Renu Desai: 'ನನ್ನ ಮಾಜಿ ಪತಿಯ ಸಹಾಯವಿಲ್ಲದೆ ಇದೆಲ್ಲಾ ಮಾಡ್ದೆ'; ರೇಣು ದೇಸಾಯಿ ಕಮೆಂಟ್!

Published : Nov 11, 2026, 12:45 PM IST
Actress Renu Desai

ಸಾರಾಂಶ

ನಟಿ ರೇಣು ದೇಸಾಯಿ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದು 14 ವರ್ಷಗಳಾದರೂ, ಇಂದಿಗೂ ಮಾಜಿ ಪತ್ನಿಯಾಗಿ ಮಾತ್ರ ಗುರುತಿಸಲ್ಪಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿದ್ದರೂ, ಅಭಿಮಾನಿಗಳ ಟ್ರೋಲಿಂಗ್ ಹಾಗೂ ಟೀಕೆಗಳ ಬಗ್ಗೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಸಿನಿಮಾ ನಟಿ, ಸಾಮಾಜಿಕ ಕಾರ್ಯಕರ್ತೆ ರೇಣು ದೇಸಾಯಿ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಬಹಳ ಕಷ್ಟಪಟ್ಟು ತಮ್ಮ ಗುರುತನ್ನು ಪಡೆದುಕೊಂಡಿದ್ದರು. ಆದರೆ ಇಂದಿಗೂ ಅವರನ್ನು ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿಯಾಗಿಯೇ ಎಲ್ಲರೂ ನೋಡುತ್ತಿರುವ ಬಗ್ಗೆ ಸಂದರ್ಶನವೊಂದರಲ್ಲಿ ರೇಣು ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀರಾಮನ ವನವಾಸ 14 ವರ್ಷ, ಆದರೆ ನನ್ನ ವನವಾಸದಿಂದ ಯಾವಾಗ ಮುಕ್ತಿ ಸಿಗುತ್ತೋ ಅರ್ಥವಾಗುತ್ತಿಲ್ಲ ಎಂದು ತಮ್ಮ ಸಂಕಷ್ಟವನ್ನು ತೊಡಿಕೊಂಡಿದ್ದಾರೆ. ಅಲ್ಲದೇ ಮಾಜಿ ಪತಿ ಅಭಿಮಾನಿಗಳು ತಮ್ಮನ್ನು ಅತ್ತಿಗೆ ಎಂದು ಕರೆಯುವ ಕುರಿತು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಎದುರಾಗುವ ಟ್ರೋಲಿಂಗ್ ಕುರಿತು ರೇಣು ದೇಸಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀರಾಮನ 14 ವರ್ಷ ವನವಾಸ ಮುಕ್ತಾಯ!

ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ಅಧಿಕೃತವಾಗಿ ವಿಚ್ಛೇದನ ಪಡೆದು 14 ವರ್ಷಗಳು ಕಳೆಯುತ್ತಿದ್ದರು, ಇಂದಿಗೂ ತಮಗೆ ಯಾವುದೇ ಗುರುತು ನೀಡಿದೆ, ಮಾಜಿ ಪತ್ನಿ ಅಂತ ಕರೆಯುತ್ತಿದ್ದಾರೆ ಎಂದು ರೇಣು ದೇಸಾಯಿ ಹೇಳಿದ್ದಾರೆ. 'ನಾನು ತೆಲುಗು ಜನರಿಗೆ ಒಂದು ಕ್ಲಾರಿಟಿ ನೀಡಬೇಕು. ನನ್ನ ಜೀವನ 'ಭದ್ರಿ' ಸಿನಿಮಾದಿಂದ ಆರಂಭವಾಯ್ತು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಇದಕ್ಕಿಂತ ಮುನ್ನ ನನಗೆ ಅಂತ ಒಂದು ಜೀವನ ಇರಲಿಲ್ವಾ? ನಮಗೆ ವಿಚ್ಛೇದನ ಆಗಿ 14 ವರ್ಷ ಆಗಿದೆ. ಶ್ರೀರಾಮನಿಗೆ 14 ವರ್ಷ ವನವಾಸ ಮುಕ್ತಾಯ ಆಯ್ತು. ಆದರೆ ನನ್ನ ಮಾನಸಿಕ ವನವಾಸ ಯಾವಾಗ ಮುಗಿಯುತ್ತದೆ ಅರ್ಥವಾಗುತ್ತಿಲ್ಲ' ಎಂದು ಹೇಳಿದ್ದಾರೆ.

