ಸೋಮಿ ಅಲಿ ಎಂಬ ಚಂದದ ನಟಿಯ ಹೆಸರನ್ನು ನೀವು ಕೇಳಿರಬಹುದು, ಈಕೆಯ ನಟನೆಯನ್ನೂ ನೋಡಿರಬಹುದು. ಈಕೆಯ ಕತೆ ಸ್ವಾರಸ್ಯಕರವಾಗಿದೆ, ಹಾಗೇ ದುರಂತಮಯವೂ ಆಗಿದೆ. ಹಾಗೇ ಸ್ಫೂರ್ತಿಯುತವೂ ಆಗಿದೆ.
ಸೋಮಿ ಅಲಿ ಎಂಬ ಈ ನಟಿ ಸಲ್ಮಾನ್ ಖಾನ್‌ನನ್ನು ಮದುವೆ ಆಗುವುದಕ್ಕಾಗಿಯೇ ಪಾಕಿಸ್ತಾನದಿಂದ ಬಂದವಳು. ಆಕೆ ತನ್ನೂರಿನಿಂದ ಹಿರಡುವಲ್ಲಿ ಇದ್ದ ಏಕೈಕ ಉದ್ದೇಶ ಅದೇ. ಆದರೆ ಮುಂದೆ ಆಕೆಯ ಬದುಕು ಆಕೆಯನ್ನು ಎಲ್ಲಿಲ್ಲೆಗೆಲ್ಲಾ ಒಯ್ದಿತು.
ಈಕೆಯ ಕತೆ ಹೀಗಿದೆ.
1991ರಲ್ಲಿ ಮೈನೇ ಪ್ಯಾರ್ ಕಿಯಾ ಫಿಲಂ ಬಂತಲ್ಲ. ಅದರಲ್ಲಿ ಎಳಸು ಮುಖದ ಚಾಕಲೇಟ್ ಬಾಯ್ ಸಲ್ಮಾನ್ ಖಾನ್ ನಾಯಕ ನಟನಾಗಿದ್ದ. ಈ ಫಿಲಂನಲ್ಲಿ ಸಲ್ಮಾನ್‌ನನ್ನು ನೋಡಿದ ಸೋಮಿ ಅಲಿ ಆತನ ಕಡೆಗೆ ಎಷ್ಟು ಆಕರ್ಷಿತಳಾದಳು ಎಂದರೆ, ಆತನನ್ನೇ ಮದುವೆ ಆಗುವುದು ಎಂದು ನಿರ್ಧರಿಸಿಬಿಟ್ಟಳು. ಈಕೆ ಜನಿಸಿದ್ದು ಬೆಳೆದದ್ದು ಪಾಕಿಸ್ತಾನದ ಲಾಹೋರ್‌ನಲ್ಲಿ. ಮೈನೇ ಪ್ಯಾರ್ ಕಿಯಾ ನೋಡಿದಾಗ ಈಕೆಗೆ ವಯಸ್ಸು ಹದಿನಾರು. ಹುಚ್ಚು ಹರೆಯ. ನಾನು ಇವನನ್ನೇ ಮದುವೆಯಾಗ್ತೀನಿ ಅಮ್ಮಾ ಎಂದಳು. ತಾಯಿ ಈಕೆಗೆ ಹುಚ್ಚು ಎಂಬಂತೆ ನೋಡಿದಳು. ಶ್ರೀಮಂತರ ಮಗಳು. ಇಂದೇ ಭಾರತಕ್ಕೆ ಹೋಗ್ತೀನಿ ಸಲ್ಮಾನ್‌ನನ್ನು ಮದುವೆ ಆಗೋಕೆ ಎಂದು ಹೊರಟಳು. ಆಗ ಎಚ್ಚೆತ್ತುಕೊಂಡ ತಾಯಿ ಈಕೆಯನ್ನು ರೂಮಿನಲ್ಲಿ ಕೂಡಿಹಾಕಿದಳು.
ಐಶ್ವರ್ಯಾ ಟು ದೀಪಿಕಾ; ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಲು ಒಪ್ಪದ ನಟಿಯರ ಪಟ್ಟಿ! ...
