
ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂನಲ್ಲಿ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸ್ನೇಹಾ ಪ್ರಸನ್ನ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಬ್ಬಬ್ಬಾ! ಇದು ರೀಲಾ, ರಿಯಲ್ಲಾ? ಅರ್ಜುನ್-ಸ್ನೇಹ ಲವ್ ಸ್ಟೋರಿ ಕೇಳಿದ್ದೀರಾ?
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ನೇಹಾ ಪಿಂಕ್ ಶೂ ಫೋಟೋ ಅಪ್ಲೋಡ್ ಮಾಡಿ 'It's Girl' ಎಂದು ಬರೆದುಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಅದ್ಧೂರಿಯಾಗಿ ಸ್ನೇಹಾ ಸೀಮಂತ ಕಾರ್ಯಕ್ರಮ ನಡೆದಿತ್ತು.
2009ರಲ್ಲಿ 'ಅಚುಮಂಡು ಅಚುಮುಂಡು' ಚಿತ್ರದ ಸೆಟ್‌ನಲ್ಲಿ ಸ್ನೇಹಾ ಮತ್ತು ಪ್ರಸನ್ನ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಶುರುವಾದ ಪ್ರೀತಿಯನ್ನು ಕುಟುಂಬಸ್ತರಿಗೆ ತಿಳಿಸಿ ಮೇ 11, 2012ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ ಮೂರು ವರ್ಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಹೆಣ್ಣು ಮಗುವನ್ನು ಬರ ಮಾಡಿಕೊಂಡು, ಫ್ಯಾಮಿಲ್ ಕಂಪ್ಲೀಟ್ ಮಾಡಿಕೊಂಡಿದ್ದಾರೆ.
ದರ್ಶನ್ 'ಕುರುಕ್ಷೇತ್ರ'ದ ದ್ರೌಪದಿ ಸ್ನೇಹಾಳಿಗೆ ಸೀಮಂತದ ಸಂಭ್ರಮ!
2020 ಸ್ನೇಹಾ ಲೈಫ್‌ನಲ್ಲಿ ಕಲರ್‌ಫುಲ್ ಇಯರ್. ಕುಟುಂಬಕ್ಕೆ ಮಗಳನ್ನು ಬರ ಮಾಡಿಕೊಂಡಿದ್ದಾರೆ ಮತ್ತು ಜನವರಿ 15 ರಂದು ತೆರೆಕಂಡ 'ಪಟಾಸು' ಚಿತ್ರವೂ ಸೂಪರ್ ಹಿಟ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.