ಕಷ್ಟು ಪಟ್ಟು, ಹಠ ಮಾಡಿ ಇಷ್ಟೆಲ್ಲಾ ಸಾಧಿಸಿದ್ದೇನೆ!

'ನಾನು ವಿಚ್ಛೇದನ ಪಡೆದುಕೊಂಡ ಬಳಿಕ ಮಕ್ಕಳನ್ನು ಕರೆದುಕೊಂಡು ಅಮೆರಿಕ ಅಥವಾ ಬೇರೆ ದೇಶಕ್ಕೆ ಹೋಗಿ ಅಲ್ಲಿ ಇನ್ನೊಂದು ಮದುವೆಯಾಗಬಹುದಿತ್ತು. ನನಗೆ ಇದೆಲ್ಲಾ ಯಾಕೆ ಅಂತ ಅನಿಸಿದರೆ ಈ ರೀತಿ ಮಾಡೋದು ಸುಲಭ. ಆದರೆ ನನಗೆ ಯಾವಾಗ ಮದುವೆಯಾಗ ಬೇಕು ಅಂತ ಅನಿಸಿದರೆ ಆಗ ಮದುವೆ ಆಗುತ್ತೇನೆ. ನನಗೆ ಸಿನಿಮಾ ಎಂದರೆ ಇಷ್ಟ. ಸಿನಿಮಾ ಮಾಡಬೇಕು ಎಂಬುವುದು ನನ್ನ ಹಠ. ನಾನು ಸ್ವತಃ ಮರಾಠಿ ಸಿನಿಮಾ ಕೂಡ ಮಾಡಿದ್ದೀನಿ. ನಿರ್ದೇಶಕನಾಗಿ ನಾನು ಸಿನಿಮಾ ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇನೆ. ಎರಡು ಸಿನಿಮಾ ನಿರ್ಮಾಣ ಕೂಡ ಮಾಡಿದ್ದೀನಿ. ಇದು ಅಷ್ಟು ಸುಲಭದ ಕೆಲಸ ಅಲ್ಲ. ನನ್ನ ಮಾಜಿ ಪತಿಯ ಸಹಾಯ ಪಡೆದುಕೊಳ್ಳದೆ, ಸಿನಿಮಾ ಮಾಡಿದ್ದೀನಿ. ಹಲವು ಡ್ಯಾನ್ಸ್ ಶೋಗಳಿಗೆ ಜಡ್ಜ್ ಆಗಿ ಕೆಲಸ ಮಾಡಿದ್ದೀನಿ. ಹಲವು ಸಿನಿಮಾಗಳಲ್ಲಿ ನಟಿಸಿದ್ದೀನಿ. ಇದೆಲ್ಲಾ ನನಗೆ ಏಕೆ ಅಂತ ಅಂದುಕೊಳ್ಳದೆ ಫೈಟ್ ಮಾಡಿ ಜೀವನ ರೂಪಿಸಿಕೊಂಡಿದ್ದೀನಿ' ಎಂದು ರೇಣು ದೇಸಾಯಿ ಹೇಳಿದ್ದಾರೆ.

ನಿಮ್ಮನ್ನು ತಡೆಯಲು ನನ್ನಿಂದ ಸಾಧ್ಯವಿಲ್ಲ!

