿಯಿಂದನೇ ಬಂದ ನಿಸಾ ರೋಮಾಂಚನಗೊಂಡರು. ಬಳಿಕ ಕಾರಿನಿಂದ ಜಿಗಿದರು. ಆಗ ಕಾಲು ಜಾರಿ ಭದ್ರತಾ ಸಿಬ್ಬಂದಿಯನ್ನು ತಳ್ಳಿ ಮುಂದೆ ನಿಂತರು. ಕೇಳಗೆ  ಬೀಳುತ್ತಿದ್ದ ನಿಶಾ ಸ್ವಲ್ಪದರಲ್ಲೇ ಪಾರಾದರು. ಬಳಿಕ ನಗುತ್ತಲೇ ಮುಂದೆ ಸಾಗಿದರು. ಅಷ್ಟೆಯಲ್ಲೇ ಪಾಪರಾಜಿಗಳ ಕಡೆ ಕೈ ಬೀಸುತ್ತಾ ಹೋದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋಗೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.   

ನೆಟ್ಟಿಗರು ಪುವರ್ ಗರ್ಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಆಕೆ ಯಾವಾಗಲು ಕೆಳಗೆ ಬೀಳುತ್ತಾಳೆ ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಆಕೆಗೆ ಏನೋ ಆಗಿದೆ ಎಂದು ಹೇಳಿದ್ದಾರೆ. ಇನ್ನೂ ತರಹೇವಾರಿ ಕಾಮೆಂಟ್ ಮಾಡಿ ನಿಸಾ ಕಾಲೆಳೆಯುತ್ತಿದ್ದಾರೆ.   

ನೈಸಾ ಜೊತೆ ಕಾಜೋಲ್‌ ಫೋಟೋಶೂಟ್‌; ಅಮ್ಮ ಮಗಳ ಜೋಡಿಗೆ ಹಾಟ್ ಎಂದ ನೆಟ್ಟಿಗರು!

ಇತ್ತೀಚೆಗಷ್ಟೆ ನಿಸಾ ತನ್ನ ಹೆಸರನ್ನು ತಪ್ಪಾಗಿ ಹೇಳುತ್ತಿದ್ದವರಿಗೆ ಸರಿಯಾಗಿ ಹೇಳಿಕೊಟ್ಟಿದ್ದರು. ನಿಸಾ ಹೆಸರು ಅನೇಕರು ವಿವಿಧ ರೀತಿಯಲ್ಲಿ ಕರೆಯುತ್ತಾರೆ. ನಿಸಾ, ನೈಸಾ, ನ್ಯಾಸಾ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಿದ್ದರು. ಪಾಪರಾಜಿಗಳು ನಿಸಾ ಹೆಸರನ್ನು ನೀಸಾ, ನೈಸಾ, ನ್ಯಾಸಾ ಎಂದು ಕರೆಯುತ್ತಿದ್ದರು. ಆಗ ತನ್ನ ಹೆಸರು ನಿಸಾ ಎಂದು ಹೇಳಿದರು. ಆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಗಳಿಗೆ ಬುದ್ಧಿ ಹೇಳೋದು ಬೇಕಿಲ್ಲ ನಿಮ್ದು ಸಣ್ಣ ಬುದ್ಧಿ; ಕರ್ಕಿ ಎಂದು ಮಗಳನ್ನು ಟ್ರೋಲ್‌ ಮಾಡಿದವರಿಗೆ ನಟಿ ಕಾಜಲ್‌ ಉತ್ತರ

ನಿಸಾ ಅನೇಕ ಬಾರಿ ಟ್ರೋಲ್‌ಗೆ ಗುರಿಯಾಗಿದ್ದರು. ಬಾಡಿ ಶೇಮಿಂಗ್, ಮೇಕಪ್ ವಿಚಾರವಾಗಿ ನಿಸಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ನಿಜಾ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಟ್ರೇಲಿಗರಿಗೆ ನಟಿ ಕಾಜೋಲ್ ಸರಿಯಾಗಿ ತಿರುಗೇಟು ನೀಡುವ ಮೂಲಕ ಬಾಯಿ ಮುಚ್ಚಿಸಿದ್ದರು. ನಿಸಾ ದೇವಗನ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನುವ ಸುದ್ದಿ ಕೂಡ ಇದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. 

click me!