ಅದಿತಿ ಪ್ರಭುದೇವ 'ಅಲೆಕ್ಸಾ' ಚಿತ್ರದ ಬಿಡುಗಡೆ ನವೆಂಬರ್ 3ಕ್ಕೆ!

By Shriram Bhat  |  First Published Sep 25, 2023, 5:38 PM IST

ಯಶಸ್ ಜತೆ ಸಪ್ತಪದಿ ತುಳಿದು ಈ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ, ಇದೀಗ ತಮ್ಮ ಕೌಟುಂಬಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಂಸಾರ, ಅಡುಗೆ, ಟ್ರಿಪ್ಸ್, ಹವ್ಯಾಸಗಳು ಹೀಗೆ ಹಲವು ಸಂಗತಿಗಳ ಬಗ್ಗೆ ಅದಿತಿ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ.


ಸ್ಯಾಂಡಲ್‌ವುಡ್ ಕ್ಯೂಟ್ ನಟಿ ಅದಿತಿ ಪ್ರಭುದೇವ ಚಿತ್ರ 'ಅಲೆಕ್ಸಾ (Alex)'ಚಿತ್ರವು ಬಿಡುಗಡೆ ದಿನಾಂಖ ಘೋಷಿಸಿದೆ. ಮಂದಿನ ತಿಂಗಳು, ಅಂದರೆ ನವೆಂಬರ್ 3, 2023ಕ್ಕೆ ಅಲೆಕ್ಸಾ ಚಿತ್ರವು ತೆರೆಯ ಮೇಲೆ ಕಾಣಿಸಿಕೊಳ್ಳಲಿದೆ. ಮದುವೆ ಬಳಿಕ ಅದಿತಿ ನಟನೆಯ ಚಿತ್ರವೊಂದು ಬಿಡುಗಡೆ ಆಗುತ್ತಿದ್ದು, ನಟಿಯ ಫ್ಯಾನ್ಸ್‌ಗಳು ಈ ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದರು. ನಿರೀಕ್ಷೆ ನಿಜವಾಗುವ ಕಾಲ ಬಂದಿದೆ. 

ಅಲೆಕ್ಸಾ ಚಿತ್ರವನ್ನು ಜೀವಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಾಯಕರಾಗಿ ಪವನ್ ತೇಜಾ ನಟಿಸಿದ್ದಾರೆ. ಪವನ್ ತೇಜಾ ಎದುರು ಪೊಲೀಸ್ ಆಫೀಸರ್ ಪಾತ್ರದಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಅದಿತಿ ಪೊಲೀಸ್ ಪಾತ್ರ ಮಾಡಿದ್ದು, ಅವರ ಅಭಿಮಾನಿಗಳು ಈ ಪಾತ್ರವನ್ನು ತೆರೆಯ ಮೇಲೆ ನೋಡಲು ಕುತೂಹಲದಿಂದ ಕಾಯುತ್ತಿದ್ದಾರಂತೆ. 

Tap to resize

Latest Videos

ನಟಿ ಆದಿತಿ ಪ್ರಭುದೇವ ಕನ್ನಡದಲ್ಲಿ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಬಜಾರ್, ರಂಗನಾಯಕಿ, ತೋತಾಪುರಿ, ಜಮಾಲಿ ಗುಡ್ಡ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿಗೆ ಬಹಳಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಅದಿತಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ತುಂಬಾ ಸಕ್ರಿಯರಾಗಿದ್ದಾರೆ. 

ಯಶಸ್ ಜತೆ ಸಪ್ತಪದಿ ತುಳಿದು ಈ ವರ್ಷವಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ, ಇದೀಗ ತಮ್ಮ ಕೌಟುಂಬಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಂಸಾರ, ಅಡುಗೆ, ಟ್ರಿಪ್ಸ್, ಹವ್ಯಾಸಗಳು ಹೀಗೆ ಹಲವು ಸಂಗತಿಗಳ ಬಗ್ಗೆ ಅದಿತಿ ಆಗಾಗ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. 

ನವೆಂಬರ್ 3ಕ್ಕೆ ಬಿಡುಗಡೆ ಕಾಣುತ್ತಿರುವ ಅಲೆಕ್ಸಾ ಚಿತ್ರದಲ್ಲಿ ಅದಿತಿ-ಪವನ್ ಜತೆ, ನಾಗಾರ್ಜನ, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ನಟಿಸಿದ್ದಾರೆ. ಚಿತ್ರವು ಸ್ಯಾಂಡಲ್‌ವುಡ್ ಪ್ರೇಕ್ಷಕರಲ್ಲಿ ಒಂದು ಮಟ್ಟಿಗಿನ ಹೈಪ್ ಕ್ರಿಯೇಟ್ ಮಾಡಿದ್ದು, ಬಿಡುಗಡೆ ಬಳಿಕ ಚಿತ್ರದ ಫಲಿತಾಂಶ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

click me!