ಇದು ಹೀಗಾದರೆ ಆಗೋಲ್ಲ ಎಂದು ಸೋಮು ಅಲಿಗೆ ಗೊತ್ತಾಯಿತು. ತಂದೆಗೆ ಫೋನ್ ಮಾಡಿದಳು. ಭಾರತಕ್ಕೆ ಹೋಗಬೇಕು ಅಂದಳು. ಮುಂಬಯಿಯಲ್ಲಿ ಬಂಧುಗಳು ಸ್ನೇಹಿತರು ಇದ್ದಾರೆ, ಅವರನ್ನು ನೋಡಬೇಕು ಎಂದು ತಂದೆಗೆ ಹೇಳಿ, ದಿಲ್ಲಿಯ ತಾಜ್‌ಮಹಲ್ ನನಗೆ ತುಂಬಾ ಇಷ್ಟ, ಅದನ್ನು ನೋಡಬೇಕು ಎಂದು ಹೇಳಿ ಹೊರಟಳು. ಆದರೆ ತಾಜ್‌ಮಹಲ್ ಅನ್ನು ಇಂದಿಗೂ ಆಕೆ ನೋಡಿಲ್ಲ! ಅದು ಬೇರೆ ಮಾತು.
ಹೀಗೆ ಬಂದವಳು ಲಕ್ಷುರಿ ಹೋಟೆಲ್‌ನಲ್ಲಿ ಉಳಿದುಕೊಂಡಳು. ಮುಂಬಯಿಯ ಹಿಂದಿ ಚಿತ್ರರಂಗದಲ್ಲಿ ತನ್ನ ಅದೃಷ್ಟ ಪರೀಕ್ಷಿಸಿದಳು. ಆದರೆ ಆಕೆಗೆ ಸರಿಯಾದ ಫಿಲಂಗಳೇ ಸಿಗಲಿಲ್ಲ. ಎಲ್ಲರೂ ಆಕೆಯನ್ನು ಒಂಥರಾ ವಿಚಿತ್ರವಾಗಿ ನೋಡುತ್ತಿದ್ದರು. ಹಾಗೆ ನೋಡಲು ಕಾರಣವಿತ್ತು. ಈಕೆ ಅವಕಾಶ ಹುಡುಕಿಕೊಂಡು ಬಂದ ಹೊಸ ನಟಿಯಾಗಿದ್ದಳು. ಆದರೆ ಲಕ್ಷುರಿ ಹೋಟೆಲ್‌ನಲ್ಲಿ ಉಳಿದುಕೊಂಡ ಶ್ರೀಮಂತೆ. ಇದು ಎಲ್ಲರಿಗೂ ಅಚ್ಚರಿ. ಈಕೆ ಎಲ್ಲ ನಿರ್ದೇಶಕರ ತಲೆನೋವು ಆಗಿದ್ದಳು. ಸರಿಯಾಗಿ ರಿಹರ್ಸಲ್‌ಗಳಿಗೆ ಹೋಗುತ್ತಿರಲಿಲ್ಲ. ಟಾಮ್‌ಬಾಯ್ ಥರಾ ಇದ್ದಳು. ಭಾರತೀಯ ಸಂಸ್ಕೃತಿ ಎಲ್ಲಾ ಏನೇನೂ ಗೊತ್ತಿರಲಿಲ್ಲ. ಅಮೆರಿಕನೈಸ್ಡ್ ಇಂಗ್ಲಿಷ್ ಮಾತಾಡುತ್ತಿದ್ದಳು. ಒಟ್ಟಿನಲ್ಲಿ ಹಿಂದಿ ಚಿತ್ರರಂಗಕ್ಕೆ ಹೊಂದದ ಪದವಾಗಿದ್ದಳು. ಈಕೆಯ ಏಕೈಕ ಉದ್ದೇಶ ಸಲ್ಮಾನ್‌ನಲ್ಲಿ ಮದುವೆಯಾಗುವುದೇ ಆಗಿತ್ತು.
undefined
ಕಡೆಗೂ ಈಕೆಯ ಕನಸು ನನಸಾಗುವ ಕಾಲ ಬಂತು. ಸಲ್ಮಾನ್ ಜೊತೆ ನಟಿಸುವ ಅವಕಾಶವೂ ಸಿಕ್ಕಿತು. 1991ರಿಂದ 1999ರವರೆಗೆ ಹತ್ತು ಹಿಂದಿ ಮೂವಿಗಳಲ್ಲಿ ನಟಿಸಿದಳು. ಅದರಲ್ಲಿ ಕೆಲವು ಸಲ್ಮಾನ್ ಜೊತೆಗೂ ಆದವು. ಸಲ್ಮಾನ್ ಜೊತೆಗೆ ಸಂಬಂಧವೂ ಬೆಳೆಯಿತು. ಆತನ ಜೊತೆಗೆ ಐದಾರು ವರ್ಷ ಲಿವ್‌ಇನ್‌ನಲ್ಲಿದ್ದಳು.
