ಥು ಮುಖ ದಪ್ಪಗಿದೆ; ಮದುವೆ ದಿನವೇ ಬಾಡಿ ಶೇಮಿಂಗ್‌ಗೆ ಒಳಗಾದ ಮಂಜಿಮಾ ಮೋಹನ್

By Vaishnavi ChandrashekarFirst Published Dec 1, 2022, 11:03 AM IST
Highlights

ಮದುವೆಗೆ ಬಂದವರು ಆಶೀರ್ವಾದ ಮಾಡದೆ ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ಬಾಡಿ ಶೇಮಿಂಗ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ನಟಿ....

ಅಚ್ಚಂ ಎನ್ನಬತ್ತು ಮದಮಾಯದ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಮಂಜಿಮಾ ಮೋಹನ್‌ ಕೆಲವು ದಿನಗಳ ಹಿಂದೆ ಗೌತಮ್ ಕಾರ್ತಿಕ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರು. ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು, ನವ ಜೋಡಿಗೆ ವಿಶ್ ಮಾಡುವುದಲ್ಲದೆ ಬಾಡಿ ಶೇಮಿಂಗ್ ಕೂಡ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಮಂಜಿಮಾ ಬೇಸರ ವ್ಯಕ್ತ ಪಡಿಸಿದ್ದಾರೆ. 

ಮಂಜಿಮಾ ಮೋಹನ್ ಪದೇ ಪದೇ ಬಾಡಿ ಶೇಮಿಂಗ್‌ಗೆ ಒಳಗಾಗಿರುವ ನಟಿ. ಹೀಗಾಗಿ ಏನೇ ಕಾಮೆಂಟ್‌ಗಳು ಬಂದ್ದರೂ ತುಂಬಾನೇ ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ ಆದರೆ ಮದುವೆ ದಿನವೂ ಇದೇ ಮಾತನಾಡುತ್ತಿದ್ದ ಕಾರಣ ಕೊಂಚ ಶಾಕ್ ಆಗಿದ್ದಾರೆ. 'ಯಾವ ಟ್ರೋಲ್‌ಗಳು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ಮಂಜಿಮಾ ಇಂಡಿಯಾ ಟುಡೇ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಬಾಡಿ ಶೇಮಿಂಗ್: 

'ಯಾರೂ ನಂಬುವುದಿಲ್ಲ ನನ್ನ ಮದುವೆ ದಿನವೂ ಜನರು ನನಗೆ ಬಾಡಿ ಶೇಮಿಂಗ್ ಮಾಡಿದ್ದಾರೆ. ಮುಂಚೆ ಚಿಂತಿಸುತ್ತಿದ್ದೆ ಯೋಚನೆ ಮಾಡುತ್ತಿದ್ದೆ ಆದರೆ ಈಗ ನನ್ನ ದೇಹದ ಜೊತೆ ನನಗೆ ಕಂಫರ್ಟ್‌ ಕ್ರಿಯೇಟ್ ಆಗಿದೆ...ಯಾವಾಗ ಬೇಕಿದ್ದರೂ ನಾನು ಸಣ್ಣ ಆಗಬಹುದು ಹೀಗಾಗಿ ಇದರ ಬಗ್ಗೆ ಕೇರ್ ಮಾಡುವುದಿಲ್ಲ. ನನ್ನ ಫಿಟ್ನೆಸ್ ಜರ್ನಿ ಶುರುವಾಗಿದೆ ಅದರ ಬಗ್ಗೆ ತುಂಬಾನೇ ಖುಷಿ ಇದೆ. ವೃತ್ತಿ ಜೀವನದಲ್ಲಿ ಪಾತ್ರಕ್ಕೆ ಅಗತ್ಯವಿದ್ದರೆ ಖಂಡಿತ ನಾನು ದೇಹದ ಕೂತ ಇಳಿಸಿಕೊಳ್ಳುವೆ ಆದರೆ ಇದೆಲ್ಲಾ ಹೇಗೆ ಬೇರೆ ಅವರಿಗೆ ತೊಂದರೆ ಕೊಡುತ್ತಿದೆ ನನಗೆ ಗೊತ್ತಿಲ್ಲ' ಎಂದು ಮಂಜಿಮಾ ಹೇಳಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಟಿಪ್ಸ್‌:

ಕೆಲವು ತಿಂಗಳುಗಳ ಹಿಂದೆ ಬಾಡಿ ಶೇಮಿಂಗ್‌ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಂಜಿಮಾ ಧ್ವನಿ ಎತ್ತಿದ್ದರು. ಪದೇ ಪದೇ ಬಾಡಿ ಶೇಮಿಂಗ್‌ಗೆ ಒಳಗಾಗುವವರಿಗೆ ಏನೆಂದು ಟಿಪ್ಸ್‌ ಕೊಡುತ್ತೀರಿ ಎಂದು ತಮ್ಮ ಫಾಲೋವರ್ಸ್‌ಗೆ ಪ್ರಶ್ನೆ ಕೇಳಿದ್ದರು. ಎಲ್ಲರ ಉತ್ತರ ಪಡೆದ ನಂತರ ಮಂಜಿಮಾ 'ನಾನು ಸುಂದರವಾಗಿರುವೆ, ದೇವರು ಸೃಷ್ಟಿಸಿರುವ ಪ್ರತಿಯೊಬ್ಬರು ಸುಂದರವಾಗಿದ್ದಾರೆ. ಯಾರು ಯಾವ ಬಾಡಿ ಸೈಜ್‌ ಇದ್ದರೂ ಸಮಸ್ಯೆ ಇಲ್ಲ ಪ್ರತಿಯೊಬ್ಬರು ಸುಂದರವಾಗಿದ್ದಾರೆ' ಎಂದು ಬರೆದುಕೊಂಡಿದ್ದರು.

ದಪ್ಪಗಿದ್ದೀಯಾ ತಾಯಿ ಪಾತ್ರಕ್ಕೆ ಲಾಯಕ್ಕು: ಬಾಡಿ ಶೇಮಿಂಗ್‌ ಬಗ್ಗೆ Aparna Balamurali ಬೇಸರ

ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಂಜಿಮಾಗೆ ಅಭಿಮಾನಿಯೊಬ್ಬಳು ಪ್ರಶ್ನೆ ಕೇಳುತ್ತಾರೆ 'ಬಾಡಿ ಶೇಮಿಂಗ್‌ ಆದಾಗ ಹೇಗೆ ರಿಯಾಕ್ಟ್ ಮಾಡುತ್ತೀರಾ ಹೇಗೆ ಹ್ಯಾಂಡಲ್‌ ಮಾಡುತ್ತೀರಾ' ಎಂದು ಆಗ ಮಂಜಿಮಾ 'ಬಾಡಿ ಶೇಮಿಂಗ್‌ ಮುಖ್ಯ ನಾನು ಆರೋಗ್ಯವಾಗಿದ್ದೀವಿ ಅನ್ನೋದು ಮುಖ್ಯವಾಗುತ್ತದೆ. ಸಣ್ಣಗಿದ್ದರೆ ಮಾತ್ರ ನಾವು ಆರೋಗ್ಯವಾಗಿದ್ದೀವಿ ಅಂತಲ್ಲ. ಸಣ್ಣಗಾದರೆ ಅಯ್ಯೋ ಆರೋಗ್ಯ ಸರಿ ಇಲ್ಲ ಹುಷಾರ್ ಇಲ್ವ ಎಂದು ಪ್ರಶ್ನೆ ಮಾಡುತ್ತಾರೆ. ಅದೇ ದಪ್ಪ ಆದರೆ ಓ ನೀನು ಡುಮ್ಮಿ ಎನ್ನುತ್ತಾರೆ. ಏನೇ ಆದರೂ ಜನರು ಬಾಡಿ ಶೇಮಿಂಗ್ ಮಾಡುವುದನ್ನು ನಿಲ್ಲಿಸುವುದಿಲ್ಲ. ನೀವು ಆರೋಗ್ಯವಾಗಿದ್ದರೆ ನಿಮ್ಮ ಮನಸ್ಸು ಖುಷಿಯಾಗಿದ್ದರೆ ಅದೇ ಬೇಸ್ಟ್‌ ಜೀವನ ಜನರು ಕಾಮೆಂಟ್ ಮುಖ್ಯವಲ್ಲ' ಎಂದು ಮಂಜಿಮಾ ಉತ್ತರಿಸಿದ್ದರು.

click me!