
ಕನ್ನಡ ಸೇರದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಲೆಜೆಂಡ್ ನಟಿ ಸುಹಾಸಿನಿ ಮಣಿರತ್ನಂ, ತಮ್ಮ ಆರಂಭಿಕ ವೃತ್ತಿ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಸುಹಾಸಿನಿ, ತಾವು ಚಿತ್ರರಂಗದಲ್ಲಿ ಬಂದ ಹೊಸದರಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಬಹುತೇಕ ಎಲ್ಲರಿಗೂ ಆಗಿರುವಂಥ ಅನುಭವವೇ ಸ್ವಲ್ಪ ವಿಭಿನ್ನವಾಗಿ ಸುಹಾಸಿನಿ ಅವರಿಗೂ ಆಗಿದೆ ಎನ್ನಬಹುದು.
ಹಾಗಿದ್ದರೆ ಸುಹಾಸಿನಿ ಅನುಭವವೇನು? "ನಾನು ಆಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಅವಕಾಶಗಳು ಕಡಿಮೆ, ಆದರೆ ಬಂದಿದ್ದು ನಾಯಕಿ ಪಾತ್ರಗಳೇ ಆಗಿದ್ದವು. ಒಮ್ಮೆ ಒಬ್ಬ ನಿರ್ದೇಶಕರು ಚಿತ್ರದ ಸನ್ನಿವೇಶವೊಂದರಲ್ಲಿ ನಾನು ನಾಯಕನಟನ ತೊಡೆಯ ಮೇಲೆ (ಮಡಿಲಲ್ಲಿ) ಕುಳಿತುಕೊಳ್ಳುವಂತೆ ಹೇಳಿದ್ದರು. ಆದರೆ ನನಗದು ಇಷ್ಟವಾಗದ ಕಾರಣಕ್ಕೆ ನಾನು 'ಅದು ನನ್ನಿಂದ ಸಾಧ್ಯವಿಲ್ಲ. ಸೀನ್‌ನಲ್ಲಿ ಬೇರೆ ಏನಾದರೂ ಮಾಡಿ' ಎಂದಿದ್ದೆ ಎಂದಿದ್ದಾರೆ. ಮತ್ತೊಮ್ಮೆ ಕೂಡ ನನಗೆ ಇನ್ನೊಂದು ರೀತಿಯ ಸಮಸ್ಯೆ ಎದುರಾಗಿತ್ತು.
"ನಿರ್ದೇಶಕರ ಪ್ರಕಾರ ಆ ಒಂದು ಸೀನ್‌ನಲ್ಲಿ ನಾನು ನಾಯಕ ತಿಂದು ಬಿಟ್ಟ ಐಸ್‌ಕ್ರೀಂ ತಿನ್ನಬೇಕಿತ್ತು. ಹಾಗೇ ಮಾಡಿ ಎಂದು ಹೇಳಿದರು ಕೂಡ. ಆದರೆ, ನನಗೆ ಎಂಜಲು ತಿನ್ನಲು ಇಷ್ಟವಿರಲಿಲ್ಲ. ಆಗಲೂ ಅಷ್ಟೇ, ನಾನು ಅದಕ್ಕೆ ಸುತಾರಾಂ ಒಪ್ಪಿಲಿಲ್ಲ. ನನಗೆ ಎಂಜಲು ತಿನ್ನಲು ಆಗದು, ಬೇರೆ ಐಸ್‌ಕ್ರೀಂ ತರಿಸಿ ಅಥವಾ ಬೇರೆ ಏನಾದರೂ ಮಾಡಿ ಎಂದು ಹೇಳಿದ್ದೆ. ಎರಡೂ ಕಡೆ, ನಾನು ಹೇಳಿದಂತೆ ಬದಲಾವಣೆ ಮಾಡಿಕೊಂಡಿದ್ದರು. ನನಗೆ ಹೀಗಾಗಿ ತೊಂದರೆ ಆಗಲಿಲ್ಲ" ಎಂದಿದ್ದಾರೆ ಸುಹಾಸಿನಿ ಮಣಿರತ್ನಂ.
ನಟಿ ಸುಹಾಸಿನಿ ಮದುವೆಗಿಂತ ಮೊದಲೇ ನಟನಾವೃತ್ತಿ ಪ್ರಾರಂಭಿಸಿದವರು. ಆದರೆ, ಪ್ರಾರಂಭದಿಂದಲೂ ತಮ್ಮ ಇಷ್ಟಕ್ಕೆ ಅನುಸಾರವಾಗಿ ಮಾತ್ರ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸಿದವರು. ಜತೆಗೆ, ತಮಗಾಗದ ಡೈಲಾಗ್ ಅಥವಾ ಸೀನ್ ಇದ್ದರೆ ಮುಲಾಜು ಇಲ್ಲದೇ ಬದಲಾಯಿಸಲು ಹೇಳಿ ಬದಲಾದ ಬಳಿಕವಷ್ಟೇ ನಟಿಸುತ್ತಿದ್ದರಂತೆ. ಆದ್ದರಿಂದ ನನಗೆ ಮುಂದೆ ಯಾವತ್ತೋ ಹೇಳಿಕೊಂಡು ಪಶ್ಚಾತ್ತಾಪ ಪಡುವ ಪ್ರಸಂಗವೇ ಬರಲಿಲ್ಲ" ಎಂದಿದ್ದಾರೆ ನಟಿ ಸುಹಾಸಿನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.