ಅಭಿನವ್ ಚಡ್ಡಿ ಎಳೆದ ರಾಖಿ ಸಾವಂತ್‌ಗೆ ಸಲ್ಮಾನ್ ಖಾನ್ ಸಪೋರ್ಟ್ ...
ಕಡೆಗೂ ಸಲ್ಮಾನ್ ತನಗೆ ತಕ್ಕ ಹುಡುಗ ಅಲ್ಲ ಅನ್ನುವುದು ಆಕೆಗೆ ಗೊತ್ತಾಯಿತು. ಆತ ಯಾರನ್ನೂ ಮದುವೆ ಆಗುವವನೂ ಅಲ್ಲ ಅನ್ನುವುದೂ ಗೊತ್ತಾಯಿತು. ಸಲ್ಮಾನ್ ಹೂವಿನಿಂದ ಹೂವಿಗೆ ಹಾರುವ ದುಂಬಿಯಂಥವನು. ಸೋಮಿ ಅಲಿ ಆತನಿಗೆ ಆತನ ನೂರಾರು ಗರ್ಲ್‌ಫ್ರೆಂಡ್‌ಗಳಲ್ಲಿ ಒನಬ್ಬಾಕೆ ಆಗಿದ್ದಳಷ್ಟೇ ಹೊರತು, ಜೀವನ ಸಂಗಾತಿಯಾಗಿ ಆತ ಪರಿಗಣಿಸಿಯೇ ಇರಲಿಲ್ಲ. ಕಡೆಗೂ ಆಕೆ ಆತನನ್ನು ತೊರೆದು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಿಯಾಮಿಗೆ ಹೊರಟುಹೋದಳು.
ಬಾಲ್ಯದಲ್ಲಿ ಈಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹಿನ್ನೆಲೆಯೂ ಇದೆ. ಬಾಲ್ಯದಲ್ಲಿ ಮನೆಗೆಲಸಕ್ಕೆ ಬರುತ್ತಿದ್ದ ಕೆಲಸದಾತ ಒಬ್ಬ ಆಕೆಯನ್ನು ಹಲವು ವರ್ಷಗಳ ಕಾಲ ಬಳಸಿಕೊಂಡಿದ್ದ. ಮುಂದೆ ಅಮೆರಿಕದಲ್ಲಿ ಹನ್ನೊಂದನೇ ವಯಸ್ಸಿನಲ್ಲಿ ರೇಪ್‌ಗೂ ಒಳಗಾಗಿದ್ದಳು. ಮುಂದೆ ಆಂತರಿಕ ದೌರ್ಜನ್ಯಕ್ಕೂ ಒಳಗಾದಳು. ಇದೆಲ್ಲ ಈಕೆಯನ್ನು ಹೋರಾಟಗಾರ್ತಿಯಾಗಿ ಮಾರ್ಪಡಿಸಿದೆ. ಇಂದು ಸೋಮಿ ಅಲಿ ನಟಿಯಲ್ಲ. ಆಕೆ ನೋ ಮೋರ್ ಟಿಯರ್ಸ್ ಎಂಬ ಒಂದು ಎನ್‌ಜಿಒ ಮಾಡಿಕೊಂಡು, ಸಂತ್ರಸ್ತರ ಕಣ್ಣೀರು ಒರೆಸು ಕಾಯಕದಲ್ಲಿ ನಿರತಳಾಗಿದ್ದಾಳೆ.
ಸಲ್ಮಾನ್ ಖಾನ್ ಜೊತೆ ನಟಿಸೋಕೆ ಹೀರೋಯಿನ್‌ಗಳೇಕೆ ಅಂಜುತ್ತಾರೆ? ...