ಮಾಜಿ ಪತಿಯ ಅಭಿಮಾನಿಗಳು, ನನ್ನನ್ನು ಅತ್ತಿಗೆ ಎಂದು ಕರೆಯುತ್ತಾರೆ. ಆದರೆ ನಾನು ಈಗ ನಿಮ್ಮ ಅತ್ತಿಗೆ ಅಲ್ಲ. ಯಾರನ್ನಾದರೂ ಮದುವೆ ಮಾಡಿಕೊಂಡರೆ ಮಾತ್ರ ಈ ರೀತಿ ಕರೆಯುತ್ತಾರೆ. ನನ್ನನ್ನು ಅಕ್ಕ ಅಥವಾ ಅಮ್ಮ ಅಂತ ಕರೆದರೆ ಖುಷಿ ಆಗುತ್ತದೆ. ಏಕೆಂದರೆ ನೀವು ಯಾರೇ ಆದರೂ ನನ್ನನ್ನು ಅಮ್ಮ, ಅಕ್ಕ ಎಂದು ಕರೆಯಬಹುದು. ಇದಕ್ಕೆ ಯಾವುದೇ ಪರಿಚಯ, ಸಂಬಂಧಗಳ ಅಗತ್ಯ ಇರೋದಿಲ್ಲ. ಆದರೆ ಅಭಿಮಾನಿಗಳಿಗೆ ಸೆಂಟಿಮೆಂಟ್ ಇದ್ದರೆ, ಅವರು ಹೇಗೆ ಕರೆಯಬೇಕು ಎಂದು ನಾನು ಹೇಳೋದಕ್ಕೆ ಆಗೋದಿಲ್ಲ. ಅವರಿಗೆ ಅವರ ಅಭಿಪ್ರಾಯ ಹೇಳುವ ಹಕ್ಕಿದೆ. ನಿಮ್ಮ ಮಾತನ್ನು ನಾನು ಕಂಟ್ರೋಲ್ ಮಾಡಲು ಆಗೋದಿಲ್ಲ. ಆದರೆ ನನ್ನನ್ನು ಅಮ್ಮ ಅಥವಾ ಸಹೋದರಿ ಅಂತ ಕರೆಯಬಹುದು. ನಾನು ಈಗ ಸಿಂಗಲ್ ಆಗಿದ್ದೇನೆ. ನಿಮಗೆ ಹೇಗೆ ಅನಿಸುತ್ತೋ ಅದೇ ರೀತಿ ಕರೆಯಿಸಿ, ನಿಮ್ಮನ್ನು ನಾನು ತಡೆಯಲು ಸಾಧ್ಯವಿಲ್ಲ ಎಂದು ನಟಿ ಹೇಳಿದ್ದಾರೆ.

ಇನ್ನು, ಸಾಮಾಜಿಕ ಜಾಲತಾಣದಲ್ಲಿ ಎದುರಾಗುವ ಟ್ರೋಲಿಂಗ್ ಕುರಿತು ಮಾತನಾಡಿರುವ ರೇಣು ದೇಸಾಯಿ, ಒಂದು ಎನ್‌ಜಿಒ ಸ್ಥಾಪಿಸಿ ಬೀದಿ ನಾಯಿಗಳ ರಕ್ಷಣೆ ಮಾಡಿದರೂ ಬೈಯುತ್ತಾರೆ. ಪಿಕೆ ಇಲ್ಲ ಎಂದರೆ ನಿನ್ನ ಜೀವನಕ್ಕೆ ಅರ್ಥವೇ ಇಲ್ಲ ಎಂದು ಕೆಲವು ಟ್ರೋಲ್ ಮಾಡುತ್ತಾರೆ. ನನ್ನ ಮಕ್ಕಳು ತಪ್ಪು ಮಾಡಿದರೆ ನನ್ನನ್ನೇ ದೂಷಣೆ ಮಾಡುತ್ತಾರೆ. ಆದರೆ ಮಕ್ಕಳು ಉತ್ತಮವಾಗಿ ಒಳ್ಳೆಯ ಕೆಲಸ ಮಾಡಿದರೆ, ರೇಣು ಉತ್ತಮವಾಗಿ ಮಕ್ಕಳನ್ನು ಬೆಳೆಸಿದ್ದಾರೆ ಎಂದು ಯಾರು ಸಣ್ಣ ಮೆಚ್ಚುಗೆ ತೋರಿಸುವುದಿಲ್ಲ ಎಂದು ಅವರು ಬೇಸರ ಹೊರಹಾಕಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Matrubhumi trailer: ಭಾರತೀಯ ಯೋಧನಾಗಿ ಸಲ್ಮಾನ್ ಬೆಂಕಿ ನಟನೆ! ಬಿಡುಗಡೆ ಯಾವಾಗ?
Ramayana Collection: ದಾಖಲೆಗಳ ಮೇಲೆ ದಾಖಲೆ ಬರೆದ 'ರಾಮಾಯಣ'; 800 ಕೋಟಿಗೂ ಹೆಚ್ಚು ಗಳಿಸಿ ನಾಗಾಲೋಟ!