ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ: ಐಶ್ವರ್ಯ-ಉಮಾಪತಿ ಮದುವೆಯ ಫೋಟೋಗಳು ವೈರಲ್​

By Suchethana D  |  First Published Jun 11, 2024, 5:27 PM IST

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರಾ ಜೋಡಿ: ಐಶ್ವರ್ಯ-ಉಮಾಪತಿ ಮದುವೆಯ ಫೋಟೋಗಳು ವೈರಲ್​ ಆಗಿವೆ. ಇಲ್ಲಿದೆ ಡಿಟೇಲ್ಸ್​ 
 


ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಸರ್ಜಾ (Aishwarya Sarja) ಹಾಗೂ ನಟ ಉಮಾಪತಿ ರಾಮಯ್ಯ ಅವರ ಮದುವೆ ಸರಳವಾಗಿ ನಡೆದಿದ್ದು, ಇದರ ಫೋಟೋಗಳನ್ನು ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಚೆನ್ನೈನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಇವರ ಮದುವೆ ನಡೆದಿದೆ. ಕುತೂಹಲದ ಸಂಗತಿ ಎಂದರೆ, ಈಗ ಮದುವೆಯಾಗಿರುವ ಹನುಮಾನ್​ ದೇಗುಲವನ್ನು ಅರ್ಜುನ್ ಸರ್ಜಾ ಅವರೇ ಕಟ್ಟಿಸಿದ್ದರು. ಇದೇ ದೇವಾಲಯದಲ್ಲಿ ಕಳೆದ ಅಕ್ಟೋಬರ್ 27 ರಂದು ಈ ಜೋಡಿಯ ಎಂಗೇಜ್​ಮೆಂಟ್​ ನಡೆದಿತ್ತು. ಈಗ ಅಲ್ಲಿಯೇ ಮದುವೆಯಾಗಿದ್ದು, ಇದರ ಫೋಟೋಗಳು ವೈರಲ್​ ಆಗಿವೆ.
 
ಐಶ್ವರ್ಯ, ಉಮಾಪತಿ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆಗೆ ಯಾರು ಬಂದಿದ್ದರು ಎನ್ನೋದು ರಿವೀಲ್ ಆಗಿಲ್ಲ.  ಉಮಾಪತಿ ಅವರು, ತಮಿಳಿನ ಖ್ಯಾತ ಹಾಸ್ಯನಟ ರಾಮಯ್ಯ ಅವರ ಮಗನಾಗಿದ್ದು ಇವರು ಕೂಡ ತಮಿಳು ನಟ. ಐಶ್ವರ್ಯಾ ಸರ್ಜಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಲೈಟ್ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿ ವರ ಉಮಾಪತಿ ಮಿಂಚಿದ್ದಾರೆ. 10-06-2024 ಎಂದಷ್ಟೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಡಿಬರಹ ನೀಡಿದ್ದಾರೆ. ಅಂದರೆ ನಿನ್ನೆ ಇವರ ಮದುವೆ ನಡೆದಿದೆ. ಇದು ಸರ್​ಪ್ರೈಸ್​ ಮದುವೆಯಾಗಿದ್ದು, ಹೆಚ್ಚಿನವರಿಗೆ ಇದರ ವಿಷಯವೇ ತಿಳಿದಿರಲಿಲ್ಲ ಎನ್ನುವುದು ಕುತೂಹಲ.

ಗಂಡ-ಹೆಂಡ್ತಿಯರಿಗೆ ಪರಸ್ಪರ ಲವ್​ ಜಾಸ್ತಿಯಾದಾಗ ಹೀಗೆಲ್ಲಾ ಹೇಳ್ತಾರಂತೆ ನೋಡಿ... ನೀವೇನ್​ ಕರಿತೀರಾ?

Tap to resize

Latest Videos

ಅಂದಹಾಗೆ,  ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’  ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.  ಐಶ್ವರ್ಯಾ  ಅವರು 'ಪಟ್ಟತು ಯಾನೈ', 'ಪ್ರೇಮ ಬರಹ', 'ಸೊಲ್ಲಿವಿಡವ' ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಐಶ್ವರ್ಯಾ ಮತ್ತು ಉಮಾಪತಿ ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾದ್ರು. ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಈ ವಿಚಾರವನ್ನು ಹಿರಿಯರ ಗಮನಕ್ಕೆ ತಂದಾಗ ಇಬ್ಬರ ಮನೆಯವರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು.   ಐಶ್ವರ್ಯಾ ನಾಯಕಿಯಾಗಿ ಕೆಲ ಚಿತ್ರಗಳಲ್ಲಿ ಮಾಡಿದ್ದರೂ ಅವರಿಗೆ  ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಅವರ ಅಭಿನಯದ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಯಶಸ್ಸು ಕಂಡಿಲ್ಲ.  ಕನ್ನಡದ ಪ್ರೇಮಬರಹ ಸಿನಿಮಾದಲ್ಲಿ ನಟಿಸಿದ್ದರೂ ಅದು ಕುಡ ಸಾಕಷ್ಟು ಯಶಸ್ಸು ಕಾಣಿಸಲಿಲ್ಲ. 

'ಕೋಟಿ' ಚಿತ್ರದ ನಾಯಕಿ ಮೋಕ್ಷಾ ಒಂದು ವಾರ ಸ್ನಾನ ಮಾಡಲ್ವಂತೆ- ನಟಿ ಕೊಟ್ಟ ಕಾರಣ ಹೀಗಿದೆ ನೋಡಿ...
 

click me!