ನಟಿಯಾಗಿ ತಾವು ಬಹಳಷ್ಟು ಎತ್ತರಕ್ಕೆ ಏರಬೇಕು, ಹಲವು ಭಾಷೆಗಳಲ್ಲಿ ನಟಿಸಿ ತಾವು ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ನಟಿ ಸಹಜವಾಗಿಯೇ ಅಂದುಕೊಂಡಿದ್ದರಂತೆ. ಆದರೆ ದುರಾದೃಷ್ಟವಶಾತ್ ಎಂಬಂತೆ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು.
ನಟಿ ರೂಪಿಣಿ ಕನ್ನಡಿಗರಿಗೆ ಪರಿಚಿತ ಹೆಸರು. ನಟರಾದ ವಿಷ್ಣುವರ್ಧನ್ ಹಾಗೂ ರವಿಚಂದ್ರನ್ ಅವರ ಜೋಡಿಯಾಗಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ರೂಪಿಣಿ. ಗೋಪಿ ಕೃಷ್ಣ ಚಿತ್ರದಲ್ಲಿ ರವಿಚಂದ್ರನ್ ಅವರೊಂದಿಗೆ ನಟಿಸಿದ್ದ ರೂಪಿಣಿ ಅವರು ನೀನು ನಕ್ಕರೆ ಹಾಲು ಸಕ್ಕರೆ, ಮತ್ತೆ ಹಾಡಿತು ಕೋಗಿಲೆ ಚಿತ್ರಗಳಲ್ಲಿ ನಟ ಡಾ ವಿಷ್ಣುವರ್ಧನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ನಟಿ ರೂಪಿನಿ ಅವರು 1980ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಪಡೆದವರು.
ನಟಿಯಾಗಿ ತಾವು ಬಹಳಷ್ಟು ಎತ್ತರಕ್ಕೆ ಏರಬೇಕು, ಹಲವು ಭಾಷೆಗಳಲ್ಲಿ ನಟಿಸಿ ತಾವು ಬಹುಭಾಷಾ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂದು ನಟಿ ಸಹಜವಾಗಿಯೇ ಅಂದುಕೊಂಡಿದ್ದರಂತೆ. ಆದರೆ ದುರಾದೃಷ್ಟವಶಾತ್ ಎಂಬಂತೆ ರೂಪಿಣಿ ತಾಯಿಯವರು ಮದುವೆಯಾಗಲು ತುಂಬಾ ಒತ್ತಾಯ ಮಾಡಿದರಂತೆ. ಕೊನೆಗೂ ತಾಯಿಯ ಒತ್ತಾಯಕ್ಕೆ ಮಣಿದ ನಟಿ ರೂಪಿಣಿ ಅವರು 1995 ರಲ್ಲಿ ವೈದ್ಯ ಮೋಹನ್ ಕುಮಾರ್ ಅವರನ್ನು ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. ಇಷ್ಟವಿಲ್ಲದ ಮದುವೆಯಾಗಿ ಕಷ್ಟಕ್ಕೆ ನಾಂದಿ ಹಾಡಿದರು ಎನ್ನಬೇಕು.
ಕ್ಯಾಪ್ ತೊಟ್ಟ ಕಾಂತಾರ ಫಾರೆಸ್ಟ್ ಗಾರ್ಡ್ ರವಿ; 'ಗಾಡ್ ಪ್ರಾಮಿಸ್' ಅಂದ್ರು ಕುಂದಾಪುರದ ಸೂಚನ್ ಶೆಟ್ಟಿ!
ಆದರೆ, ರೂಪಿಣಿ ಹಣೆಬರಹ ನೆಟ್ಟಗಿರಲಿಲ್ಲ ಎನ್ನಬೇಕು. ತಾಯಿಯ ಆಸೆಯಂತೆ ರೂಪಿಣಿ ಮದುವೆಯೇನೋ ಆದರು. ಆದರೆ, ಅವರ ಆಸೆಯಂತೆ ಒಳ್ಳೆಯ ದಾಂಪತ್ಯ ನಡೆಸಲು ಆಗಲಿಲ್ಲ. ದಿನಾಲು ಜಗಳ, ಮನಸ್ತಾಪಗಳು ಸಹಜ ಎನ್ನುವಂತೆ ನಡೆಯತೊಡಗಿದವು ಎನ್ನಲಾಗಿದೆ. ದಿನಂಪ್ರತಿ ಜಗಳದಿಂದ ಬೇಸತ್ತ ನಟಿ ರೂಪಿಣಿ 2003ರಲ್ಲಿ ಗಂಡ ಮೋಹನ್ ಕುಮಾರ್ ಅವರಿಂದ ಡಿವೋರ್ಸ್ ಪಡೆದುಕೊಂಡರು ಎನ್ನಲಾಗಿದೆ. ರೂಪಿಣಿ ಹಾಗೂ ಮೋಹನ್ ಕುಮಾರ್ ದಾಂಪತ್ಯಕ್ಕೆ ಮುದ್ದಾದ ಮಗಳೊಬ್ಬಳಿದ್ದಾಳೆ.
ನಿರೀಕ್ಷೆ ಹುಟ್ಟಿಸಿ ಭರವಸೆ ಹೆಚ್ಚಿಸಿದೆ 'ಮತ್ಸ್ಯಗಂಧ' ಸಿನಿಮಾದ 'ಕಡಲ ಒಡಲ ಮೇಲೆ..' ಹಾಡು ರಿಲೀಸ್
ದಾಂಪತ್ಯ ಮುರಿದು ಬಿದ್ದ ಕಾರಣ, ನಟಿ ರೂಪಿಣಿ 26 ವರ್ಷಗಳ ಬಳಿಕ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಆದರೆ, ಮೊದಲಿನಂತೆ ಅವರು ಹೀರೋಯಿನ್ ಆಗಿ ಮಿಂಚಲು ಸಾಧ್ಯವೇ? ಪಾಲಿಗೆ ಬಂದಿದ್ದು ಪಂಚಾಮೃತ ಎಂಬಂತೆ ನಟಿ ರೂಪಿಣಿ ಬಂದ ಪಾತ್ರಗಳನ್ನೇ ಒಪ್ಪಿಕೊಂಡು ಮಾಡಬೇಕು. ಅದು ಸಾಧ್ಯವಿಲ್ಲ ಎಂದಾದರೆ ಇಷ್ಟವಾಗುವ ಪಾತ್ರಗಳನ್ನಷ್ಟೇ ಮಾಡಬೇಕು. ಆಯ್ಕೆ ಅವರಿಗೇ ಬಿಟ್ಟಿದ್ದು, ಆದರೆ ಅವರನ್ನು ಹುಡುಕಿಕೊಂಡು ಬರುವ ಪಾತ್ರಗಳು ಎಂಥವು ಎಂಬುದನ್ನು ಕಾಲವೇ ನಿರ್ಧರಿಸಬೇಕು.
ನಾವು ತಲೆ ಬಗ್ಗಿಸದೇ ಇದ್ದಿದ್ದರೆ ಆಸ್ಪತ್ರೆ ಸೇರಿಕೊಳ್ಳಬೇಕಿತ್ತು; ಯಾಕೆ ಹೀಗಂದಿದ್ರು ನಟ ಡಾ ವಿಷ್ಣುವರ್ಧನ್...!?