ಚಿರಯೌವ್ವನೆ ಎಂದೇ ಈಗಲೂ ಕರೆಸಿಕೊಳ್ಳುವ ರೇಖಾ, ಬಾಲಿವುಡ್‌ನಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮೆರೆದವರು. ರೇಖಾ ಹಾಗು ಬಿಗ್ ಬಿ ಅಮಿತಾಭ್ ಬಚ್ಚನ್ ಜೋಡಿಯ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.
ದಕ್ಷಿಣ ಭಾರತದಿಂದ ಬಾಲಿವುಡ್‌ಗೆ ಹೋಗಿ ಯಶಸಸ್ಸು ಪಡೆದವರಲ್ಲಿ ನಟಿ ರೇಖಾ (Actress Rekha) ಕೂಡ ಒಬ್ಬರು. ಅವರು ತೆಲುಗಿನ ಖ್ಯಾತ ನಟ ಜೆಮಿನಿ ಗಣೇಶನ್ ಅವರ ಮಗಳು. ಜೆಮಿನಿ ಗಣೇಶನ್ ಅವರಿಗೆ ಒಬ್ಬರೇ ಹೆಂಡತಿಯಲ್ಲ, ಹೀಗಾಗಿ ನಿಜ ಹೇಳಬೇಕು ಎಂದರೆ ನಟಿ ರೇಖಾ ಅವರು ಪುಷ್ಪವಲ್ಲಿ ಮಗಳು. ಅಂದರೆ, ಜೆಮಿನಿ ಗಣೇಶನ್-ಪುಷ್ಪವಲ್ಲಿ ಮಗಳು. ಜೆಮನಿ ಗಣೇಶ್ ಅವರಿಗೆ ಪುಷ್ವವಲ್ಲಿ ಮೇಲೆ ಪ್ರೀತಿ ಕಡಿಮೆಯಾಗುತ್ತಿದ್ದಂತೆ ಚಿಕ್ಕ ಹುಡುಗಿ ರೇಖಾಗೆ ಮನೆಯಲ್ಲಿ ಯಾವುದೇ ಸವಲತ್ತು ಸಿಗಲಿಲ್ಲ. ಹೀಗಾಗಿ ಆಕೆ ಸೂಕ್ತ ಶಿಕ್ಷಣವನ್ನೂ ಪಡೆಯಲು ಸಾಧ್ಯವಿಲ್ಲದೇ ಹೋಯಿತು ಎನ್ನಲಾಗಿದೆ.
ನಟಿ ರೇಖಾ, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು. ಜೆಮಿನಿ ಗಣೇಶನ್ ಮಗಳು ಎಂಬ ಬೋರ್ಡ್ ಇದ್ದರೂ ಅವರಿಗೆ ಅದು ಸಹಾಯ ಮಾಡಲಿಲ್ಲ. ಮೇಲಾಗಿ ರೇಖಾ ಬಣ್ಣ ಕಪ್ಪು. ಹೀಗಾಗಿ ಸಹಜವಾಗಿಯೇ ನಟಿ ರೇಖಾ ಕೆರಿಯರ್ ಶುರುವಿನಲ್ಲಿ ಬಹಳಷ್ಟು ಕಷ್ಟ ಪಡಬೇಕಾಯಿತು. ಆದರೆ ಛಲ ಬಿಡದ ರೇಖಾ ಕೊನೆಗೂ ನಟಿಯಾಗಿ ಮೆರೆಯತೊಡಗಿದರು. ತೆಲುಗು ಚಿತ್ರರಂಗದಿಂದ ಬಾಲಿವುಡ್ ಸಿನಿರಂಗಕ್ಕೆ ಹಾರಿ ಅಲ್ಲೂ ಕೂಡ ಯಶಸ್ಸು ಪಡೆದರು. ರೇಖಾಗಿದ್ದ ಪ್ಲಸ್ ಪಾಯಿಂಟ್ ಎಂದರೆ, ಪ್ರತಿಭೆ ಜೊತೆಗೆ ಅವರಿಗೆ ವಯಸ್ಸು ಆಗಿದ್ದೇ ಗೊತ್ತಾಗುತ್ತಿರಲಿಲ್ಲ.
ನಟ ದರ್ಶನ್ ಕಳುಹಿಸಿದ್ದ ಕಲ್ಲುಗಳ ಹಣವನ್ನು ಅರಣ್ಯ ಇಲಾಖೆ ವಾಪಸ್ ಮಾಡಿದ್ಯಾ?
ಚಿರಯೌವ್ವನೆ ಎಂದೇ ಈಗಲೂ ಕರೆಸಿಕೊಳ್ಳುವ ರೇಖಾ, ಬಾಲಿವುಡ್‌ನಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮೆರೆದವರು. ರೇಖಾ ಹಾಗು ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಜೋಡಿಯ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ನಟ ಅಮಿತಾಭ್ ವ್ಯಕ್ತಿತ್ವಕ್ಕೆ ಮನಸೋತಿದ್ದ ನಟಿ ರೇಖಾ, ಅವರನ್ನು ಪ್ರೀತಿಸತೊಡಗಿದ್ದರು ಎನ್ನಲಾಗಿದೆ. ಆದರೆ, ಅಮಿತಾಭ್ ನಚ್ಚನ್ ಜಯಾಬಚ್ಚನ್ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಪಿಗ್ಗಿ ಮನೆಹಾಳಿ, ಶಾರುಖ್ ತಲೆ ಕೆಡಿಸಿದ್ದಾಳೆ, ಉದ್ಧಾರವಾಗಲ್ಲ ಅಂದಿದ್ರು ಗೌರಿ ಖಾನ್!
ಆಮೇಲೆ ನಟಿ ರೇಖಾ ಅಮಿತಾಭ್ ಬಚ್ಚನ್ ನೆನಪಿನಲ್ಲೇ ಮದುವೆಯಾಗದೇ ಹಾಗೇ ಉಳಿದಿದ್ದಾರೆ, ಇಂದಿಗು ರೇಖಾ ಅಮಿತಾಭ್ ಹೆಸರು ಹೇಳಿಕೊಂಡೇ ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಆದರೆ, ಇದು ಸುಳ್ಳು. ನಟಿ ರೇಖಾ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಳ್ಳುತ್ತಿಲ್ಲ ಅಷ್ಟೇ. ಎಲ್ಲಾ ಮಾಧ್ಯಮಗಳಿಂದ ಆ ವಿಷಯವನ್ನು ರೇಖಾ ಮುಚ್ಚಿಟ್ಟಿದ್ದಾರೆ. ಅವರಿಗೆ ಮದುವೆಯಾಗಿದೆ. ಅವರೇನು ಇನ್ನೂ
ಅಮಿತಾಭ್ ಬಚ್ಚನ್ ನೆನಪಿನಲ್ಲಿ ಕೊರಗುತ್ತಿಲ್ಲ ಎನ್ನುತ್ತಿದ್ದಾರೆ. ಆದರೆ ಅಸಲಿ ವಿಷಯ ಏನೆಂಬುದು ಸ್ವತಃ ರೇಖಾ ಬಾಯಿಬಿಡುಬೇಕು ಅಷ್ಟೇ!
ಪ್ಯಾಂಟ್ ಬಿಚ್ಚಿರುವಾಗಲೇ ಮೇಕಪ್ ವ್ಯಾನ್‌ಗೆ ಪರಿಣೀತಿ ಚೋಪ್ರಾ ಬರ್ತಾರೆ; ಹೀಗಂದ್ರಾ ರಣವೀರ್ ಸಿಂಗ್ ?